ಕನಿಷ್ಠ ವೇತನ ಜಾರಿಗಾಗಿ ವಸತಿ ನಿಲಯ ಕಾರ್ಮಿಕರಿಂದ ಪತ್ರ ಚಳುವಳಿ

ಕನಿಷ್ಠ ವೇತನ ಜಾರಿಗಾಗಿ ವಸತಿ ನಿಲಯ ಕಾರ್ಮಿಕರಿಂದ ಪತ್ರ ಚಳುವಳಿ Letter campaign by hostel workers for the implementation of minimum wages


ದೇವರಹಿಪ್ಪರಗಿ 24 : ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನವನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಪಟ್ಟಣದ ಪೋಸ್ಟ್‌ ಕಚೇರಿ ಆವರಣದಲ್ಲಿ ಮುಖ್ಯಮಂತ್ರಿಗಳಿಗೆ ವಸತಿ ನಿಲಯ ಕಾರ್ಮಿಕರು ಪತ್ರ ಚಳುವಳಿ ನಡೆಸಿದರು.ಸಂದರ್ಭದಲ್ಲಿ  ವಸತಿ ನಿಲಯ ಕಾರ್ಮಿಕ ಸಂಘಟನೆಗಳ ಜಿಲ್ಲಾ ಅಧ್ಯಕ್ಷೆ ಕಾಶಿಬಾಯಿ ಜನಗೊಂಡ, ತಾಲೂಕು ಅಧ್ಯಕ್ಷರಾದ ಸಂಜೀವಕುಮಾರ, ರೈತ ಮುಖಂಡ ಅಜೀಜ ಯಲಗಾರ ಅವರು ಮಾತನಾಡಿ,ವಸತಿ ನಿಲಯಗಳ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಒಳಗೊಂಡ ಪತ್ರಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಿ, ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಸಮರ​‍್ಕ ವೇತನ ಹಾಗೂ ಕಾರ್ಮಿಕ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕನಿಷ್ಠ ವೇತನ ಜಾರಿಗೊಳಿಸುವುದು, ಬಾಕಿ ವೇತನ ಪಾವತಿಸುವುದು ಹಾಗೂ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಸಿದ್ದಯ್ಯ ಸುಮಿತ್ರ ಗುಳಿ, ಜಯಶ್ರೀ, ಬೇಬಿ ಜ್ಯೋತಿ ಲಕ್ಷ್ಮಿ, ಸುಮಿತ್ರ ಸೇರಿದಂತೆ ಹಲವಾರು ಜನ ಮುಖಂಡರು, ಕಾರ್ಮಿಕರು ಉಪಸ್ಥಿತರಿದ್ದರು.