ಸರ್ಕಾರಿ ಶಾಲೆಗಳ ಸದುಪಯೋಗ ಮಾಡಿಕೊಳ್ಳೋಣ : ಗೋಪಾಲ್ ಕಟ್ಟಿಮನಿ
Let's make good use of government schools: Gopal Kattimani
ತಾಳಿಕೋಟಿ 24 : ಶ್ರೇಷ್ಠ ಜ್ಞಾನವನ್ನು ಮಕ್ಕಳಿಗೆ ನೀಡುವ ಸರಕಾರಿ ಶಾಲೆಗಳು ಇಂದು ತುಂಬಾ ಮಹತ್ವದ ಕೆಲಸವನ್ನು ಮಾಡುತ್ತಿವೆ. ಕೇವಲ ಪಠ್ಯಪುಸ್ತಕಗಳಲ್ಲಿ ಇರುವ ಪಾಠಗಳನ್ನು ಅಷ್ಟೇ ಅಲ್ಲ ಸಮಾಜಕ್ಕೆ ಬೇಕಾದ ಒಳ್ಳೆಯ ಮೌಲ್ಯಗಳು ಮತ್ತು ಸಂಸ್ಕಾರವನ್ನು ಮಕ್ಕಳಲ್ಲಿ ಬಿತ್ತುತ್ತಿವೆ ಆದ್ದರಿಂದ ಸರ್ಕಾರಿ ಶಾಲೆಗಳ ಸದುಪಯೋಗವನ್ನು ನಾವೆಲ್ಲರೂ ಮಾಡಿಕೊಳ್ಳಬೇಕಾಗಿದೆ ಎಂದು ಅಂಬೇಡ್ಕರ್ ಸೇನೆ ತಾಲೂಕ ಅಧ್ಯಕ್ಷ ಗೋಪಾಲ್ ಕಟ್ಟಿಮನಿ ಹೇಳಿದರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಭಾರತ ವಿಶ್ವಗುರು ಆಗಲು ಶಿಕ್ಷಣದಿಂದ ಮಾತ್ರ ಸಾಧ್ಯ ಆ ಶಿಕ್ಷಣ ಕೇವಲ ನಾಲ್ಕು ಗೋಡೆಗಳಲ್ಲಿ ಸೀಮಿತವಾಗಬಾರದು. ಅದು ಪ್ರಪಂಚದ ಅಪಾರಜ್ಞಾನವನ್ನು ಗಳಿಸುವಂತಹದ್ದಿರಬೇಕು ಅಂತಹ ಕೆಲಸವನ್ನು ನಮ್ಮ ಸರಕಾರಿ ಶಾಲೆಯ ಶಿಕ್ಷಕರು ತುಂಬಾ ಅಚ್ಚುಕಟ್ಟಾಗಿ ನೆರವೇರಿಸುತ್ತಿದ್ದಾರೆ.
