ಪ್ರಕೃತಿಯ ಶಕ್ತಿಯನ್ನು ಸದುಪಯೋಗ ಪಡಿಸಿಕೊಳ್ಳೋಣ: ಸುರೇಶ ಇಟಗಿ
Let's make good use of the power of nature said Suresh Itagi
ಬೆಳಗಾವಿ 22: ಪ್ರಕೃತಿಯಲ್ಲಿ ದೊರೆಯುವ ನೀರು, ಸೂರ್ಯನ ಬೆಳಕು, ಗಾಳಿ ಇವುಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡು ಪರಿಸರ ಮಾಲೀನ್ಯವನ್ನು ತಡೆಗಟ್ಟೋಣ. ನಿರಂತರವಾಗಿ ಪರಿಸರದ ಮೇಲೆ ಹಾನಿ ಉಂಟು ಮಾಡುವುದರಿಂದ ಹವಾಮಾನ ಬದಲಾವಣೆ, ಆರೋಗ್ಯ ಸಮಸ್ಯೆ, ಪ್ರಕೃತಿ ವಿಕೋಪಗಳು ಜೀವ ವೈವಿದ್ಯತೆಯ ನಾಶದಂತಹ ಅನೇಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿದ್ದೇವೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಸುರೇಶ ಇಟಗಿ ಅಭಿಪ್ರಾಯಪಟ್ಟರು.
ಮಹತ್ಮಾ ಗಾಂಧಿ ಗ್ರಾಮೀಣ ಇಂಧನ ಹಾಗೂ ಅಭಿವೃದ್ಧಿ ಸಂಸ್ಥೆ ಬೆಂಗಳೂರು ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಇವರ ಸಹಯೋಗದಲ್ಲಿ ಹಿರೇಬಾಗೇವಾಡಿ ಗ್ರಾಮದ ಶಿವಬಸವ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ನವೀಕರಿಸಬಹುದಾದ ಇಂಧನ, ಮಳೆ ನೀರು ಕೊಯ್ಲು, ಹಾಗೂ ಕಸ ನಿರ್ವಹಣೆ ಕುರಿತಾದ ಕಾರ್ಯಾಗಾರವನ್ನು ಸಸಿಗೆ ನೀರುಣಿಸುವದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಜಪ್ತಿ ಮಾತನಾಡಿ ಕಸ ನಿರ್ವಹಣೆ ಕುರಿತು ಮಹಿಳೆಯರಿಗೆ ತಿಳುವಳಿಕೆ ಅಗತ್ಯ, ಪರಿಸರ ಮತ್ತು ಆರೋಗ್ಯ ನಿರ್ವಹಣೆಗೆ ಇಂತಹ ತರಬೇತಿಗಳು ಸಹಾಯಕವಾಗಲಿವೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶ್ರೀಮತಿ ಸುರೇಖಾ ಪಾಟೀಲ ಘನತ್ಯಾಜ್ಯ ವಿಲೇವಾರಿ, ಪರಿಸರ ರಕ್ಷಣೆ, ಮಹಿಳಾ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದರು.
ಸುಗಂಧಾ ಅಳ್ಳಿ ಮಳೆ ನೀರು ಕೊಯ್ಲು, ಮಾಡುವುದರಿಂದ ಭವಿಷ್ಯದಲ್ಲಾಗುವ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ
ಕು. ಬಸವರಾಜ ಗುಗ್ಗರಿ ನವೀಕರಿಸಬಹುದಾದ ಇಂಧನ ಮೂಲಕಗಳ ಮಹರ‌್ವ ತಾಪಮಾನ, ಏರಿಕೆಯಲ್ಲಿ ನವೀಕರಿಸಲಾಗದ ಇಂಧನ ಪಾತ್ರ, ನವೀಕರಿಸಬಹುದಾದ ಇಂಧನಗಳ ಮೂಲಗಳು, ಜೈವಿಕ ಇಂಧನ, ಸೌರಶಕ್ತಿಗಳ ಬಗ್ಗೆ ಮಾಹಿತಿ ನೀಡಿದರು.
ಯೋಜನಾಧಿಕಾರಿ ಯೋಗಿಶ. ಕೆ ಜ್ಞಾನವಿಕಾಸ ಸಮನ್ವಯಾಧಿಕಾರಿ ಪ್ರಮೀಳಾ ಸುಭಾಷ, ಸೇವಾ ಪ್ರತಿನಿಧಿ ಮಹಾದೇವಿ ಇಂಚಲ, ಗಂಗಮ್ಮ್, ಸರೋಜಿನಿ ಸೇರಿದಂತೆ ಸ್ವಸಹಾಯ ಸಂಘಗಳ ಪ್ರತಿನಿದಿಗಳು ಪಾಲ್ಗೊಂಡಿದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 