ನೂತನ ಸಿಪಿಐ ರಮೇಶ್ ಹನಾಪುರರಿಗೆ ಕುರುಬ ಸಮುದಾಯದ ಅಭಿನಂದನೆ

ನೂತನ ಸಿಪಿಐ ರಮೇಶ್ ಹನಾಪುರರಿಗೆ ಕುರುಬ ಸಮುದಾಯದ ಅಭಿನಂದನೆ  Kuruba community congratulates new CPI leader Ramesh Hanapura

ಲೋಕದರ್ಶನ ವರದಿ   

 ಮುಂಡಗೋಡ  21: ಇಲ್ಲಿನ ಪೊಲೀಸ್ ಠಾಣೆಗೆ ನೂತನ ಸಿಪಿಐ ಆಗಿ ಆಗಮಿಸಿರುವ ರಮೇಶ್ ಹನಾಪುರ ಅವರಿಗೆ ಕುರುಬ ಸಮುದಾಯದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಕುರುಬ ಸಮುದಾಯದ ಮುಖಂಡರು ಸಿಪಿಐ ರಮೇಶ್ ಹನಾಪುರ ಹಾಗೂ ಪಿಎಸ್‌ಐ ಮಂಜುನಾಥ್ ಗೌಡರ್ ಅವರಿಗೆ ಶಾಲು ಹೊದಿಸಿ ಗೌರವಿಸಿದರು. ಅವರ ಸೇವಾ ಅವಧಿಯಲ್ಲಿ ತಾಲೂಕಿನ ಜನತೆಗೆ ಉತ್ತಮ ಪೊಲೀಸ್ ಸೇವೆ ದೊರಕಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕುರುಬ ಸಮುದಾಯದ ಅಧ್ಯಕ್ಷ ಶಿವಾನಂದ ಕುರುಬರ, ರಾಜು ಗುಬ್ಬಕನವರ, ಎಸ್‌.ಎಸ್‌. ಪಾಟೀಲ, ಮಂಜುನಾಥ ಕೋಣಕೇರಿ, ಯಲ್ಲಪ್ಪ ಕುರುಬರ, ಬಸವರಾಜ ತನಕೇದಾರ, ಮಂಜು, ರವಿ ಮಲ್ಲೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.