ದುಶ್ಚಟಗಳನ್ನು ಬಿಟ್ಟು ಸನ್ಮಾರ್ಗಕ್ಕೆ ಬರೋಣ : ಕುಮಾರ ಮಣ್ಣವಡ್ಡರ

ದುಶ್ಚಟಗಳನ್ನು ಬಿಟ್ಟು ಸನ್ಮಾರ್ಗಕ್ಕೆ ಬರೋಣ : ಕುಮಾರ ಮಣ್ಣವಡ್ಡರ Let's leave bad habits and come to the right path: Kumara Mannavadda

            ಶಿಗ್ಗಾವಿ 16  : ಸಮಾಜದ ಅಭಿವೃದ್ದಿಗಾಗಿ ದುಶ್ಚಟಗಳನ್ನು ಬಿಟ್ಟು ಸನ್ಮಾರ್ಗಕ್ಕೆ ಬರೋಣ ಎಂದು ಸಂಕಲ್ಪ ಮಾಡೋಣ ಎಂದು ಹಾವೇರಿ ಯೋಜನಾ ಇಲಾಖೆ ಉಪನಿರ್ದೇಶಕ ಕುಮಾರ ಮಣ್ಣವಡ್ಡರ ಹೇಳಿದರು.  ಪಟ್ಟಣದ ಮೌಲಾಲಿ ನಗರದಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿ ಅಂಗವಾಗಿ ನೂತನ ಸಿದ್ದರಾಮೇಶ್ವರ ಸಂಘದ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಸಂಘಟನೆ ಮೂಲಕ ಸಮಾಜದ ಸೌಲಭ್ಯಗಳನ್ನು ಪಡೆದು ನಮ್ಮ ಸಮಾಜವನ್ನು ಮುಖ್ಯವಾಹಿನಿಗೆ ತರುವ ಉದ್ದೇಶವಾಗಿದೆ ಹಾಗೂ ನಮ್ಮ ಸಮಾಜದಲ್ಲಿ ಬುದ್ದಿವಂತರ ಸಂಖೈ ಕಡಿಮೆ ಇರುವ ಕಾರಣ ನಮ್ಮ ಧಾರ್ಮಿಕ ವಿಧಾನಗಳನ್ನು ಬೇರೆಯವರಿಗೆ ಮಾಡಲು 12 ನೇ ಶತಮಾನದಲ್ಲಿ ಸಿದ್ದರಾಮೇಶ್ವರ ಬೋವಿ ಸಮಾಜವನ್ನು ಬೆಳಕಿಗೆ ತಂದರು. ಬಾಲ್ಯದಲ್ಲಿ ಆತ ದೇವರ ಸೇವೆ ಮಾಡುವಲ್ಲಿ ತಲ್ಲೀನನಾಗಿದ್ದನು. ಸಿದ್ದರಾಮರು ಅನೇಕ ಪವಾಡಗಳ ಮೂಲಕ ಕ್ರಾಂತಿ ಕಾರಿಯಾಗಿದ್ದರು. ಅವರ ವಚನಗಳ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಇಂತಹ ಜಯಂತಿಗಳಿಗೆ ಗೌರವ ಸಿಗುತ್ತದೆ. ನಾವು ಒಳ್ಳೆಯ ಮಾರ್ಗದರ್ಶನದಲ್ಲಿ ಜೀವನ ಸಾಗಿಸಿದೇವು ಆದರೆ ಇನ್ನೂ ಮೇಲೆ ಮಕ್ಕಳಿಗೆ ಶಿಕ್ಷಣ, ಉದ್ಯೋಗ, ಸ್ವಾವಲಂಬಿಯಾಗಿ ಬದುಕಲು ನಾವು ಮಾರ್ಗದರ್ಶನ ಮಾಡಬೇಕು ಎಂದರು.  

            ಗೌರವಾಧ್ಯಕ್ಷ ನಾಗರಾಜ ಹಾವೇರಿ ಮಾತನಾಡಿ ಒಗ್ಗಟ್ಟಿನ ಮೂಲಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಧ್ಯಕ್ಷರಾದವರು ಕೆಲಸ ಮಾಡಬೇಕು ಹಾಗೂ ಏನೆ ತೊಂದರೆ ಆದರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು. ಅಧ್ಯಕ್ಷ ಉಮೇಶ ಮಣ್ಣವಡ್ಡರ ಮಾತನಾಡಿ ನನಗೆ ನಿಮ್ಮ ಸಂಪೂರ್ಣವಾದ ಬೆಂಬಲ ದೊರೆತರೆ ಮಾದರಿ ಸಂಘವಾಗಿ ಮಾರ​‍್ಾಡು ಮಾಡುತ್ತೇನೆ ಎಂದರು. ವೆಂಕಮ್ಮ ಬಂಡಿವಡ್ಡರ, ಸುರೇಶ ಬಂಡಿವಡ್ಡರ ಮಾತನಾಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಸವರಾಜ ಮಣ್ಣವಡ್ಡರ, ಕಾರ್ಯದರ್ಶಿ ತಿರುಪತಿ ಮಣ್ಣವಡ್ಡರ, ಖಜಾಂಚಿ ಸುರೇಶ ಬಂಡಿವಡ್ಡರ, ಸದಸ್ಯರಾದ ದುರಗಪ್ಪ ಕಟ್ಟಿಮನಿ, ತಿಮ್ಮಣ್ಣಾ ಮಣ್ಣವಡ್ಡರ, ಬಸಪ್ಪ ಮಣ್ಣವಡ್ಡರ, ರವಿ ಬಂಡಿವಡ್ಡರ, ಹನುಮಂತಪ್ಪ ಬಂಡಿವಡ್ಡರ, ಬಸಪ್ಪ ಹುರುಳಿಕೊಪ್ಪಿ, ಸಂತೋಷ ಕಟ್ಟಿಮನಿ, ಮಾಜಿ ಪುರಸಭೆ ಅಧ್ಯಕ್ಷೆ ಇಂದ್ರವ್ವ ಹಾವೇರಿ ಸೇರಿದಂತೆ ಸಮಾಜದ ಸದಸ್ಯರು ಉಪಸ್ಥಿತರಿದ್ದರು.  ಯುವ ಮುಖಂಡ ಸಂತೋಷ ಕಟ್ಟಿಮನಿ ಸ್ವಾಗತಿಸಿ ವಂದಿಸಿದರು, ಶಿಕ್ಷಕ ಜಯಪ್ರಕಾಶ ಬಂಡಿವಡ್ಡರ ಕಾರ್ಯಕ್ರಮ ನಿರ್ವಹಿಸಿದರು.