ಹಬ್ಬಗಳನ್ನು ಶಾಂತಿಯುತ, ಪರಿಸರ ಸ್ನೇಹಿ ಹಬ್ಬವಾಗಿ ಆಚರಿಸೋಣ: ಜಿಲ್ಲಾಧಿಕಾರಿ

ಹಬ್ಬಗಳನ್ನು ಶಾಂತಿಯುತ, ಪರಿಸರ ಸ್ನೇಹಿ ಹಬ್ಬವಾಗಿ ಆಚರಿಸೋಣ: ಜಿಲ್ಲಾಧಿಕಾರಿ Let's celebrate festivals in a peaceful, eco-friendly manner: DC

ಹಾವೇರಿ 22: ಹಬ್ಬಗಳು ಸಮಾನತೆ ಹಾಗೂ ಸಹೋದರತೆ ಸಂಕೇತವಾಗಿದ್ದು, ಹಾಗಾಗಿ ಜಿಲ್ಲೆಯಲ್ಲಿ  ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು  ಶಾಂತಿಯುತ ಹಾಗೂ  ಪರಿಸರ ಸ್ನೇಹಿ ಹಬ್ಬವಾಗಿ ಆಚರಿಸೋಣ ಎಂದು  ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಸಲಹೆ ನೀಡಿದರು.ಜಿಲ್ಲಾ ಪಂಚಾಯತ್ ಸಭಾಂಗಣ ದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ   ಜರುಗಿದ  ಗೌರಿ ಗಣೇಶ ಹಾಗೂ ಈದ್ ಮಿಲಾದ್  ಹಬ್ಬದ  ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ದ ರು. ಭಾರತ ದೇಶದ ಸಂಸ್ಕೃತಿ, ಪರಠರೆ, ವೈವಿಧ್ಯತೆ ಯಿಂದ ಕೂಡಿದೆ. ಧರ್ಮ ಗಳು  ನ್ಯಾಯದ ಬದುಕು  ನಡೆಸುವವು ದು ಹೇಳಿಕೊಟ್ಟಿವೆ. ಪೈಗಂಬರ್ ಅವರು ಸಹಾನುಭುತಿ, ಸಮಾನತೆ, ಭೋಧಿ ಸಿದ್ದಾರೆ.  12 ನೇ ಶತಮಾನದ ದಲ್ಲಿ ಸಂತರು, ಶರಣರು ಹಾಗೂ ಸೂಫಿಗಳು ಸಮಾಜದಲ್ಲಿ ಸಾಮರಸ್ಯ  ಬೆಸುವ ಕೆಲಸ ಮಾಡಿದ್ದಾರೆ.ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಆಗದ ಹಾಗೆ ಎಲ್ಲರೂ ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸೋಣ ಎಂದರು.ಸಾರ್ವಜನಿಕ ಗಣೇಶ್ ಪ್ರತಿಷ್ಠಾಪನೆ ಗೆ ಅನುಮತಿ ಪಡೆಯಲು ಅನುಕೂಲ ವಾಗುವಂತೆ ನಗರ ಸಭೆಯಲ್ಲಿ  ಸಿಂಗಲ್ ವಿಂಡೋ ವ್ಯವಸ್ಥೆ ಮಾಡಲಾಗುವುದು.  ಗಣೇಶ್ ಮಂಡಳಿಗಳು ಯಾವುದೇ ಅಹಿತಕರ ಘಟನೆಗಳು ಸಂಭ ವಿಸ ದಂತೆ ಆಯೋಜನೆ ಮಾಡಬೇಕು. ಸರ್ಕಾರದ ಮಾರ್ಗ ಸೂಚಿಸಿ ಪಾಲಿಸಬೇಕು. ಡಿಜೆ ಬದಲಾಗಿ ಸಂಪ್ರದಾಯಿಕ ವಾದ್ಯಗಳಿಗೆ   ಹಾಗೂ, ಮಣ್ಣಿನ ಮೂರ್ತಿ ಪ್ರತಿಷ್ಠಾಪನೆ ಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಹಬ್ಬ ಆಚರಣೆ ಸಮಯದಲ್ಲಿ ಸ್ವಚ್ಛ ತೆಗೆ ಆದ್ಯತೆ ನೀಡಬೇಕು ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚು ವಂತೆ  ಸಂಬಂಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಮಾತನಾಡಿ,  ಹಬ್ಬದ ಆಚರಣೆಯಲ್ಲಿ ಸುರಕ್ಷತೆ ಬಹಳ ಮುಖ್ಯ. ಹಾಗಾಗಿ ಗಣೇಶ್ ಮಂಡಳಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು.  ಇಲಾಖೆ ಯಲ್ಲಿ ಸಿಬ್ಬಂದಿ ಕೊರತೆ ಇದೆ ಹಾಗಾಗಿ ಆಯೋಜಕರೇ ಪೆಂಡಾಲ್ ಕಾವಲಿಗೆ 24*7 ವಾಲಠ ಯರಗಳ ನೇಮಕ ಮಾಡಬೇಕು. ಮೇರವಣಿ ಮಾರ್ಗ ಬದಲಾವಣೆ ಮಾಡುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ  ಬ್ಯಾನರ ಮತ್ತು ಬಂಟಿಂಗ್ ಅಳವಡಿಕೆಗೆ ಅನುಮತಿ  ಕಡ್ಡಾಯವಾಗಿದೆ. ಯಾವುದೆ ಧರ್ಮ ಗಳಿಗೆ  ಧಕ್ಕೆಯಾಗಬಾರದು.   ಸಾರ್ವಜನಿಕ   ಗಣೇಶ್ ಮೂರ್ತಿಗಳ  ವೀಕ್ಷಣೆಗೆ  ಸಾರ್ವಜನಿಕರು ಬಂದಾಗ ಯಾವುದೇ ನೂಕು ನುಗ್ಗಲು ಉಂಟಾಗದಂತೆ ವ್ಯವಸ್ಥೆ ಮಾಡಬೇಕು. ಸಿ ಸಿ ಕ್ಯಾಮರಾ ಅಳವಡಿಸಬೇಕು. ಡಿಜೆ ಬಳಕೆ ಗೆ ಅವಕಾಶ ಇರುವುದಿಲ್ಲ. ಹಾಗಾಗಿ ಸ್ಥಳೀಯ ಕಲಾ ತಂಡಗಳಿಗೆ  ಅವಕಾಶ ನೀಡಿ, ನಮ್ಮ ಕಲೆ  ಪ್ರೋತ್ಸಾಹಿಸಬೇಕು.   120 ಡೆಸಿಬಲ್ ಮಿರಿ  ಧ್ವನಿ ವರ್ಧಕ ಬಳಕೆ ಮಾಡಬಾರದು. ಹಬ್ಬಗಳನ್ನು ಶಾಂತಿಯುತ ಹಾಗೂ ಸೌಹಾರ್ದ ತೆ ಯಿಂದ ಆಚರಿಸೋಣ ಎಂದು ಹೇಳಿದರು.  

