‘ಧಾರವಾಡ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಮಹಿಳೆಯರು’ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ

‘ಧಾರವಾಡ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಮಹಿಳೆಯರು’ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ   Lecture program on the topic 'Women who enriched Dharwad theatre'

ಧಾರವಾಡ 29 :  ಕರ್ನಾಟಕ ವಿದ್ಯಾವರ್ಧಕ ಸಂಘವು “ದಿ. ನಿರ್ಮಲಾ ಶಶಿಧರ ಪಾಟೀಲ ದತ್ತಿ” ಅಂಗವಾಗಿ ದಿ. 30 ರಂದು ಸಂಜೆ 6 ಗಂಟೆಗೆ ಸಂಘದ  ರಾ.ಹ. ದೇಶಪಾಂಡೆ ಸಭಾಭವನದಲ್ಲಿ ‘ಧಾರವಾಡ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಮಹಿಳೆಯರು’ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ.  

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಜೈನ ಅಧ್ಯಯನ ಪೀಠದ ಸಂಯೋಜಕ ಡಾ. ಜಿನದತ್ತ ಅ. ಹಡಗಲಿ ಅಧ್ಯಕ್ಷತೆ ವಹಿಸುವರು. ಧಾರವಾಡ ರಂಗಕರ್ಮಿ, ರಂಗ ಸಮಾಜದ ಮಾಜಿ ಸದಸ್ಯ ಸಿದ್ಧರಾಮ ಹಿಪ್ಪರಗಿ ಅತಿಥಿ ಉಪನ್ಯಾಸ ನೀಡುವರು. ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.                                   

ನಿರ್ಮಲಾ ಶಶಿಧರ ಪಾಟೀಲ 1967ರಲ್ಲಿ ರಾಣೆಬೆನ್ನೂರಿನ ಎಸ್‌.ಎಸ್‌. ವಡ್ಡಿನಕಟ್ಟಿ ಇವರ ದ್ವಿತೀಯ ಮಗಳಾಗಿ ಜನಿಸಿ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರಾಜ್ಯನೀತಿ ಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆದು ಕಲಿಕೆಯಲ್ಲಿಯೇ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ 1994ರಲ್ಲಿ ಕಲಾವಿದ ಶಶಿಧರ ಪಾಟೀಲರ ಜೊತೆಗೆ ಮದುವೆಯಾದರು. 2003 ರಲ್ಲಿ ಎಲ್‌.ಐ.ಸಿ. ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಾ ರಂಗಭೂಮಿ, ಚಲನಚಿತ್ರ, ಕಿರುತೆರೆಯಲ್ಲಿ ಪಾತ್ರ ನಿರ್ವಹಣೆ ಮಾಡಿದ್ದಾರೆ. 1998 ರಲ್ಲಿ ನೀತೀಶನಿಗೆ ಜನ್ಮಕೊಟ್ಟು ಮಗನ ಏಳ್ಗೆಗೆ ಶ್ರಮಿಸಿದರು. 2016ರಲ್ಲಿ ‘ಕಾಲೇಜ ಮಾಫಿಯಾ’ ಎಂಬ ಚಲನಚಿತ್ರಕ್ಕೆ ಕಥಾನಾಯಕನಾಗಿ ಮಗನಿಗೆ ಅವಕಾಶ ದೊರೆಯುವಂತೆ ಮಾಡಿದರು.ಮಗ ನೀತೀಶ ಈಗ ಬಿ.ಟಿ.ಎ.ದಲ್ಲಿ ಪದವಿ ಪಡೆದು ಚಲನಚಿತ್ರ ಕಿರುತೆರೆಯಲ್ಲಿ ಕಾರ್ಯನಿರ್ವಹಿಸುತ್ತಿರುವರು. ಶ್ರೀಮತಿ ನಿರ್ಮಲಾ ಪಾಟೀಲ ಅವರು 2017 ಜೂನ 30 ರಂದು ಧಾರವಾಡದಲ್ಲಿ ನಿಧನರಾದರು. ಅವರ ಪುತ್ರ ತಮ್ಮ ತಾಯಿಯ ಸ್ಮರಣಾರ್ಥ 2017 ರಲ್ಲಿ ಸಂಘದಲ್ಲಿ ದತ್ತಿನಿಧಿ ಇಟ್ಟು ‘ರಂಗಭೂಮಿ ಮತ್ತು ಸಮಾಜಸೇವೆ’ಗೆ ಸಂಬಂಧಪಟ್ಟ ಕಾರ‌್ಯಕ್ರಮ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಬನ್ನಿ ಕಾರ‌್ಯಕ್ರಮದಲ್ಲಿ ಭಾಗವಹಿಸಿ.