ಆದರೆ ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಮತ್ತು ಸರ್ಕಾರಿ ಶಾಲಾ ಶಿಕ್ಷಕರಿಗೆ ಸಮಾಜದಿಂದ ಸಿಗುವ ಬೆಂಬಲ ತುಂಬಾ ಕಡಿಮೆಯಾಗಿದೆ. ಪಾಲಕರು ದೊಡ್ಡ ದೊಡ್ಡ ಬಿಲ್ಡಿಂಗ್ ಗಳನ್ನು ವ್ಯಾನ್ಗಳನ್ನು ನೋಡಿ ಮಕ್ಕಳನ್ನು ಪ್ರೈವೇಟ್ ಶಾಲೆಗೆ ಸೇರಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸ್ ಮಾಡಿ ಎರಡು ಮೂರು ಪದವಿಗಳನ್ನು ಹೊಂದಿದ ಅನುಭವಿ ಶಿಕ್ಷಕರು ಇದ್ದರು ಇದು ಪಾಲಕರ ಗಮನಕ್ಕೆ ಬಾರದಿರುವುದು ನಮ್ಮ ದುರಾದೃಷ್ಟವೇ ಸರಿ. ಇಂದು ಎಸ್ ಎಸ್ ಎಲ್ ಸಿ ಆಗಲಿ ಪಿಯುಸಿ ಆಗಲಿ ಅಧಿಕ ರಿಸಲ್ಟ್ ಬರುತ್ತಿರುವುದು ನಮ್ಮ ಸರಕಾರಿ ಶಾಲೆಗಳಿಂದ ಮಾತ್ರ. ಭಾರತ ಸಂವಿಧಾನದ ಆಶಯವಾದ ಸಮಾಜವಾದಿ ಜಾತ್ಯತೀತ ಪ್ರಜಾಸತಾತ್ಮಕ ಗಣರಾಜ್ಯ ದೇಶ ನಮ್ಮದಾಗಬೇಕಾದರೆ ಆ ನಿಟ್ಟಿನಲ್ಲಿ ನಾವು ನೀವೆಲ್ಲರೂ ಸರಕಾರಿ ಶಾಲೆಗಳಿಗೆ ಮತ್ತು ಸರ್ಕಾರಿ ಶಾಲಾ ಶಿಕ್ಷಕರಿಗೆ ಬೆಂಬಲವನ್ನು ನೀಡಿದರೆ ಸಾಕು.
ಬೇರೆ ಬೇರೆ ದೇಶಗಳಿಗೆ ಹೋಲಿಸಿದಾಗ ಅಲ್ಲಿರುವ ಸರ್ಕಾರಿ ಶಾಲೆಗಳು ಉಚಿತವಾಗಿಯೇ ಮಕ್ಕಳಿಗೆ ಶಿಕ್ಷಣವನ್ನು ನೀಡಿ ತಮ್ಮ ಪ್ರಗತಿಯನ್ನು ಸಾಧಿಸುತ್ತಿವೆ. ಇದನ್ನು ಸ್ವಲ್ಪ ಗಮನಿಸಿ ನಾವು ಸರ್ಕಾರಿ ಶಾಲೆಗಳಿಗೆ ಕೈಜೋಡಿಸಿದರೆ ನಮ್ಮ ದೇಶವು ಸಹ ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ. ಸರಕಾರ ಎಷ್ಟೆಲ್ಲಾ ಯೋಜನೆಗಳನ್ನು ತಂದು ಮಕ್ಕಳ ಬೆಳವಣಿಗೆಯಲ್ಲಿ ತೊಡಗಿದೆ ಉಚಿತ ಪಠ್ಯಪುಸ್ತಕ, ಬಟ್ಟೆ ವಿತರಣೆ, ಮೊಟ್ಟೆ ವಿತರಣೆ , ನಿರಂತರ ಶಾಲೆಗಳಿಗೆ ಅನುದಾನ, ದ್ವಿಭಾಷಾ ಬೋಧನೆ, (ಕನ್ನಡ ಮತ್ತು ಇಂಗ್ಲಿಷ್). ಸಹಪಠ್ಯ ಚಟುವಟಿಕೆಗಳು, ಆಟಗಳು, ಇನ್ನು ಹತ್ತು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದು ಸಮಾಜದ ಸಮಾನತೆಗಾಗಿ ಒಳ್ಳೆಯ ಶಿಕ್ಷಣಕ್ಕಾಗಿ ಕೆಲಸವನ್ನು ಮಾಡುತ್ತಿದೆ ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ನೀವೆಲ್ಲರೂ ಸರಕಾರಿ ಶಾಲೆಗಳೊಂದಿಗೆ ಕೈಜೋಡಿಸಿ ದೇಶದ ಭವಿಷ್ಯ ನಿರ್ಮಾಣ ಕಾರ್ಯದಲ್ಲಿ ತೊಡಗೋಣ. ಕನ್ನಡ ಶಾಲೆ ಉಳಿಸೋಣ ಕನ್ನಡ ಶಾಲೆ ಬೆಳೆಸೋಣ ಎಂದು ತಿಳಿಸಿದ್ದಾರೆ.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 