ಯುವಜನರಲ್ಲಿ ರಾಷ್ಟ್ರ​‍್ರಜ್ಞೆ ಮೂಡಲಿ: ಡಾ. ರಾಜಶೇಖರ

ಯುವಜನರಲ್ಲಿ ರಾಷ್ಟ್ರ​‍್ರಜ್ಞೆ ಮೂಡಲಿ: ಡಾ. ರಾಜಶೇಖರ  Let national consciousness be instilled in the youth: Dr. Rajashekhara


ಬೆಳಗಾವಿ, ಆ. 29: ಇಂದಿನ ಯುವಜನತೆ ದೇಶವನ್ನು ಪ್ರೀತಿಸಿ, ರಾಷ್ಟ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ದುಡಿಯುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸಬೇಕು ಎಂದು ಖ್ಯಾತ ವೈದ್ಯ ಡಾ. ಎಚ್‌.ಬಿ. ರಾಜಶೇಖರ ಹೇಳಿದರು.  

ಲಿಂಗರಾಜ ಕಾಲೇಜಿನ ಕನ್ನಡ ವಿಭಾಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ‘ಹೊಸಗನ್ನಡ ಸಾಹಿತ್ಯದಲ್ಲಿ ರಾಷ್ಟ್ರೀಯ ಪ್ರಜ್ಞೆ’ ರಾಜ್ಯಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.  

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರಲ್ಲಿ ದೇಶಾಭಿಮಾನ ಮತ್ತು ‘ದೇಶ ಮೊದಲು’ ಎಂಬ ಭಾವನೆ ಬಲವಾಗಿತ್ತು. ಆದರೆ ಇಂದು ಜನರನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿರುವುದು ವಿಷಾದನೀಯ.   ಸಂಘರ್ಷಗಳನ್ನು ಬದಿಗಿಟ್ಟು ರಾಷ್ಟ್ರ ನಿರ್ಮಾಣಕ್ಕಾಗಿ ಎಲ್ಲರೂ ಒಗ್ಗೂಡಬೇಕು ಎಂದು ಕರೆ ನೀಡಿದರು.  

ಕುವೆಂಪು, ದ.ರಾ. ಬೇಂದ್ರೆ, ಡಿ.ಎಸ್‌. ಕರ್ಕಿ, ಎಸ್‌.ಡಿ. ಇಂಚಲ ಸೇರಿದಂತೆ ಅನೇಕ ಸಾಹಿತಿಗಳು ತಮ್ಮ ಕಾವ್ಯ ಮತ್ತು ಸಾಹಿತ್ಯದ ಮೂಲಕ ನಾಡು-ನುಡಿ ಹಾಗೂ ದೇಶಪ್ರೇಮದ ಭಾವನೆ ಬೆಳೆಸಿದ್ದಾರೆ. ಇಂತಹ ಸಾಹಿತ್ಯವನ್ನು ಯುವಜನತೆ ಓದಿ, ಅದರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.  

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಮಾತನಾಡಿ, ಬಂಗಾಳಿ ಸಾಹಿತ್ಯವು ಭಾರತದ ಆಧುನಿಕ ಸಾಹಿತ್ಯಕ್ಕೆ ಹೊಸ ದಿಕ್ಕು ನೀಡಿದ್ದು, ‘ಜನಗಣಮನ’ ಮತ್ತು ‘ವಂದೇ ಮಾತರಂ’ನಂತಹ ರಾಷ್ಟ್ರೀಯ ಭಾವನೆ ಮೂಡಿಸುವ ಗೀತೆಗಳು ಆ ಪರಂಪರೆಯಿಂದ ಬಂದಿವೆ ಎಂದರು. ಕನ್ನಡ ಸಾಹಿತ್ಯವೂ ಸಾಮಾಜಿಕ ಪರಿವರ್ತನೆ, ಸಮಾನತೆ, ಸ್ವಾತಂತ್ರ್ಯ, ರಾಷ್ಟ್ರೇ​‍್ರಮ ಹಾಗೂ ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸಿದೆ ಎಂದು ಹೇಳಿದರು.  

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಮಾತನಾಡಿ, ಪಂಪನಿಂದ ಆಧುನಿಕ ಕಾಲದವರೆಗೂ ಕನ್ನಡ ಸಾಹಿತ್ಯದಲ್ಲಿ ನಾಡು, ನುಡಿ, ನೆಲ ಮತ್ತು ದೇಶಪ್ರೇಮದ ಭಾವನೆ ನಿರಂತರವಾಗಿ ವ್ಯಕ್ತವಾಗಿದೆ. ಯುವಜನತೆ ಈ ಸಾಹಿತ್ಯ ಪರಂಪರೆಯನ್ನು ಅರಿಯುವುದು ಅಗತ್ಯ ಎಂದರು.  

ಪ್ರಾಚಾರ್ಯ ಡಾ. ಎಚ್‌.ಎಸ್‌. ಮೇಲಿನಮನಿ, ಡಾ. ನಿರ್ಮಲ ಬಟ್ಟಲ, ಎಚ್‌.ಆರ್‌. ಹರೀಶ ಹಾಗೂ ಡಾ. ಸಾಹುಕಾರ ಕಾಂಬಳೆ ಮಾತನಾಡಿದರು. ಡಾ. ಎಚ್‌.ಎಂ. ಚನ್ನಪ್ಪಗೋಳ ಸ್ವಾಗತಿಸಿದರು. ಡಾ. ವಿನಯ ನಂದಿಹಾಳ ವಂದಿಸಿದರು. ಅಕ್ಷಯ ಪಾಟೀಲ ಹಾಗೂ ಶಬರಿ ಪಾಟೀಲ ನಿರೂಪಿಸಿದರು. ಕನ್ನಡ ಸಾಹಿತ್ಯಾಸಕ್ತರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.