ಆರೋಗ್ಯಕ್ಕಾಗಿ ಒಟ್ಟಿಗೆ ವಿಜ್ಞಾನದೊಂದಿಗೆ ನಿಲ್ಲೋಣ : ಶಿಕ್ಷಣಾಧಿಕಾರಿಗಳಾದ ಶ್ರೀ ಶಿವಾನಂದ ಪೂಜಾರಿ
Let's stand together with science for health: Education Officer Shri Shivananda Poojary
ಲೋಕದರ್ಶನ ವರದಿ
ಕೊಪ್ಪಳ 07: ಪ್ರತಿ ವರ್ಷ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಏಪ್ರೀಲ್ 7ರಂದು ಆಚರಿಸಲಾಗುತ್ತದೆ. “ಆರೋಗ್ಯಕ್ಕಾಗಿ ಒಟ್ಟಿಗೆ ವಿಜ್ಞಾನದೊಂದಿಗೆ ನಿಲ್ಲೋಣ” ಎಂಬುದು ಈ ವರ್ಷದ ಘೋಷ್ಯ ವಾಕ್ಯವಾಗಿದೆ. ಇದರ ಉದ್ದೇಶ ಜಾಗತಿಕ ಆರೋಗ್ಯ ಸಮಸ್ಯೆಗಳನ್ನು ಬೆಳಕಿಗೆ ತರುವುದು ಆರೋಗ್ಯ ಜಾಗೃತಿ ಮೂಡಿಸುವುದು ಮತ್ತು ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ಸಿಗುವಂತೆ ಮಾಡುವುದು, ತಾಯಿ ಮತ್ತು ಶಿಶು ಮರಣ ದರ ಕಡಿಮೆ ಮಾಡುವುದು.
ಬಾಲ್ಯ ವಿವಾಹ ನಿಷೇಧ ಕಾಯ್ದೆ 2006, ಬೇಸಿಗೆ ಸಮಯದಲ್ಲಿ ಸಾರ್ವಜನಿಕರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು, ರಾಷ್ಟ್ರೀಯ ಹಾವು ಕಡಿತ ನಿಯಂತ್ರಣ, ರಾಷ್ಟ್ರೀಯ ರೇಬಿಸ ನಿಯಂತ್ರಣ, ಕುಷ್ಟ ರೋಗ ನಿಯಂತ್ರಣಗಳ ಕುರಿತು ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳದಲ್ಲಿ ನಡೆದ “ವಿಶ್ವ ಆರೋಗ್ಯ ದಿನಾಚರಣೆ-2026” ರ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀ ಶಿವಾನಂದ ಪೂಜಾರಿ ರವರು ಮುಖ್ಯ ಅತಿಥಿಗಳಾಗಿ ಆರೋಗ್ಯದ ಕುರಿತು ವಿವರವಾಗಿ ಮಾತನಾಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕೊಪ್ಪಳದ ಉಪಸಭಾಪತಿಗಳಾದ ಡಾಽಽಮಂಜುನಾಥ ಸಜ್ಜನ ರವರು ವಿದ್ಯಾರ್ಥಿಗಳ ಕುರಿತು ಮಾತನಾಡಿ ಆಧುನಿಕ ಯುಗವಾದ ಇಂದಿನ ದಿನಗಳಲ್ಲಿ ಅನೇಕರು ಫಾಸ್ಟ್ ಪುಡ್ ಕಡೆಗೆ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಅನಾರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ. ರಸ್ತೆ ಬದಿಯಲ್ಲಿನ ತಿನಿಸುಗಳಿಗೆ ಆಕರ್ಷಿತರಾಗದೇ ಆರೋಗ್ಯದ ಕಡೆ ಗಮನಹರಿಸಬೇಕು. ವಾಯ್ಯಾಮ, ಯೋಗ, ಧ್ಯಾನ ಮಾಡುವದರಿಂದ ಮಾನಸಿ ಒತ್ತಡಗಳಿಗೆ ಒಳಗಾಗದೇ ಆರೋಗ್ಯವಾಗಿ ಇರಬಹುದು ಎಂದು ತಿಳಿಸಿದರು.
ಶ್ರೀ ವಾಯ್. ಬಿ. ಅಂಗಡಿ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ ರೆಡ್ ಕ್ರಾಸ್ ಸಂಸ್ಥೆ ಉತ್ತಮ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಇಂದಿನ ಯುವಕರು ದುಡುಕು ನಿರ್ದಾರದಿಂದ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಕಾರಣ ಯುವಕರು ಧುಶ್ಚಟಗಳಿಗೆ ಒಳಗಾಗದೇ ಆರೋಗ್ಯದ ಕಡೆ ಗಮನ ಹರಿಸಬೇಕೆಂದು ತಿಳಿಸಿದರು.
ಶ್ರೀ ಶಿವನಾಥ ಇ.ಜಿ. ಸಂಯೋಜಕರು ಕಾಲೇಜು ಯುವ ರೆಡ್ ಕ್ರಾಸ್ ಘಟಕ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಶ್ರೀ ಸೋಮೇಶ ರವರು ನಿರೂಪಣೆ ಮಾಡಿದರು. ಶ್ರೀ ತುಕಾರಾಮ ನಾಯ್ಕ್ ರವರು ಗಣ್ಯರನ್ನು ಸ್ವಾಗತಿಸಿದರು. ಡಾ.ಬಾಲಾಜಿ ಎಸ್. ರವರು ವಂದಿಸಿದರು. ಕಾರ್ಯಕ್ರಮದಲ್ಲಿ ಬೋಧಕ ವರ್ಗದವರು, ಶ್ರೀ ಗುದ್ನೇಶ ಬಾವಳ್ಳಿ ಜಿಲ್ಲಾ ಯುವ ರೆಡ್ ಕ್ರಾಸ್ ಸಂಯೋಜಕರು, ಭಾ.ರೆ.ಸಂ. ಕೊಪ್ಪಳ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು .
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 