ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
Khadeema arrested for stealing gold: 103.97 grams of gold worth Rs 15.73 lakh seized
ಬೆಳಗಾವಿ : ಮನೆಯಲ್ಲಿ ಕೆಲಸಕ್ಕೆ ನೀಡಿದ ಗಟ್ಟಿ ಚಿನ್ನ ಹಾಗೂ ದುರಸ್ತಿಗೆ ನೀಡಿದ ಚಿನ್ನದ ಹಾರವನ್ನು ದೋಚಿಕೊಂಡು ಪರಾರಿಯಾಗಿದ್ದ ಖದೀಮನನ್ನು ಶಹಾಪೂರ ಪೊಲೀಸರು ಬಂಧಿಸಿದ್ದು, ಬಂಧಿತನಿಂದ 15,73,370 ರೂ. ಮೌಲ್ಯದ 103.97 ಗ್ರಾಂ ಚಿನ್ನಾಭರಣವನ್ನು ವಧಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಚಿನ್ಕ ಕದ್ದ ಪ್ರಕರಣ ದಲ್ಲಿ ಕೃಷ್ಣಾ ಮೋಹನ ಮೈತಿ,(36) (ಸಾ: ವಿಜಯವಾಡಾ ರಾಜ್ಯ ಆಂಧ್ರಪ್ರದೇಶ, ಹಾಲಿ ಶಹಾಪೂರ ಬೆಳಗಾವಿ) ಬಂಧಿತ ಆರೋಪಿಯಾಗಿದ್ದಾನೆ. ಬೆಳಗಾವಿಯ ಶಹಾಪೂರ ಹದ್ದಿಯ ನಾರ್ವೆಕರ ಗಲ್ಲಿಯ ದೂರುದಾರರ ಮನೆಯಲ್ಲಿ ಕೆಲಸಕ್ಕೆ ನೀಡಿದ ಗಟ್ಟಿ ಬಂಗಾರ ಮತ್ತು ರೀಪೇರಿ ಮಾಡಲು ನೀಡಿದ ಬಂಗಾರದ ಹಾರವನ್ನು ದೋಚಿಕೊಂಡು ಹೋದ ಆರೋಪಿತನನ್ನು ವಶಕ್ಕೆ ಪಡೆದು, ಈತನ ಕಡೆಯಿಂದ ಗಟ್ಟಿ ಬಂಗಾರ ಮತ್ತು ಬಂಗಾರದ ಹಾರ ಸೇರಿ ಒಟ್ಟು 15,73,370 ರೂ ಮೌಲ್ಯದ 103.97 ಗ್ರಾಂ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ.
ನಗರ ಪೊಲೀಸ್ ಆಯುಕ್ತ ಹಾಗೂ ಉಪ-ಪೊಲೀಸ್ ಆಯುಕ್ತ(ಕಾ&ಸು) ಮತ್ತು ಉಪ-ಪೊಲೀಸ್ ಆಯುಕ್ತ(ಅ&ಸಂ) ಹಾಗೂ ಸಹಾಯಕ ಪೊಲೀಸ ಆಯುಕ್ತ ಮಾರ್ಕೇಟ ಉಪ-ವಿಭಾಗ ಬೆಳಗಾವಿ ಇವರ ಮಾರ್ಗದರ್ಶನದಲ್ಲಿ ಶಹಾಪೂರ ಪೊಲೀಸ ಠಾಣೆ ಅಪರಾಧ ಸಂಖ್ಯೆ 63/2026 ಕಲಂ: 316(2) ಬಿ.ಎನ್.ಎಸ್-2023 ನೇದ್ದರಲ್ಲಿ ಈ ದಾಳಿ ಮಾಡಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಎಸ್.ಎಸ್.ಸಿಮಾನಿ, ಪೊಲೀಸ್ ಇನ್ಸಪೆಕ್ಟರ, ಮಣಿಕಂಠ ಪೂಜಾರಿ,ಪಿ.ಎಸ್.ಐ,(ಕಾ&ಸು) ಶ್ರೀಮತಿ ಎಸ್.ಎನ್.ಬಸ್ವಾ, ಮ.ಪಿ.ಎಸ್.ಐ(ತನಿಖೆ) ಮತ್ತು ಸಿಬ್ಬಂದಿ ಜನರಾದ ಗಜಾನನ ಶಿರಸಂಗಿ, ಶಂಕರ ಗುಡದೈಗೊಳ, ಶ್ರೀಧರ ತಳವಾರ, ಅಜೀತ ಶಿಪೂರೆ, ಶಿವರಾಜ ಪಚ್ಚನ್ನವರ, ಶ್ರೀರಂಗ ಭಸ್ಯೆ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ರಮೇಶ ಅಕ್ಕಿ, ಮಹಾದೇವ ಕಾಸೀದ ಇವರು ಪ್ರಶಂಸನಿಯ ಕೆಲಸ ಮಾಡಿರುವದರಿಂದ ಇವರ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಪ್ರಶಂಸೆಯನ್ನು ವ್ಯಕ್ತಪಡಿಸಿರುತ್ತಾರೆ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 