‘ಸ್ವಚ್ಚೋತ್ಸವ’ ಕಾರ್ಯಕ್ರಮಕ್ಕೆ ಚಾಲನೆ
Launch of the 'Cleanliness Festival' program
ತಾಳಿಕೋಟೆ 17:ಪಟ್ಟಣದ ಪುರಸಭೆ ವತಿಯಿಂದ ಸ್ವಚ್ಛತೆಯ ಕುರಿತು ಜನಜಾಗೃತಿಗಾಗಿ “ಸ್ವಚ್ಚೋತ್ಸವ’ ಕಾರ್ಯಕ್ರಮವನ್ನು ಸೋಮವಾರ ಬೆಳಿಗ್ಗೆ ಆಯೋಜಿಸಿತ್ತು.ಇದರಂಗವಾಗಿ ಪಟ್ಟಣದ ಖಾಸ್ಗತೇಶ್ವರಮಠದಿಂದ ಎಸ್.ಕೆ.ನಗರದ ಉದ್ಯಾನದವರೆಗೆ ಬೈಕ್ ರ್ಯಾಲಿ ಮಾಡಲಾಯಿತು.
ಎಸ್.ಕೆ.ಉದ್ಯಾನದಲ್ಲಿ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಖಾಸ್ಗತೇಶ್ವರಮಠದ ಪೀಠಾಧಿಪತಿ ಸಿದ್ಧಲಿಂಗದೇವರು, ನಗರದ ಸ್ವಚ್ಛತೆಯಿಂದ ನಗರದ ಸೌಂದರ್ಯ ಹೆಚ್ಚುವುದು. ನಾಗರಿಕರ ಆರೋಗ್ಯದ ಸುಧಾರಣೆಯೂ ಆಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮನೆ, ಮನೆಯಂಗಳದ ಸ್ವಚ್ಛತೆಯ ಜೊತೆಗೆ ಕಸವನ್ನು ಹಾದಿ, ಬೀದಿಗಳಲ್ಲಿ, ಚರಂಡಿಗಳಲ್ಲಿ ಚೆಲ್ಲಬಾರದು, ಪುರಸಭೆಯ ಕಸ ಸಂಗ್ರಹದ ವಾಹಗಳಿಗೆ ಮನೆಯ ಕಸವನ್ನು ನೀಡಬೇಕು. ಮನೆಯ ಕಸವನ್ನು ಹಸಿ ತ್ಯಾಜ್ಯ, ಒಣ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ನೀಡಬೇಕು. ಜೀವ ಜಗತ್ತಿಗೆ ಅಪಾಯಕಾರಿಯಾಗಿ ಪರಿಣಮಿಸಿರುವ ಪ್ಲಾಸ್ಟಿಕ್ ಬಳಕೆಯನ್ನು ಹಂತಹಂತವಾಗಿ ಕಡಿಮೆಗೊಳಿಸುತ್ತ ಹೋಗಬೇಕು. ಪ್ಲಾಸ್ಟಿಕ್ ಚೀಲ ಬಳಸದೇ ಬಟ್ಟೆ ಚೀಲಗಳನ್ನು ಬಳಸಬೇಕು ಎಂದರು.
ಇದಕ್ಕೂ ಮೊದಲು ಉದ್ಯಾನದ ಸ್ವಚ್ಛತೆಯಲ್ಲಿ ಪಾಲ್ಗೊಂಡರು. ಸ್ವಚ್ಚತಾ ರ್ಯಾಲಿ ಹಾಗೂ ಪಟ್ಟಣದ ಎಸ್ ಕೆ ನಗರ ಉದ್ಯಾನವನ ‘ಸ್ವಚ್ಚೋತ್ಸವ’ ಕಾರ್ಯಕ್ರಮ ದಲ್ಲಿ ಪಟ್ಟಣದ ಹಸಿರು ಸಂಪದ ಬಳಗದ ಉಪಾಧ್ಯಕ್ಷರುಗಳಾದ ಜೈಸಿಂಗ ಮೂಲಿಮನಿ, ಶಫೀಕ ಇನಾಮದಾರ, ಆರಿ್ವ.ಜಾಲವಾದಿ, ಸಂಚಾಲಕ ಎಸ್.ಎಸ್.ಗಡೇದ, ಪದಾಧಿಕಾರಿಗಳಾದ ಪ್ರಶಾಂತ ಜನಾದ್ರಿ, ಅರಣ್ಯ ಇಲಾಖೆಯ ಮಹಾಂತೇಶ ಹಾದಿಮನಿ, ಪುರಸಭೆಯ ಹಿರಿಯ ಆರೋಗ್ಯ ನೀರೀಕ್ಷಕ ಫಿರೋಜ ಮುಲ್ಲಾ, ಕಿ.ಆ.ನಿ. ರಾದ ಶಿವಾನಂದ ಜುಮನಾಳ ಮತ್ತು ರಂಗನಾಥ ಅಜಮನಿ, ಸಿಬ್ಬಂದಿ ಸಹಾಯಕ ಶ್ರೀಪಾದ ಜೋಶಿ, ಲೆಕ್ಕಾಧಿಕಾರಿ ಸಿದ್ಧಲಿಂಗ ಚೊಂಡಿಪಾಟೀಲ, ಸಿದ್ದು ಕೊಳ್ಳಿ, ಅಶೋಕ ಕಟ್ಟಿಮನಿ, ಸಮುದಾಯ ಸಂಘಟಕರು, ಪೌರ ಕಾರ್ಮಿಕರು. ‘ಸ್ವಚ್ಛತೋತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ತಾಳಿಕೋಟೆ:ಪಟ್ಟಣದ ಪುರಸಭೆ ವತಿಯಿಂದ ಸ್ವಚ್ಛತೆಯ ಕುರಿತು ಜನಜಾಗೃತಿಗಾಗಿ “ಸ್ವಚ್ಚೋತ್ಸವ’ ಕಾರ್ಯಕ್ರಮವನ್ನು ಖಾಸ್ಗತೇಶ್ವರಮಠದ ಪೀಠಾಧಿಪತಿ ಸಿದ್ಧಲಿಂಗದೇವರು ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 