ಸಂಗೀತ ಕ್ಷೇತ್ರದ ಅವಕಾಶಗಳ ಸದುಪಯೋಗವಾಗಲಿ: ಪಂ. ಸಿದ್ದರಾಮಯ್ಯ
Let's make good use of the opportunities in the music sector: Pm. Siddaramaiah
ಬಾಗಲಕೋಟೆ 20: ಪದವಿ ಮಟ್ಟದಲ್ಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯನ್ನು ರಾಜ್ಯಮಟ್ಟದಲ್ಲಿಯೇ ಮೊದಲ ಬಾರಿಗೆ ಪ್ರಾರಂಭಿಸಿದ ಕೀರ್ತಿ ಬಸವೇಶ್ವರ ಕಲಾ ಮಹಾವಿದ್ಯಾಲಯಕ್ಕೆ ಸಲ್ಲುತ್ತದೆ. ದೊಡ್ಡ ವೇದಿಕೆಗಳಿಗೆ ಹೋಗಲು ಇಂತಹ ಸಂಗೀತ ಸ್ಪರ್ಧೆಗಳು ದಾರೀದೀಪವಾಗುತ್ತವೆ ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪಂ. ಸಿದ್ದರಾಮಯ್ಯ ಮಠಪತಿ ಹೇಳಿದರು.
ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಾಂಸ್ಕೃತಿಕ ಸಮೀತಿ ಮತ್ತು ಹಿಂದುಸ್ಥಾನಿ ಸಂಗೀತ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡ ವಿವಿ ಮಟ್ಟದ ಅಂತರ್ ಮಹಾವಿದ್ಯಾಲಯದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಮತ್ತು ವಚನ ಗಾಯನ ಸ್ಪರ್ಧೆಯನ್ನು ತಂಬೂರಿ ನಿನಾದದ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಂಗೀತ ಸೇವೆಯನ್ನು ನಿರಂತರವಾಗಿಸುವ ಉದ್ದೇಶದಿಂದ ಕಲಾ ಮಹಾವಿದ್ಯಾಲಯದಲ್ಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ವಿಭಾಗವು ಪಂ. ಮಲ್ಲಿಕಾರ್ಜುನ ಮನಸೂರ ಅವರಿಂದ ಉದ್ಘಾಟನೆಗೊಂಡು ಈ ಭಾಗದಲ್ಲಿ ಸಂಗೀತ ಶಿಕ್ಷಣ ಸೇವೆಯನ್ನು ನೀಡುತ್ತ ಬಂದಿದೆ. ಕಳೆದ 42 ವರ್ಷಗಳಿಂದ ಶಾಸ್ತ್ರೀಯ ಸಂಗೀತ ಸ್ಪರ್ಧೆಗಳನ್ನು ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳು ಸಂಗೀತ ಕ್ಷೇತ್ರದ ದಿಗ್ಗಜರಾಗಿ ಗುರುತಿಸಿಕೊಂಡಿದ್ದಾರೆ. ಪಂ. ಸಂಗಮೇಶ ಗುರುವ ಅವರ ಪುತ್ರ ಕೈವಲ್ಯಕುಮಾರ ಗುರುವ ಸಂಗೀತ ಸ್ಪರ್ಧಾಳುವಾಗಿ ಪಾಲ್ಗೊಂಡಿದ್ದರು. ಚಂದ್ರಶೇಖರ ಪುರಾಣಿಕ ಮಠ, ಎಚ್.ಆರ್ ಬಡಿಗೇರ, ಸಗುಣಾಬಾಯಿ ಚಂದಾವರಕರ ಅಂತಹ ಅನೇಕ ಸಂಗೀತ ದಿಗ್ಗಜರುಗಳು ಸ್ಪರ್ಧೆಯ ನಿರ್ಣಾಯಕರಾಗಿ ಪಾಲ್ಗೊಂಡಿದ್ದು ಇತಿಹಾಸ. ತಡರಾತ್ರಿಯವರೆಗೂ ನಡೆಯುವ ಸಂಗೀತ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳನ್ನು ನಿಯಂತ್ರಿಸಲು ಹರಸಾಹಸ ಪಡಲಾಗುತ್ತಿತ್ತು. ಇತ್ತಿಚಿನ ದಿನಗಳಲ್ಲಿ ಯುವಕರಲ್ಲಿ ಶಾಸ್ತ್ರೀಯ ಸಂಗೀತದ ಆಸಕ್ತಿ ಕಡಿಮೆಯಾಗುತ್ತಿದೆ ಇಂತಹ ಸ್ಪರ್ಧೆಯಲ್ಲಿ ಭಾಗವಹಿಸುವುದರ ಮೂಲಕ ಸಂಗೀತ ಪರಂಪರೆಯನ್ನು ಅರಿತುಕೊಳ್ಳಬೇಕು ಎಂದರು.
ವಿಶ್ರಾಂತ ತಬಲಾ ಪ್ರಾಧ್ಯಾಪಕ ಡಾ.ಎಸ್.ಸಿ ಬಳ್ಳೂರ ಮಾತನಾಡಿ ಒಬ್ಬ ವಿದ್ಯಾರ್ಥಿಯಿಂದ ಶುರುವಾದ ಸಂಗೀತ ವಿಭಾಗಲ್ಲಿ ನೂರಾರು ವಿದ್ಯಾರ್ಥಿಗಳು ಸಂಗೀತ ಅಭ್ಯಾಸ ಮಾಡುತ್ತಿರುವುದು ಖುಷಿಯ ವಿಚಾರ. ಸಂಗೀತ ವಿಭಾಗದ ಪ್ರಾರಂಭದಿಂದಲೂ ಈ ಸ್ಪರ್ಧೆ ಜರಗುತ್ತಿದ್ದು ಹೀಗೆ ಮುಂದುವರೆಯಲಿ ಎಂದರು. ಪ್ರಾಚಾರ್ಯ ಎಸ್.ಆರ್ ಮುಗನೂರಮಠ ಮಾತನಾಡಿ ಸಂಗೀತವು ಸಾರ್ವತ್ರಿಕ ಭಾಷೆಯಾಗಿದ್ದು ಮಾನಸಿಕ ಒತ್ತಡಕ್ಕೆ ಅತ್ಯುತ್ತಮ ಓಷಧಿಯಾಗಿದೆ. ಪ್ರಾಚೀನದಿಂದಲೂ ಸಂಗೀತಕ್ಕೆ ತನ್ನದೇಯಾದ ಪ್ರಾಶಸ್ತ್ಯವಿದೆ ದಾಸರ ಕೀರ್ತನೆಗಳು, ವಚನಗಳು, ಒನಕೆ ಹಾಡುಗಳು, ಜಾನಪದ ಪದಗಳು ಸಂಗೀತದ ಹಲವು ಮಜಲುಗಳಾಗಿವೆ. ಮೆದುಳಿನ ನರತಂತುಗಳನ್ನು ಶಾಂತಗೊಳಿಸುವ ಮತ್ತು ಸಂತೋಷದ ಹಾರ್ಮೋನ್‌ಗಳು ಬಿಡುಗಡೆಯಾಗುವಂತೆ ಮಾಡುವ ಕೆಲಸವನ್ನು ಸಂಗೀತ ಮಾಡುತ್ತದೆ ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 