ವಿವಿಧ ತಾಲೂಕುಗಳಿಂದ ಆಗಮಿಸಿ ದ ಗಣೇಶ್ ಮಂಡಳಿ ಮುಖಂಡರು ಹಾಗೂ ಅಂಜುಮನ್ ಇಸ್ಲಾಂ ಕಮಿಟಿ ಮುಖಂಡರು ಮಾತನಾಡಿ, ಡಿಜೆ ಬಳಕೆ ಗೆ, ರಸ್ತೆ ದುರಸ್ಥಿ ಗೆ ಹಾಗೂ  ಪೊಲೀಸ್ ಬಂದೋಬಸ್ತ ಗೆ  ಮನವಿ ಮಾಡಿಕೊಂಡರು.ಸಭೆಯಲ್ಲಿ ಹೆಚ್ಚುವರಿ ಎಸ್ ಪಿ  ಲಕ್ಷ್ಮಣ ಶಿರಕೋಳ,  ಸವಣೂರ ಉಪವಿಭಾಗಾಧಿಕಾರಿ ಶುಭಂ ಶುಕ್ಲ,  ಹಾವೇರಿ ಉಪವಿಭಾಗಾಧಿಕಾರಿ  ಕಲ್ಯಾಣಿ ಕಾಂಬ್ಳೆ,  ಜಿ. ಪ ಠ  ಉಪಕಾರ್ಯ ದರ್ಶಿ  ಫುನಿತ್,  ಸಮಾಜದ ಮುಖಂಡರು ಉಪಸ್ಥಿತರಿದ್ದರು.