ನೆಲಮೂಲ ಸಂಸ್ಕೃತಿ ಮೂಲ ಜನಪದ ಉಳಿಸಿ-ಬೆಳೆಸೋಣ: ಶರಣಪ್ಪ ವಡಿಗೇರಿ

Let's preserve and cultivate the indigenous culture and original folklore: Sharanappa Vadigeri

ಕೊಪ್ಪಳ  08:  ನಮ್ಮ ನಾಡಿನ ನೆಲದ ಮೂಲ ಸಂಸ್ಕೃತಿ, ಮೂಲ ಜನಪದವನ್ನು ಉಳಿಸಿ-ಬೆಳೆಸೋಣ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಶರಣಪ್ಪ ವಡಿಗೇರಿ ಮಾತನಾಡಿದರು. 

ಅವರು ತಳುವಗೇರಾ ಗ್ರಾಮದಲ್ಲಿ ಬುಧವಾರ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಜನಜಾಗೃತಿ ಕಲಾ ರಂಗ ಸಂಸ್ಥೆ (ರಿ) ಕುಷ್ಟಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ 2023-24ನೇ ಸಾಲಿನ ಸಂಘಸಂಸ್ಥೆಗಳ ಧನಸಹಾಯ ಯೋಜನೆ ಅಡಿಯಲ್ಲಿ ನಡೆದ ಮೂಲ ಜನಪದ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.   

ಜನರ ಮಾತಿನೊಂದಿಗೆ ಬೆಳೆದು ಉಳಿದು ಬಂದಿರುವ ಮೂಲ ಜನಪದ ಸಾಹಿತ್ಯವು ನಮ್ಮ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ನಮ್ಮ ಬದುಕಿನ ಕನ್ನಡಿಯಾಗಿದೆ ಹಾಗೂ ನಮ್ಮ ನೆಲಮೂಲ ಸಂಸ್ಕೃತಿಯಾಗಿದೆ. ಪ್ರಸ್ತುತ ದಿನಮಾನದಲ್ಲಿ ಜನಪದ ಗೀತೆಗಳ ಹೆಸರಲ್ಲಿ ದ್ವಂದ್ವಾರ್ಥದ, ಯುವ ಜನತೆಯ ದಾರಿ ತಪ್ಪಿಸುವ ಹಾಡುಗಳು ಬರುತ್ತಿವೆ. ಅವೆಲ್ಲಾ ಜನಪ್ರಿಯ ಗೀತೆ, ಟ್ರ್ಯಾಕ್ಟರ್ ಪದಗಳೇ ಆಗಿವೆ ಹೊರತು ಮೂಲ ಜನಪದಗೀತೆಗಳು ಅಲ್ಲಾ. ನಮ್ಮ ಸಂಸ್ಕೃತಿ, ಜನಪದ ಕಲೆಗಳನ್ನು ಉಳಿಸಲು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು, ಯುವ ಪೀಳಿಗೆಗೆ ಸರಕಾರವು ಸಂಘ-ಸಂಸ್ಥೆಗಳ ಧನಸಹಾಯ ಯೋಜನೆಗಳ ಮೂಲಕ ಇಂತಹ ಮಹತ್ವಪೂರ್ಣ ಕಾರ್ಯಕ್ರಮನ್ನು ಏರಿ​‍್ಡಸಿ ಪ್ರೋತ್ಸಾಹ ನೀಡುತ್ತಿದೆ ಎಂದರು.ಗ್ರಾಮ ಪಂಚಾಯತಿ ಸದಸ್ಯರಾದ ಶರಣಗೌಡ ಮಾಲಿಪಾಟೀಲ ಅವರು ತಮಟೆ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.  

ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಅಮೀರ್ ರಂಜಾನ್ ಮುಲ್ಲಾ, ದೇವಸ್ಥಾನ ಸಮಿತಿ ಅಧ್ಯಕ್ಷರಾದ ಬಸವರಾಜ ಮೇಳಿ ಹಾಗೂ ಮತ್ತಿತರರಿದ್ದರು.  

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿಂಗಪ್ಪ ಸೊಲ್ಲಾಪೂರ ತಂಡದವರಿಂದ ಗೀ ಗೀ ಪದಗಳು, ದುರಗಪ್ಪ ಅಡವಿಭಾವಿ ಅವರಿಂದ ರಂಗಗೀತೆಗಳು, ಶರಣಪ್ಪ ಬನ್ನಿಗೋಳ ಅವರಿಂದ ಸುಗ್ಗಿಯ ಪದಗಳು, ಗುರ​‍್ಪ ಉಪನಾಳ ತಂಡದವರಿಂದ ಭಜನಾಪದ ಮತ್ತು ದೇವೇಂದ್ರ​‍್ಪ ಕಮ್ಮಾರ ಅವರಿಂದ ತತ್ವಪದಗಳ ಕಾರ್ಯಕ್ರಮ ಜನಮನ ರಂಜಿಸಿದವು. ಕೊನೆಯಲ್ಲಿ ಶ್ರೀಧರ ಪತ್ತಾರ ತಬಲಾಜಿ ಅವರು ವಂದಿಸಿದರು.