ವಿದ್ಯಾರ್ಥಿಗಳು ಭಾಷಾ ಕೌಶಲ್ಯ ಹೆಚ್ಚಿಸಿಕೊಳ್ಳಲು ಗ್ರಂಥಾಲಯಗಳು ಸಹಕಾರಿ: ಶಾಸಕ ಕೋಳಿವಾಡ
Libraries are helpful in improving students' language skills: MLA Koliwada
ರಾಣೇಬೆನ್ನೂರು 27: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಭಾಷಾ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು, ಇವುಗಳನ್ನು ಬೆಳೆಸಿಕೊಳ್ಳಲು ಗ್ರಂಥಾಲಯಗಳು ಬಹಳಷ್ಟು ಸಹಕಾರಿಯಾಗುತ್ತವೆ, ಆ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉತ್ತಮ ಜೀವನ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಾಸಕ ಪ್ರಕಾಶ್ ಕೆ. ಕೋಳಿವಾಡ ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಮಾರುತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ 17 ರಲ್ಲಿ ಏರಿ್ಡಸಿದ್ದ ಶಾಲಾ ಗ್ರಂಥಾಲಯ ಉದ್ಘಾಟನೆ , ಸ್ಮಾರ್ಟ್ ಟಿ ವಿ ಹಸ್ತಾಂತರ , ಇನ್ನರ್ ವೀಲ್ ಕ್ಲಬ್ ನಿಂದ ಹ್ಯಾಪಿ ಸ್ಕೂಲ್ ಅನಾವರಣಗೋಳಿಸಿ ಮಾತನಾಡಿದರು. ಶಾಸಕ ಕೋಳಿವಾಡ ಅವರು ಶಾಲಿಗೆ ಶಾಲೆಗೆ ಡಿಜಿಟಲ್ ಲೈಬ್ರರಿ ಕೊಡುವುದಾಗಿ ಭರವಸೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ್ ಸುಂದರ್ ಅಡಿಗ, ಕ್ಷೇತ್ರ ಸಮನ್ವಯಾಧಿಕಾರಿ ಮಂಜ ನಾಯಕ, ಇನ್ನರ್ ವೀಲ್ ಕ್ಲಬ್ಬಿನ ಜಿಲ್ಲಾ ಖಜಾಂಚಿ ವಿರಾಜ್ ಕೋಟಕ್ ಅವರು ಮಾತನಾಡಿದರು.
ವೇದಿಕೆಯಲ್ಲಿನಗರಸಭಾ ಸದಸ್ಯ ಪುಟ್ಟಪ್ಪ ಜಿ. ಮರಿಯಮ್ಮನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಕನ್ನಡ ಜಾಗೃತಿಯ ಮಂಜುನಾಥ ದುಗ್ಗತ್ತಿ, ಎಸ್ ಡಿ ಎಂ ಸಿ ಅಧ್ಯಕ್ಷ ಆನಂದ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಉಮಾ ಗೌಡರ್ ,ಸದಸ್ಯರಾದ ಪದ್ಮಶ್ರೀ ಕೋಳೂರು, ಇನ್ನರ್ ವೀಲ್ ಸಂಸ್ಥೆಯ ಪದಾಧಿಕಾರಿಗಳಾದ, ಭಾರತಿ ಜಂಬಗಿ , ಸಂಜನಾ ಕುರುವತ್ತಿ , ಸುಮಾ ಹೊಟ್ಟಿಗೌಡ್ರು , ನಿರ್ಮಲಾ ಪಾಟೀಲ, ಶಿಕ್ಷಕರಾದ ಆರ್. ಬಿ. ಚಲವಾದಿ , ವನಜಾಕ್ಷಿ ಪಾಟೀಲ್ , ಪ್ರತಿಭಾ ಮೈಲಾರಕಳ್ಳಿಮಠ. ಶ್ವೇತಾ ಎಚ್.ವಿ ,ರಂಜನಾ ಗಡ್ಡಿ, ನವೀನ ಓಲೇಕಾರ, ಮತ್ತಿತರರು ಉಪಸ್ಥಿತರಿದ್ದರು. ಸವಿತಾ ಸಂಗಡಿಗರು ಪ್ರಾರ್ಥಿಸಿದರು.ಇನ್ನರ್ ವೀಲ್ ಅಧ್ಯಕ್ಷ ಡಾ, ದೀಪಾಲಿ ಪುನೀತ್ ಸ್ವಾಗತಿಸಿ,ನೀತಾ ಮಿರ್ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮುಖ್ಯೋಪಾಧ್ಯಯ ಬಿ. ಪಿ. ಶಿಡೇನೂರ ನಿರೂಪಿಸಿ ಕಾರ್ಯದರ್ಶಿ ಪುಷ್ಪಾ ಮಾಳಗಿ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 