‘ಪರೀಕ್ಷೆಗಳು ಅಂದು-ಇಂದು’ ಉಪನ್ಯಾಸ ಕಾರ್ಯಕ್ರಮ
Lecture program on 'Exams Then and Now'
ಲೋಕದರ್ಶನ ವರದಿ
‘ಪರೀಕ್ಷೆಗಳು ಅಂದು-ಇಂದು’ ಉಪನ್ಯಾಸ ಕಾರ್ಯಕ್ರಮ
ಧಾರವಾಡ 11: ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ವಿಜಯದ ಮೆಟ್ಟಿಲುಗಳನ್ನು ಒಂದೊಂದಾಗಿ ಹತ್ತಲು ಸಹಕರಿಸುವವು. ಹೆಚ್ಚಿನ ಅಂಕ ಗಳಿಸಲು ಆಳವಾದ ಅಧ್ಯಯನ ಬಹಳ ಮುಖ್ಯ. ಪರೀಕ್ಷೆ ಬಗ್ಗೆ ಸಕಾರಾತ್ಮಕ ಚಿಂತನೆ ಮುಖ್ಯ ಎಂದು ಧಾರವಾಡದ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಅಧ್ಯಕ್ಷರಾದ ಮನೋಹರ ಎನ್. ಮೋರೆ ಅಭಿಪ್ರಾಯ ಪಟ್ಟರು
ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು, ಛತ್ರಪತಿ ಶಿವಾಜಿ ಮಹಾರಾಜ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಪರೀಕ್ಷೆಗಳು ಅಂದು-ಇಂದು’ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅತಿಥಿ ಉಪನ್ಯಾಸಕರಾದ ಶಿಕ್ಷಣ ತಜ್ಞ ಎಂ. ಎಂ. ಚಿಕ್ಕಮಠ ಉಪನ್ಯಾಸ ನೀಡಿ, ಪರೀಕ್ಷೆಗಳು ಜೀವನದ ಅವಿಭಾಜ್ಯ ಅಂಗವಿದ್ದಂತೆ. ವಿದ್ಯಾರ್ಥಿಗಳು ಆತ್ಮವಿಶ್ವಾಸ ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ಜೀವನದಲ್ಲಿ ಯಶಸ್ಸು ಸುಮ್ಮನೆ ಸಿಗದು, ನಿರಂತರ ಪ್ರಯತ್ನ ಅಗತ್ಯ. ಅಧ್ಯಯನದಲ್ಲಿ ಕಂಠಪಾಠ ಪ್ರವೃತ್ತಿ ಸರಿಯಲ್ಲ. ಪಠ್ಯಪುಸ್ತಕವೇ ವಿದ್ಯಾರ್ಥಿಗಳ ಸೊತ್ತು. ಗೈಡ್, ಡೈಜೆಸ್ಟ್ ಮೇಲೆ ಅವಲಂಬನೆ ಬೇಡ. ಮನಸ್ಸು ಗೊಂದಲದಲ್ಲಿದ್ದಾಗ ಓದಬಾರದು. ಆಸಕ್ತಿ ಅಭಿರುಚಿ ಮುಖ್ಯ. ತ್ಯಾಗ, ದೃಢ ನಿರ್ಧಾರ ಬಹಳ ಮುಖ್ಯ. ಪರೀಕ್ಷೆ ಬಗ್ಗೆ ಭಯ ಬೇಡ. ಭಯ ನಿಮ್ಮ ಶಕ್ತಿ ಕುಗ್ಗಿಸುತ್ತದೆ. ಜ್ಞಾನಾರ್ಜನೆಯೇ ನಿಮ್ಮ ಮುಖ್ಯ ಗುರಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡದ ಮರಾಠ ವಿದ್ಯಾ ಪ್ರಸಾರಕ ಮಂಡಳದ ಗೌರವ ಕಾರ್ಯದರ್ಶಿ ರಾಜು ಆರ್. ಬಿರಜೆನವರ ಮಾತನಾಡಿ, ಕವಿವ ಸಂಘವು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕಾಗಿ ಮಾಡುತ್ತಿರುವ ಈ ಪ್ರಯತ್ನ ಅಭಿನಂದನೀಯ. ಇಂತಹ ಕಾರ್ಯಕ್ರಮ ಮಕ್ಕಳಲ್ಲಿ ಪರಿಣಾಮಕಾರಿ ಬದಲಾವಣೆ ಖಂಡಿತಾ ತರುತ್ತದೆ ಎಂದು ಹೇಳಿದರು.
ವೇದಿಕೆಯ ಮೇಲೆ ಧಾರವಾಡದ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ನಿರ್ದೇಶಕರಾದ ರಾಜು ಕಾಳೆ, ಶಿವಾಜಿ ಸೂರ‌್ಯವಂಶಿ, ಶಿಕ್ಷಣ ಮಂಟಪದ ಸಲಹಾ ಸಮಿತಿಯ ಪ್ರೊ ಬಿ. ಎಂ. ಕೋಟಿಗೌಡ್ರ, ಶ್ರೀಕಾಂತ ಯಲಿಗಾರ, ಚಂದ್ರು ಮುತ್ತಗಿ, ಸೀತಾ ಸಾತಿಹಾಳ ಇದ್ದರು.
ಪ್ರಾಚಾರ್ಯ ಶೈಲಶ್ರೀ ಎಮ್. ಸಂಕೋಜಿ ಸ್ವಾಗತಿಸಿ, ನಿರೂಪಿಸಿದರು. ಕವಿವ ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ, ಮಾತನಾಡಿದರು. ಸವಿತಾ ನೆಲ್ಲಿಗಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಕೆ.ಜಿ. ದೇವರಮನಿ ಸೇರಿದಂತೆ ಪ್ರಾಧ್ಯಾಪಕರು, 300 ವಿದ್ಯಾರ್ಥಿಗಳು ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 