ಕಿಂಗ್ ಕೊಹ್ಲಿ 26ನೇ ಶತಕ: ಬೃಹತ್ ಮೊತ್ತದತ್ತ ಭಾರತ
ಪುಣೆ, ಅ 11: ನಾಯಕ ವಿರಾಟ್ ಕೊಹ್ಲಿ (ಔಟಾಗದೆ 104 ರನ್) ಶತಕ ಹಾಗೂ ಉಪ ನಾಯಕ ಅಜಿಂಕ್ಯಾ ರಹಾನೆ (ಔಟಾಗದೆ 58 ರನ್) ಅರ್ಧ ಶತಕದ ಬಲದಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬೃಹತ್ ಮೊತ್ತದತ್ತ ದಾಪುಗಾಲು ಇಟ್ಟಿದೆ. ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಗ್ಗೆ ಮೂರು ವಿಕೆಟ್ ಕಳೆದುಕೊಂಡು 273 ರನ್ ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ಮಧ್ಯಾಹ್ನದ ಭೋಜನ ವಿರಾಮ ವೇಳೆಗೆ 113 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿದೆ. 63 ರನ್ಗಳಿಂದ ಎರಡನೇ ದಿನವಾದ ಇಂದು ಬ್ಯಾಟಿಂಗ್ ಮುಂದುವರಿಸಿದ ನಾಯಕ ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ಮಾಡಿದರು. ಎಂದಿನಂತೆ ತಮ್ಮ ಸ್ವಾಭಾವಿಕ ಬ್ಯಾಟಿಂಗ್ ಮಾಡಿದ ಅವರು ಆಫ್ರಿಕಾ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದ ಅವರು ಸಮಚಿತ್ತದಿಂದ ಬ್ಯಾಟಿಂಗ್ ಮಾಡಿದರು. 183 ಎಸೆತಗಳಲ್ಲಿ 16 ಬೌಂಡರಿಯೊಂದಿಗೆ 104 ರನ್ ಗಳಿಸಿ ವೃತ್ತಿ ಜೀವನದ 26 ಟೆಸ್ಟ್ ಶತಕ ಪೂರೈಸಿದರು. ಮತ್ತೊಂದು ತುದಿಯಲ್ಲಿ ಕೊಹ್ಲಿ ಹೆಗಲು ನೀಡಿ ಅಜಿಂಕ್ಯಾ ರಹಾನೆ ಕೂಡ ಸೊಗಸಾಗಿ ಬ್ಯಾಟಿಂಗ್ ಮಾಡಿದರು. 161 ಎಸೆತಗಳಲ್ಲಿ ರಹಾನೆ ಎಂಟು ಬೌಂಡರಿಯೊಂದಿಗೆ ಅಜೇಯ 58 ರನ್ ದಾಖಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಎರಡನೇ ದಿನ ದಕ್ಷಿಣ ಆಫ್ರಿಕಾ ಬೌಲರ್ಗಳು ವಿಕೆಟ್ ತೆಗೆಯಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ, ಸಾಧ್ಯವಾಗಲಿಲ್ಲ. ಗುರುವಾರ ಕಗಿಸೋ ರಬಾಡ ಮೂರು ವಿಕೆಟ್ ಕಿತ್ತಿದ್ದರು. ಆದರೆ, ಶುಕ್ರವಾರ ಒಂದೇ-ಒಂದು ವಿಕೆಟ್ ತೆಗೆಯಲು ಹರಿಣಗಳು ಸಾಕಷ್ಟು ಪರದಾಡಿ ತಣ್ಣಗಾದರು. ಸಂಕ್ಷಿಪ್ತ ಸ್ಕೋರ್(ಭೋಜನ ವಿರಾಮ) ಭಾರತ ಪ್ರಥಮ ಇನಿಂಗ್ಸ್: 113 ಓವರ್ ಗಳಿಗೆ 356/3 (ಮಯಾಂಕ್ ಅಗರ್ವಲ್ 108, ವಿರಾಟ್ ಕೊಹ್ಲಿ ಔಟಾಗದೆ 104, ಅಜಿಂಕ್ಯಾ ರಹಾನೆ ಔಟಾಗದೆ 58, ಚೇತೇಶ್ವರ ಪೂಜಾರ 58; ಕಗಿಸೋ ರಬಾಡ 65 ಕ್ಕೆ 3)
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ 