ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ  Krishna Janmashtami celebrations at school

ಲೋಕದರ್ಶನ ವರದಿ 

ಹಾವೇರಿ ಸೆ.4: ನಗರದ ಪ್ರತಿಷ್ಠಿತ ಜೆ.ಪಿ. ರೋಡ್ಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳು ರಾಧ ಹಿ ಕೃಷ್ಣರ ವೇಷ ಧರಿಸಿ ಸಂಭ್ರಮಿಸಿದರು.  

ಶಾಲೆಯ ವಿದ್ಯಾರ್ಥಿಗಳು ರಾಧೆ ಹಾಗೂ ಕೃಷ್ಣರ ವೇಷ ಧರಿಸಿ ಗಮನ ಸೆಳೆದರು. ಶಿಕ್ಷಕರು ಮಕ್ಕಳಿಗೆ ಶ್ರೀಕೃಷ್ಣನ ಜೀವನ, ಆದರ್ಶಗಳು ಹಾಗೂ ಜನ್ಮಾಷ್ಟಮಿಯ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.