ಇಂದಿರಾ ಗಾಂಧಿ ದಿಟ್ಟತನದಂತೆ ಅಕ್ಕ ಪಡೆ ಕೆಲಸ ಮಾಡಲಿ - ಜ್ಯೋತಿ
Let the Akka Pade work like Indira Gandhi's courage - Jyoti
ಕೊಪ್ಪಳ 12: ರಾಜ್ಯ ಕಾಂಗ್ರೆಸ್ ಸರಕಾರದ ಮಹಿಳಾಪರ ಮತ್ತೊಂದು ಕಾರ್ಯಕ್ರಮವಾಗಿರುವ ಅಕ್ಕಪಡೆಯು ಇಂದಿರಾ ಗಾಂಧಿ ಅವರ ಆದರ್ಶ ಮತ್ತು ದಿಟ್ಟತನದಂತೆ ಕೆಲಸ ಮಾಡಲಿ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಮನವಿ ಮಾಡಿದರು.
ಅವರು ಇಲ್ಲಿನ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪೋಲಿಸ್ ಓಟಪೋಸ್ಟ್ ಹತ್ತಿರ ರಾಜ್ಯ ಕಾಂಗ್ರೆಸ್ ಸರಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಆರಂಬಿಸಿದ ಮಹಿಳೆಯರ ಸಂರಕ್ಷಣೆಯ ಮಹತ್ವಾಕಾಂಕ್ಷೆ ಕಾರ್ಯಕ್ರಮ ಅಕ್ಕಪಡೆ ಸಿಬ್ಬಂದಿಯನ್ನು ಗೌರವಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಕ ಸಬಲೀಕರಣ ಮಾಡಿದ ಹಾಗೆ ದೌರ್ಜನ್ಯ ಹಾಗೂ ಸಂಕಷ್ಟಕ್ಕೊಳಗಾಗುವ ಮಹಿಳೆಯರಿಗೆ ತುರ್ತು ಸಹಾಯ ಒದಗಿಸಲು ಅಕ್ಕ ಪಡೆ ಸದಾ ಸನ್ನದ್ಧವಾಗಿರುತ್ತದೆ, ಮಹಿಳೆಯರ ಸುರಕ್ಷತೆಗೆ ಅಗ್ರ ಆದ್ಯತೆಯಾಗಿದೆ. ಮಹಿಳೆಯರಿಗಾಗಿ ರಾಜ್ಯಾದ್ಯಂತ ಇರುವ ಸಹಾಯವಾಣಿಯ ಮೂಲಕ ತಲುಪಲು ಲಭ್ಯವಿರುತ್ತದೆ. ದೂರದ ಸ್ಥಳದಿಂದ ಕರೆ ಬಂದರೂ ತಕ್ಷಣದ ಸಹಾಯ ಒದಗಿಸಲಾಗುತ್ತದೆ.
ತಂಡವು ದೂರುಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲಿದ್ದು, ಗಂಭೀರ ಪ್ರಕರಣಗಳಲ್ಲಿ ಆರೋಪಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುತ್ತದೆ. ಅಕ್ಕಪಡೆಯ ಸದಸ್ಯರಿಗೆ ಹಿಂಸಾಚಾರ ಪ್ರಕರಣಗಳ ನಿರ್ವಹಣೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವುದು ಸೇರಿದಂತೆ ವಿಶೇಷ ತರಬೇತಿ ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ಅಕ್ಕ ಪಡೆ ಸಿಬ್ಬಂದಿ ಪೋಲಿಸ್ ಇಲಾಖೆಯ ಸಾವಿತ್ರಿ ಡಿ. ಮತ್ತು ಈರಣ್ಣ ತಾವರಗೇರಾ ಜೊತೆಗೆ ಹೋಮ್ ಗಾರ್ಡ್‌ಗಳಾದ ಯಲ್ಲಮ್ಮ ಎನ್. ಕೊಪ್ಪಳ, ನಾಗರತನ್ ಗಂಗಾವತಿ, ಭಾಗ್ಯ ಗಂಗಾವತಿ ಮತ್ತು ತಾಯೇರಾ ಬೇಗಂ ಅವರನ್ನು ಹೂಗುಚ್ಛ ನೀಡಿ ಸನ್ಮಾನಿಸಲಾಯಿತು. ಕೆಪಿಸಿಸಿ ಸದಸ್ಯರಾದ ಗಿರಿಜಾ ಸಂಗಟಿ, ಮುಖಂಡರಾದ ಕಿಶೋರಿ ಬೂದನೂರ್, ಜಯಶ್ರೀ ಕಂದಕೂರ್, ಕೆಡಿಪಿ ಸದಸ್ಯೆ ನಾಗರತ್ನ ಹುಲಿಗಿ, ರೇಷ್ಮಾ ಖಾಜಾವಲಿ, ಸುಮಂಗಲಾ ನಾಯಕ್, ಸೌಭಾಗ್ಯ ಗೊರವರ್, ಶರಣಮ್ಮ ಪೂಜಾರಿ, ಜಯಶ್ರೀ ಅರಕೇರಿ, ಶಿಲ್ಪಾ ಗುಡ್ಲಾನೂರ್, ಅನಿತಾ ಅಳ್ಳಮ್ಮನವರ, ಗ್ಯಾರೆಂಟಿ ಸಮಿತಿ ಸದಸ್ಯೆ ರೇಣುಕಮ್ಮ ಕಾರಟಗಿ, ಮುತ್ತಮ್ಮ ಕಾರಟಗಿ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 