ಹೋರಾಟದ ಬದುಕು ನಮಗೆ ಆದರ್ಶವಾಗಲಿ
Let the life of struggle be our ideal.
ಲೋಕದರ್ಶನ ವರದಿ
ಹಾವೇರಿ 30 : ಶೋಷಿತರ ಮನೆ ಮನೆಗಳಲ್ಲಿ ಹೋರಾಟದ ಹಣತೆಯನ್ನು ಹಚ್ಚಿ,ಶೋಷಿತರ ಧ್ವನಿಯಾಗಿ ಹಾಗೂ ಸ್ಪೂರ್ತಿಯಾಗಿ ಕೆಲಸ ಮಾಡಲು ಪ್ರೊಽಽ ಬಿ.ಕೃಷ್ಣಪ್ಪ ಅವರು ನಿರಂತರವಾಗಿ ಹಗಲಿರುಳು ಶ್ರಮಿಸಿದ್ದಾರೆ.ಅವರ ಹೋರಾಟದ ಬದುಕು ನಮಗೆ ಆದರ್ಶವಾಗಲಿ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಅವರು ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ವತಿಯಿಂದ ಆಯೋಜಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಸಂಸ್ಥಾಪಕರಾದ ಪ್ರೊಽಽ ಬಿ.ಕೃಷ್ಣಪ್ಪ ಅವರ 29ನೇ ಪರಿನಿಬ್ಬಾಣ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರೊಽಽ ಬಿ.ಕೃಷ್ಣಪ್ಪ ಅವರನ್ನು ದಲಿತ ಚಳುವಳಿಯ ಪಿತಾಮಹ,ರಾಜ್ಯದ ಎರಡನೇ ಅಂಬೇಡ್ಕರ್ ಎಂದು ಹೇಳಬಹುದು.ಅವರು ನಮಗೆ ನೀಡಿದ ಕೊಡುಗೆ ಅಪಾರವಾಗಿದೆ. ಪ್ರೊಽಽ ಬಿ.ಕೃಷ್ಣಪ್ಪ ಅವರ ಬದುಕಿನ ಆದರ್ಶಗಳನ್ನು ಪಾಲಿಸುವ ಮೂಲಕ ಅವರ ಹೋರಾಟದ ಹೆಜ್ಜೆಗಳನ್ನು ಮುನ್ನಡಿಸೋಣ. ಅವರು ಹಚ್ಚಿದ ಶೋಷಣೆಯ ವಿರುದ್ಧದ ಹೋರಾಟದ ಹಣತೆಯನ್ನು ಎಂದಿಗೂ ಹಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರೊಽಽ ಬಿ.ಕೃಷ್ಣಪ್ಪ ಅವರು ನಮಗಾಗಿ ಎಲ್ಲವನ್ನು ತ್ಯಾಗ ಮಾಡಿದ್ದಾರೆ ಅವರು ನಮಗೆ ಸದಾ ಸ್ಪೂರ್ತಿದಾಯಕವಾಗಲಿದ್ದಾರೆ ಎಂದು ಪ್ರೊಽಽ ಬಿ.ಕೃಷ್ಣಪ್ಪ ಅವರ ಜೀವನದ ಕುರಿತು ಉಡಚಪ್ಪ ಮಾಳಗಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಡಿಎಸ್ ಎಸ್ ಸಂಚಾಲಕರಾದ ಮಾಲತೇಶ ಯಲ್ಲಾಪುರ,ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷರಾದ ಮಂಜಪ್ಪ ಮರೋಳ,ಅಲೆಮಾರಿ ಸಮಾಜದ ಅಧ್ಯಕ್ಷರಾದ ಶೆಟ್ಟಿ ವಿಭೂತಿ,ಬಿಎಸ್ಪಿ ಪಕ್ಷದ ಅಧ್ಯಕ್ಷರಾದ ಎಂ.ಕೆ ಮಖಬೂಲ್,ಮುಖಂಡರಾದ ಸುಭಾಷ ಚವ್ಹಾಣ,ಸುರೇಶ ಛಲವಾದಿ,ಬಸವಣ್ಣೆಪ್ಪ ಅಳ್ಳಿಳ್ಳಿ,ಬಸವರಾಜ ಕಾಳೆ,ಹನಮಂತಪ್ಪ ಸಿ.ಡಿ, ಹನುಮಂತಪ್ಪ ಹೌಂಶಿ,ಮಹಾದೇವಪ್ಪ ಹರಿಜನ,ಪರಸಪ್ಪ ಹರಿಜನ,ಕೋಟೆಪ್ಪ ಹರಿಜನ,ಮಾಲತೇಶ ಬಜಳ್ಳಿ,ಅಣ್ಣಪ್ಪ ಹರಿಜನ,ಹನುಮಂತಪ್ಪ ಹರಿಜನ,ಸಂತೋಷ ಕನ್ನಮ್ಮನವರ,ಹುಲಿಗೆಪ್ಪ ಕಿಳ್ಳಿತ್ಯಾತರ ಸೇರಿದಂತೆ ಅನೇಕರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 