ನಮ್ಮ ನಾಳೆಯ ಉಳಿವಿಗಾಗಿ ಪರಿಸರ ಉಳಿಸೋಣ, ಶಾಸಕ ಲಕ್ಷ್ಮಣ ಸವದಿ.
Let's save the environment for our future survival, MLA Lakshman Savadi.
ನಮ್ಮ ನಾಳೆಯ ಉಳಿವಿಗಾಗಿ ಪರಿಸರ ಉಳಿಸೋಣ, ಶಾಸಕ ಲಕ್ಷ್ಮಣ ಸವದಿ.
ಅಥಣಿ 03: ನಮ್ಮ ನಾಳೆಯ ಉಳಿವಿಗಾಗಿ ಪರಿಸರವನ್ನು ಉಳಿಸಿ ಬೆಳೆಸೋಣ, ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು ಅದನ್ನು ಪೋಷಿಸಿ ಹೆಮ್ಮರವಾಗಿಸೋಣ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ವಾಯು ವಿಹಾರ ಬಳಗ, ಅಥಣಿ ಸೋಶಿಯಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಸೋಶಿಯಲ್ ಕ್ಲಬ್ ಆವರಣದಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ಅಥಣಿ ತಾಲೂಕಿನ ಎಲ್ಲ ಹೈಸ್ಕೂಲಗಳ 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೊಂದು ಸಸಿ ಕೊಟ್ಟು ಅದನ್ನು ಪೋಷಿಸುವ ಜವಾಬ್ದಾರಿಯನ್ನೂ ಸಹ ಅವರಿಗೆ ನೀಡುವುದು ಮತ್ತು ಅವರ ಹತ್ತನೇ ತರಗತಿ ನಂತರ ಹಿಂದಿನ ವಿದ್ಯಾರ್ಥಿಗಳಿಗೆ ಒಪ್ಪಿಸಿ ಪೋಷಣೆಯ ಜವಾಬ್ದಾರಿ ಅವರಿಗೆ ವಹಿಸಿಕೊಡಬೇಕು ಈ ರೀತಿ ಹೈಸ್ಕೂಲ ಹಾಗೂ ಹಾಸ್ಟೇಲ್ ಕ್ಯಾಂಪಸ್ಸಗಳಲ್ಲಿ 25 ಸಾವೀರಕ್ಕೂ ಸಸಿಗಳನ್ನು ನೆಡುವ ಗುರಿ ಇದೆ ಎಂದ ಅವರು ಪುರಸಭೆಯ ಸಹಯೋಗದಲ್ಲಿ ಅಥಣಿ ಪಟ್ಟಣದಲ್ಲಿಯೂ ಕೂಡ ರಸ್ತೆ ಮಧ್ಯದ ಡಿವೈಡರ್ ಮತ್ತು ರಸ್ತೆ ಅಕ್ಕ-ಪಕ್ಕ ಸಸಿಗಳನ್ನು ನೆಡುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು.ಕೋರೋನಾ ಸಂದರ್ಭದಲ್ಲಿ ಆಕ್ಸಿಜನ್ ಗಾಗಿ ಕೋಟ್ಯಾಂತರ ಜನ ಪರದಾಡಿದಷ್ಟೇ ಅಲ್ಲ ಆಕ್ಸಿಜನ್ ಕೊರತೆಯಿಂದ ಲಕ್ಷಾಂತರ ಜನ ಮರಣವನ್ನಪ್ಪಿದ್ದಾರೆ ಎಂದ ಅವರು ಮುಂದಿನ ದಿನಗಳಲ್ಲಿ ಆಕ್ಸಿಜನ್ ಕೊರತೆ ಆಗಬಾರದೆನ್ನುವುದಿದ್ದಲ್ಲಿ ನಾವೆಲ್ಲ ಸೇರಿ ಸಸಿ ನೆಡಬೇಕು ಮತ್ರು ಅದನ್ನು ಪೋಷಿಸುವ ಜವಾಬ್ದಾರಿಯನ್ನೂ ಕೂಡ ವಹಿಸಿಕೊಳ್ಳಬೇಕು ಎಂದರು.
ಸೋಶಿಯಲ್ ಕ್ಲಬ್ 2008 ರಲ್ಲಿ ಕೆಲವೇ ಕೆಲವು ಸಮಾನ ಮನಸ್ಕರು ಒಂದೆಡೆ ಸೇರಿ ಪ್ರಾರಂಭಿಸಿದ್ದು, ಈಗ ಅಥಣಿಯ ಆಕರ್ಷಣೆಯಾಗಿದೆ ಎಂದ ಅವರು ಇದರ ಬೆಳವಣಿಗೆಗೆ ರಾಜ್ಯ ಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಅಪೇಕ್ಸ ಬ್ಯಾಂಕ ಸೇರಿದಂತೆ ಅನೇಕ ಮಹನೀಯರು ಕೈ ಜೋಡಿಸಿದ್ದಾರೆ ಎಂದ ಅವರು ಈ ಸೋಶಿಯಲ್ ಕ್ಲಬ್ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲ ಶ್ರಮಿಸೋಣ ಎಂದರು. ಅಥಣಿ ಸೋಶಿಯಲ್ ಕ್ಲಬ್ ಅಧ್ಯಕ್ಷ ಶಿವಕುಮಾರ ಸವದಿ ಕ್ಲಬ್ ನಡೆದು ಬಂದ ದಾರಿ ಮತ್ತು ಮುಂದಿನ ದಿನಗಳಲ್ಲಿ ಇದರ ಅಭಿವೃದ್ಧಿಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಕ್ಲಬ್ ಉಪಾಧ್ಯಕ್ಷ ಹಿಮಾನಶು ಭಾಟೆ, ಕಾರ್ಯದರ್ಶಿ ಪ್ರಸನ್ನ ಸಗರಿ, ಧುರೀಣರಾದ ಶಂಭು ಮಮದಾಪುರ, ರಾಮ ಧರಿಗೌಡ, ಅಜಿತ ಇನಾಮದಾರ, ಮಲ್ಲಿಕಾರ್ಜುನ ಮಗದುಮ್, ಎ.ಪಿ.ಗೌರಗೌಡ, ಶ್ರೀಕಾಂತ ಮಾಕಾಣಿ, ಉದಯ ಜಾಧವ, ಡಾ.ಆಸೀಫಲಿ ಡೊಂಗರಗಾಂವ, ಡಾ.ಸುರೇಶ ದರೂರ, ಸಂಜೀವ ಮದಭಾವಿ, ಶೈಲೇಶ ಜಾಧವ, ಶಿವಯೋಗಿ ತೆಲಸಂಗ, ಪುರಸಭಾ ಸದಸ್ಯರಾದ ಸಂತೋಷ ಸಾವಡಕರ, ಮೃಣಾಲಿನಿ ದೇಶಪಾಂಡೆ, ಜಿ.ಪಂ ಅಧಿಕಾರಿ ವೀರಣ್ಣಾ ವಾಲಿ, ನಿವೃತ್ತ ಅಧಿಕಾರಿ ಜಯಾನಂದ ಹಿರೇಮಠ, ಸಿ.ರಾಜಮಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಸಿ ನೆಡಲು ಸಹಕರಿಸಿದ ರಿಯಲ್ ಎಸ್ಟೇಟ್ ಉದ್ಯಮಿ ರಫಿಕ್ ಢಾಂಗೆ ಇವರನ್ನು ಸತ್ಕರಿಸಲಾಯಿತು. ರಂಜನ ಸರಪಳಿ ನಿರೂಪಿಸಿದರು, ಶಂಕರ ಜತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 