ಕನ್ನಡ ಭಾಷೆ, ನೆಲ ಜಲ ಉಳಿಸಿ ಬೆಳೆಸೋಣ: ಗವಿಸಿದ್ದಪ್ಪ ಹಂಡಿ
Let's conserve Kannada language, soil and water and cultivate it: Gavisiddappa Handi
ಕೊಪ್ಪಳ 07: ಕನ್ನಡ ಭಾಷೆ ಇಲ್ಲಿಯ ನೆಲ ಜಲ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸೋಣ, ಪ್ರತಿಯೊಬ್ಬ ಕನ್ನಡಿಗನ ಮೇಲೆ ಜವಾಬ್ದಾರಿ ಇದೆ ಎಂದು ಕರವೇ ಜಿಲ್ಲಾ ಮುಖಂಡ ಗವಿಸಿದ್ದಪ್ಪ ಹಂಡಿ ಹೇಳಿದರು,ಅವರು ನಗರದಲ್ಲಿ ಜೈ ಕನ್ನಡಾಂಬೆ ಯುವಕ ಮಂಡಳಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಟಿ ಎ ನಾರಾಯಣಗೌಡ್ರು ಬಣ ) ಸಂಯೋಗ ಆಶ್ರಯದಲ್ಲಿ ಏರಿ್ಡಸಿದ ಸಂಸ್ಕೃತಿಕ ಕಾರ್ಯಕ್ರಮ ದಲ್ಲಿಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಕುರಿತು ಮಾತನಾಡಿದರು.
ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸಲು ನಮ್ಮ ನಾಡಿನ ಅನೇಕ ವ್ಯಕ್ತಿಗಳು ಹಾಗೂ ನಮ್ಮ ನಾಡಿನ ಯೋಧರು ಮಳೆ ಚಳಿ ಬಿಸಿಲು ಲೆಕ್ಕಿಸದೆ ತಮ್ಮ ಜೀವನವನ್ನು ಮುಡುಪಾಗಿಟ್ಟು ನಮ್ಮನ್ನು ಕನ್ನಡ ತಾಯಿಯನ್ನು ರಕ್ಷಣೆ ಮಾಡುವಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಬೇಕು ಅವರ ಸೇವೆಗೆ ನಮ್ಮದು ಕೋಟಿ ನಮನಗಳು ಮತ್ತು ಜೀವನವನ್ನು ತ್ಯಾಗ ಮಾಡಿದ್ದಾರೆ. ನಮ್ಮ ನಾಡು ನುಡಿ ನಮ್ಮ ಆಸ್ತಿಯಾಗಿದೆ ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹಾಗೂ ಗೌರವಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ದಾಗಬೇಕು ಕನ್ನಡಕ್ಕೆ 2000 ವರ್ಷಗಳ ಇತಿಹಾಸವಿದೆ. ಕನ್ನಡವು ಸೂರ್ಯ ಚಂದ್ರ ಇರುವವರಿಗೆ ಕರ್ನಾಟಕವು ಅಜರಾಮ ರಾಗಿರುತ್ತದೆ, ಕನ್ನಡ ನಾಡು ನುಡಿ ಜಲ ಗಡಿ ವಿಚಾರ ಬಂದಾಗ ಕನ್ನಡಿ ಗರು ಒಂದಾಗಬೇಕು ಜಾತಿ ಧರ್ಮ ಬೇದವಿಲ್ಲದೆ ನಾಡಿನ ಜನರೆಲ್ಲ ಅತ್ಯಂತ ಸಂಭ್ರಮದಿಂದ ಆಚರಣೆ ಮಾಡುವ ಹಬ್ಬ ಕನ್ನಡ ರಾಜ್ಯೋತ್ಸವ ಕನ್ನಡ ಭಾಷೆ ಮಹತ್ವ ಈ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ಸದಾ ಕಾಲ ಕನ್ನಡ ಭಾಷೆ ಬೆಳೆಯಲಿ ಹಾಗೂ ಮಕ್ಕಳ ಜೀವನದಲ್ಲಿ ಕನ್ನಡ ಭಾಷೆ ಮಹತ್ವವಾದ ತಾಯಿ ಭಾಷೆ ಇದಾಗಿದೆ ಎಂದು ಕರವೇ ಜಿಲ್ಲಾ ಮುಖಂಡ ಗವಿಸಿದ್ದಪ್ಪ ಹಂಡಿ ಹೇಳಿದರು. ಇದೇ ವೇಳೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಕನ್ನಡ ವಿಷಯದಲ್ಲಿ ಅತ್ತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವನಗೌಡ ಪಾಟೀಲ್ ತಾಲೂಕು ಅಧ್ಯಕ್ಷ ಭಾಷಾ ಹೊನ್ನಳ್ಳಿ ಮಹಿಳಾ ತಾಲೂಕು ಅಧ್ಯಕ್ಷರಾಧ ಬೋರಮ್ಮ, ತಳಗಡೆ ಪಲ್ಲವಿ ಕೊಪ್ಪಳ, ಗವಿಸಿದ್ದಪ್ಪ ಚಕ್ಕಡಿ ಗವಿಸಿದ್ದಪ್ಪ ದೊಡ್ಮನಿ, ಸಾಯಿ ಕುಮಾರ್, ಶಂಕರ್, ಪ್ರಕಾಶ್ ಹಡಪದ, ಸಂಗೀತ ಕಲಾವಿದ ಮಲ್ಲಿಕಾರ್ಜುನ್ ಓಜನಹಳ್ಳಿ, ರಮೇಶ್ ಬೂದಗುಂಪಿ ಇನ್ನು ಇನ್ನು ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 