ಐಪಿಎಸ್‌ಸಿ ಯೋಗ ಸ್ಪರ್ಧೆಯಲ್ಲಿ ಮಿಂಚಿದ ಕಿತ್ತೂರು ಬಾಲಕಿಯರು

ಐಪಿಎಸ್‌ಸಿ ಯೋಗ ಸ್ಪರ್ಧೆಯಲ್ಲಿ ಮಿಂಚಿದ ಕಿತ್ತೂರು ಬಾಲಕಿಯರು Kittur girls shine in IPSC Yoga competition

ಲೋಕದರ್ಶನ ವರದಿ 

ವಿಜಯಪುರ 11: ಆಗಸ್ಟ್‌ 4 ರಿಂದ ಆಗಸ್ಟ್‌ 6, 2026 ರವರೆಗೆ ಮಧ್ಯಪ್ರದೇಶ ಇಂದೋರಿನ ಎಮರಾಲ್ಡ್‌ ಹೈಟ್ ಶಾಲೆಯಲ್ಲಿ ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯ, ಅಖಿಲ ಭಾರತ ಐಪಿಎಸ್‌ಸಿ ಯೋಗ ಸ್ಪರ್ಧೆಯಲ್ಲಿ  ಕಲಾತ್ಮಕ, ಲಯಬದ್ಧ ಮತ್ತು  ಸಾಂಪ್ರದಾಯಿಕ ಯೋಗದಲ್ಲಿ 7 ಬೆಳ್ಳಿಯ ಪದಕಗಳನ್ನು ಗೆದ್ದಿದ್ದಾರೆ. 

17 ವರ್ಷಕ್ಕೆ ಒಳಪಟ್ಟ ವಿಭಾಗದವರು : ಕೆಡೆಟ್ ಮೇಘಾ ಪಿ.ಎಂ ಮತ್ತು ಕೆಡೆಟ್ 

ಆರೂಷಿ (ಜೋಡಿ ಲಯಬದ್ಧ) ಬೆಳ್ಳಿ ಪದಕ  

19 ವರ್ಷಕ್ಕೆ ಒಳಪಟ್ಟ ವಿಭಾಗದವರು : ಕೆಡೆಟ್ ಲಕ್ಷ್ಮೀ ಟಿ. (ವೈಯಕ್ತಿಕ ಕಲಾತ್ಮಕ) ಬೆಳ್ಳಿ ಪದಕ 

19 ವರ್ಷಕ್ಕೆ ಒಳಪಟ್ಟ ವಿಭಾಗದವರು : ಕೆಡೆಟ್ ಮನಸ್ವಿ ಮತ್ತು ಕೆಡೆಟ್ ವಿಹಾನಾ (ಕಲಾತ್ಮಕ ಜೋಡಿ) ಬೆಳ್ಳಿ ಪದಕ  

19 ವರ್ಷಕ್ಕೆ ಒಳಪಟ್ಟ ವಿಭಾಗದವರು : ಕೆಡೆಟ್ ಮನಸ್ವಿ ಮತ್ತು ಕೆಡೆಟ್ ದೇವಿಕಾ (ಲಯಬದ್ಧ ಜೋಡಿ) ಬೆಳ್ಳಿ ಪದಕ  

ಶಾಲಾ ತಂಡಕ್ಕೆ ದೈಹಿಕ ಶಿಕ್ಷಣ ಶಿಕ್ಷಕಿ ಡಾ. ಜಯಲಕ್ಷ್ಮೀ ಎಸ್ ತರಬೇತಿ ನೀಡಿದರು.