ಡಾ. ಜಗಜೀವನರಾಮ್ ಅವರ ಜೀವನ ಆದರ್ಶ ಪಾಲಿಸೋಣ

	ಡಾ. ಜಗಜೀವನರಾಮ್ ಅವರ ಜೀವನ ಆದರ್ಶ ಪಾಲಿಸೋಣ Let's follow the life ideals of Dr. Jagjivan Ram

ಲೋಕದರ್ಶನ ವರದಿ 

        ಹಾವೇರಿ 06 : ದೇಶದ ಅನುಭವಿ ರಾಜಕಾರಣಿ ಡಾ.ಬಾಬು ಜಗಜೀವನರಾಮ್ ಅವರು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದು,ನಮ್ಮ ಸಮಾಜದ ಜೊತೆಗೆ ಎಲ್ಲ ಸಮಾಜದವರ ಶ್ರಯೋಭಿವೃದ್ಧಿಗಾಗಿ ನಿರಂತರ ಸೇವೆ ಸಲ್ಲಿಸಿದ್ದಾರೆ. ಅವರ ಜೀವನ ಆದರ್ಶ ಪಾಲಿಸೋಣ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಹೇಳಿದರು. 

       ನಗರದ ಪ್ರವಾಸಿ ಮಂದಿರದಲ್ಲಿ ಹಸಿರು ಕ್ರಾಂತಿ ಹರಿಕಾರರು ಹಾಗೂ ಮಾಜಿ ಉಪಪ್ರಧಾನಿಗಳಾದ ಡಾ.ಬಾಬು ಜಗಜೀವನ ರಾಮ್ ಅವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

         ಡಾ.ಬಾಬು ಜಗಜೀವನ ರಾಮ್ ಅವರು ಸರಳ ಸಜ್ಜನಕೆಗೆ ಹೆಸರುವಾಗಿಯಾಗಿ ದೇಶದ ಜನತೆಗೆ ಹಸಿರು ಕ್ರಾಂತಿ ಮಾಡುವ ಮೂಲಕ ದೇಶದ ಪ್ರಗತಿಗೆ ಸಹಕಾರ ನೀಡಿದ್ದಾರೆ.ತಮ್ಮ ಅನುಭವದಿಂದ ದೇಶದ ಮಹೋನ್ನತ ಗೌರವ ಸ್ಥಾನಮಾನ ಪಡೆದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.ದೇಶಕ್ಕಾಗಿ ಹಗಲಿರುಳು ಶ್ರಮವಹಿಸಿ ಎಲ್ಲಾ ಜನಾಂಗದ ಜನರ ಹಾಗೂ ಕಾರ್ಮಿಕರ ಆಶಾಕಿರಣ ಆಗಿದ್ದು,ಅವರ ಬದುಕಿನ ಆದರ್ಶಗಳನ್ನು ಪಾಲಿಸಲು ಮುಂದಾಗಬೇಕಿದೆ ಎಂದು ಉಡಚಪ್ಪ ಮಾಳಗಿ ಅವರು ಡಾ.ಬಾಬು ಜಗಜೀವನ ರಾಮ್ ಅವರ ಜನ್ಮ ದಿನದ ಶುಭ ಕೋರಿ ಮಾತನಾಡಿದರು. 

           ಈ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕರಾದ ಮಾಲತೇಶ ಯಲ್ಲಾಪುರ, ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷರಾದ ಮಂಜಪ್ಪ ಮರೋಳ,ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷರಾದ ಎಮ್ ಕೆ ಮಖಬೂಲ್,ಮಹಿಳಾ ಘಟಕದ ಕಾಯಾಧ್ಯಕ್ಷರಾದ ನೀಲಮ್ಮ ಪೂಜಾರ, ಹಾನಗಲ್ಲ ತಾಲ್ಲೂಕಾಧ್ಯಕ್ಷರಾದ ಜಗದೀಶ ಹರಿಜನ, ಶಂಭುಲಿಂಗಪ್ಪ ನಿಂಗಪ್ಪನವರ, ಹೊನ್ನಪ್ಪ ಮಾಳಗಿ,ಬಸವರಾಜ ದೇವರಮನಿ,ವಿಶ್ವನಾಥ ನಾಗಮ್ಮನವರ, ಮಂಜುನಾಥ ಹರಿಜನ,ಮಹೇಶಪ್ಪ ಹರಿಜನ,ಹನುಮಂತಪ್ಪ ಶಾಕಾರ,ತರುಣ ಮಾಳಗಿ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.