ಕವಿ - ಕವಿತೆ ಸ್ವಾಭಿಮಾನದ ಒರತೆಯಾಗಿರಲಿ: ಅಶೋಕ ಹಂಚಲಿ
Let the poet and the poem be a fountainhead of self-respect: Ashok Hanchali
ತಾಳಿಕೋಟಿ, ಸೆ.22: ಕವಿತೆ ವಾಸ್ತವದ ಪ್ರತಿಬಿಂಬವಾಗಿದ್ದು, ಸಮಾಜದ ಅಂಕುಡೊಂಕುಗಳಿಗೆ ಚಾಟಿಯಾಗಿ, ರಾಜಕೀಯದ ವಿಡಂಬನೆಯನ್ನು ಬಿಂಬಿಸಬೇಕು. ಕವಿ ಮತ್ತು ಕವಿತೆ ಸದಾ ಸ್ವಾಭಿಮಾನದ ಒರತೆಯಾಗಿರಬೇಕು ಎಂದು ಚಿಂತಕ ಹಾಗೂ ವ್ಯಕ್ತಿತ್ವ ವಿಕಸನದ ವಾಗ್ಮಿ ಅಶೋಕ ಹಂಚಲಿ ಹೇಳಿದರು. ತಾಳಿಕೋಟೆಯ ಕನ್ನಡ ಸಂಘ ಹಾಗೂ ಸಹೃದಯಿ ಶಿಕ್ಷಕ ಬಳಗದ ಸಂಯುಕ್ತಾಶ್ರಯದಲ್ಲಿ ಭಾನುವಾರ ಪಟ್ಟಣದ ಹೆಮರಡ್ಡಿ ಮಲ್ಲಮ್ಮತಾಯಿ ದೇವಸ್ಥಾನದ ಸಭಾಭವನದಲ್ಲಿ ಕವಿ, ಸಾಹಿತಿ ಆರಿ್ಬ. ದಮ್ಮೂರಮಠ ಅವರ ದ್ವಿತೀಯ ಕವನ ಸಂಕಲನ ‘ಬಿರಿದ ಮೊಗ್ಗು’ ಲೋಕಾರೆ್ಣ ಸಮಾರಂಭದಲ್ಲಿ ಅವರು ಕೃತಿ ಕುರಿತು ಮಾತನಾಡಿದರು.
ಒಂದು ಕವಿತೆ ಬದುಕಿನುದ್ದಕ್ಕೂ ಕಾಡುವ, ಕಾಪಾಡುವ ಹಾಗೂ ಹಾಡುವ ಶಕ್ತಿಯನ್ನು ಹೊಂದಿದೆ. ಹೊಗಳಿ ಹಾಡುವ ಆಸ್ಥಾನಿಕ ಕವಿತ್ವಕ್ಕಿಂತ ತಪ್ಪಿದಾಗ ತಿದ್ದಿ, ದಾರಿ ತಪ್ಪಿದಾಗ ತಿವಿದು ತೋರಿಸುವ ಕವಿತೆ ಬರಬೇಕು. ಕುವೆಂಪು ಹಾಗೂ ಬೇಂದ್ರೆಯವರ ಹಲವು ಕವಿತೆಗಳು ನೇರ ಹಾಗೂ ದಿಟ್ಟ ಪ್ರತ್ಯುತ್ತರಗಳಾಗಿದ್ದವು ಎಂದು ಹೇಳಿದರು. ಗುಂಡುರಾವ್ ಧನಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶಾಲಾಕ್ಷಿ ಬಡಿಗೇರ ಪ್ರಾರ್ಥಿಸಿದರು. ಸಾಹೇಬಗೌಡ ಬಿರಾದಾರ ಸ್ವಾಗತಿಸಿದರು. ವಿದ್ಯಾಧರ ಯಾತಗಿರಿ ವಂದಿಸಿದರು. ಅಪ್ಪಾಸಾಹೇಬ ಮೂಲಿಮನಿ ಹಾಗೂ ಚಂದ್ರಕಲಾ ಸುರಪುರ ನಿರೂಪಿಸಿದರು. ಸಾಹಿತ್ಯಾಸಕ್ತರು, ಶಿಕ್ಷಕರು ಹಾಗೂ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 