ಏಡ್ಸ್‌ ಮುಕ್ತ ಭಾರತಕ್ಕೆ ಎಲ್ಲರೂ ಕೈಜೊಡಿಸೋಣ ಪ್ರಾಚಾರ್ಯ: ಉಷಾದೇವಿ ಹಿರೇಮಠ

ಏಡ್ಸ್‌ ಮುಕ್ತ ಭಾರತಕ್ಕೆ  ಎಲ್ಲರೂ ಕೈಜೊಡಿಸೋಣ ಪ್ರಾಚಾರ್ಯ: ಉಷಾದೇವಿ ಹಿರೇಮಠ Let's all join hands for an AIDS-free India, Principal: Ushadevi Hiremath

                 ಕೊಪ್ಪಳ  02: ಏಡ್ಸ್‌ ಒಂದು ಮಹಾಮಾಯೆ ಕಾಯಿಲೆ ಇದರಿಂದ ಭಾರತವನ್ನು ಮುಕ್ತಗೋಳಿಸಲು ಎಲ್ಲರೂ ಕೈಜೊಡಿಸೋಣ ಎಂದು ಪ್ರಾಚಾರ್ಯರಾದ ಶ್ರೀಮತಿ ಉಷಾದೇವಿ ಹಿರೇಮಠ ರವರು ಹೇಳಿದರು.  ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಕೊಪ್ಪಳ ಯುವ ರೆಡ್ ಕ್ರಾಸ್  ಘಟಕ ಕೊಪ್ಪಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಏಡ್ಸ್‌ ಜಾಗೃತಿ ದಿವಸ ಕಾರ್ಯಕ್ರಮಕ್ಕೆ ಚಾಲನೆ ನೀಡುವುದರ ಮೂಲಕ  ಮಾತನಾಡಿದ ಅವರು ಏಡ್ಸ್‌ ಕಾಯಿಲೆ ಭಯಾನಕವಾದದ್ದು  ಇದು ಎಲ್ಲಾ ರೋಗಗಳಿಗಿಂತ ಹೆಚ್ಚು ಅಪಾಯಕಾರಿ ರೋಗ ಇದು ವಾಸಿಯಾಗದ ರೋಗವಾಗಿದ್ದು  ಈ ರೋಗದ ಕುರಿತು ಭಯ ಬೇಡ ಜಾಗೃತಿ ಮುಖ್ಯವಾಗಿದೆ ಆದರೆ ಪ್ರತಿಯೋಬ್ಬರು ನಿಮ್ಮ ಸುತ್ತಮುತ್ತಲಿನ ಜನರಿಗೆ  ಇದರ ಕುರಿತು ಜಾಗೃತಿ ಮೂಡಿಸುವುದರ ಮೂಲಕ ಜನರ ಭಾವನೆಯಲ್ಲಿರುವ ಕೀಳರಿಮೇಯನ್ನು ಹೂಗಲಾಡಿಸಲು ನೀವು ಹೆಚ್ಚು ಪ್ರಯತ್ನಿಸಬೇಕು ಅಂದಾಗ ಏಡ್ಸ್‌ ಮುಕ್ತ ಭಾರತದ ನಿರ್ಮಾಣ ಸಾದ್ಯ   ಎಂದರು. 

          ಎನ್‌.ಎಸ್‌.ಎಸ್‌. ಕಾರ್ಯಕ್ರಮಾಧಿಕಾರಿ ಹಾಗೂ ಉಪಪ್ರಾಚಾರ್ಯರಾದ ಶ್ರೀ ಬಸವರಾಜ ಎಸ್‌.ಎಮ್‌. ಮಾತನಾಡಿ ವಿಶ್ವ ಏಡ್ಸ್‌ ದಿನಾಚರಣೆಯ ಆಚರಣೆಯನ್ನು 1 ಡಿಸೆಂಬರ್ ರಂದು ಏಕೆ ಆಚರಿಸುತ್ತಾರೆ ಎಂದರೆ 1987 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿ ಜೇಮ್ಸ್‌ ಡಬ್ಲ್ಯೊ ಬನ್ ಮತ್ತು ಥಾಮಸ್ ನೆಟ್ಟರ್ ರವರು ಏಡ್ಸ್‌ ಜಾಗೃತಿ ಮೂಡಿಸಲು ವಿಶ್ವ ಮಟ್ಟದಲ್ಲಿ ದಿನಾಚರಣೆಯು ಮುಖ್ಯವಾಗಿರುತ್ತದೆ ಎಂದು ಒತ್ತಾಯಿಸಿದರು. ನಂತರ 1988ರಿಂದ ಪ್ರತಿವರ್ಷ  1 ಡಿಸೆಂಬರ್ ರಂದು ವಿಶ್ವ ಏಡ್ಸ್‌ ದಿನಾಚರಣೆಯ ಆಚರಣೆಯನ್ನು ಈ ರೋಗದಿಂದ ಪ್ರಾಣಕಳೆದುಕೊಂಡವರನ್ನು ನೆನೆಯುವ ಸಲುವಾಗಿ ಮತ್ತು ಈ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ   ಆಚರಿಸಲಾಗತ್ತದೆ. ಈ ಕಾಯಿಲೆ ಬಗ್ಗೆ ಮುನ್ನೇಚ್ಚರಿಕೆ ವಹಿಸಿದರೆ ಇದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾದ್ಯ ಎಂದರು