ಸಮಾಜಕ್ಕೆ ಕಾಯಕ ಶರಣರ ಕೊಡುಗೆ ಅಪಾರ: ಶಾಸಕ ರಾಜುಗೌಡ
Kayak Sharan's contribution to society is immense: MLA Rajugowda
ದೇವರಹಿಪ್ಪರಗಿ 22: 12ನೇ ಶತಮಾನದಲ್ಲಿನ ಮೂಢನಂಬಿಕೆಗಳು, ಜಾತಿ ಪದ್ಧತಿ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಸಮ ಸಮಾಜಕ್ಕೆ ಕಾಯಕ ಶರಣರ ಕೊಡುಗೆ ಅಪಾರವಾದುದು ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು. ಪಟ್ಟಣದ ಕಲ್ಮೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ರವಿವಾರ ನಡೆದ ಮಡಿವಾಳ ಮಾಚಿದೇವ ಜನ್ಮ ಭೂಮಿ ಪ್ರತಿಷ್ಠಾನ ಕಲೆ, ಸಾಹಿತ್ಯ, ಸಂಸ್ಕೃತಿ ವೇದಿಕೆ 5ನೇ ವಾರ್ಷಿಕೋತ್ಸವ-2026, ರಾಷ್ಟ್ರೀಯ ವೀರ ಗಣಾಚಾರಿ ಪ್ರಶಸ್ತಿ ಪ್ರದಾನ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಹಾಗೂ ರಥೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಮಡಿವಾಳ ಮಾಚಯ್ಯ ಸೇರಿದಂತೆ ನೂರಾರು ಶರಣರು ಜೀವನ ಮೌಲ್ಯಗಳನ್ನು ವಚನಗಳು ಬರೆಯುವ ಮೂಲಕ ಮನುಷ್ಯನ ಉತ್ತಮ ಬದುಕಿಗೆ ಕಾರಣರಾದರು.
ಸತ್ಯ, ಶುದ್ಧ ಕಾಯಕದ ಮೂಲಕ ಜೀವನ ನಡೆಸಿ ತಮ್ಮ ಪರಿಣಾಮಕಾರಿಯಾದ ವಚನಗಳನ್ನು ರೂಪಿಸುವ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಮಾಡಿದ್ದರು. ಅವರ ವಚನಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿವೆ. ಅವರು ನೀಡಿರುವ ಸಂದೇಶಗಳನ್ನು ಎಲ್ಲರೂ ಪಾಲಿಸಿದ್ದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಅಂದಿನ ಅನುಭವ ಮಂಟಪವೇ ಇಂದಿನ ಸಂಸತ್‌ಗೆ ಮಾದರಿಯಾಗಿದೆ.
ಈ ನಿಟ್ಟಿನಲ್ಲಿ ಮಡಿವಾಳ ಮಾಚಿದೇವ ಜನ್ಮಭೂಮಿ ಪ್ರತಿಷ್ಠಾನ ವತಿಯಿಂದ ಹಲವಾರು ಒಳ್ಳೆಯ ಕಾರ್ಯಗಳ ನಡೆಯುತ್ತಿದ್ದು, ಪ್ರತಿಷ್ಠಾನಕ್ಕೆ ಬೇಕಾಗುವ ಸಹಾಯ, ಸಹಕಾರ ನೀಡುವುದಾಗಿ ಭರವಸೆ ನೀಡಿದರು. ದಿವ್ಯ ಸಾನಿಧ್ಯವನ್ನು ಸ್ಥಳೀಯ ಗದ್ದುಗಿ ಮಠದ ಮಡಿವಾಳೇಶ್ವರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಸಾನಿಧ್ಯವನ್ನು ಕೊಕಟನೂರ ಗದ್ದುಗಿ ಮಠದ ಮಡಿವಾಳೇಶ್ವರ ಸ್ವಾಮಿಗಳು ವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಡಿವಾಳ ಮಾಚಿದೇವರ ಜನ್ಮಭೂಮಿ ಪ್ರತಿಷ್ಠಾನದ ಸಂಸ್ಥಾಪಕ, ಅಧ್ಯಕ್ಷರಾದ ಬಿ.ಎಂ.ಪಾಟೀಲ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ರಾಷ್ಟ್ರೀಯ ವೀರ ಗಣಾಚಾರಿ ಪ್ರಶಸ್ತಿ ಪ್ರದಾನ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ಗೌರವ ಸನ್ಮಾನಿಸಿದ್ದು, ಇದಕ್ಕೆ ಹಲವಾರು ಜನ ಸಹಾಯ ಸಹಕಾರ ನೀಡಿದ್ದಾರೆ.ಶರಣರ ಜನ್ಮಸ್ಥಳ ದೇವರಹಿಪ್ಪರಗಿ ಅಭಿವೃದ್ಧಿಗೆ ಪ್ರತಿಷ್ಠಾನ ವತಿಯಿಂದ ಶ್ರಮಿಸುತ್ತಿರುವದಾಗಿ ತಿಳಿಸಿದರು.
ಅಧ್ಯಕ್ಷತೆಯನ್ನು ಕಾಶೀಪತಿ ದೇವಣಗಾಂವ ವಹಿಸಿದ್ದರು. ಪ್ರತಿಷ್ಠಾನ ಸಂಚಾಲಕರಾದ ಸದಾನಂದ ಬಬಲೇಶ್ವರ, ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರಾದ ಬಿ.ಬಿ.ಪಾಟೀಲ,ಪ.ಪಂ ಅಧ್ಯಕ್ಷರಾದ ಜಯಶ್ರೀ ದೇವಣಗಾಂವ, ಮುಖಂಡರುಗಳಾದ ಕೆ.ಡಿ.ಪಾಟೀಲ,ಡಾ. ಮಲ್ಲಿಕಾರ್ಜುನ ಮೇತ್ರಿ, ಹಾವಳಪ್ಪ ಮಸಬಿನಾಳ, ಸಂಗಣ್ಣ ತಡವಲಗ, ಪ್ರಭಾಕರ ಕುಲಕರ್ಣಿ, ಬಿ.ಜಿ.ಪಾಟೀಲ, ಸಿ.ಡಿ.ಗಚ್ಚಿನಮಠ, ವಿನೋದ ಪಾಟೀಲ, ಎ.ಎಂ.ತಾಂಬೋಳಿ(ವಕೀಲರು), ರಾಜೀವ್ ಗುತ್ತೇದಾರ, ಕಾಶಿನಾಥ ಸಾಲಕ್ಕಿ, ಸೋಮು ದೇವೂರ ಸೇರಿದಂತೆ ಪಟ್ಟಣದ ಪ್ರಮುಖರು ಗಣ್ಯರು ಹಾಗೂ ಇತರರು ಉಪಸ್ಥಿತರಿದ್ದರು. ನಿರೂಪಣೆ ಶಿಕ್ಷಕಿ ವಿಜಯಲಕ್ಷ್ಮಿ ನವಲಿ,ಬಿ.ಕೆ.ಪಾಟೀಲ ಸ್ವಾಗತಿಸಿದರು, ಪ್ರಾರ್ಥನಾ ಗೀತೆ ಸಿದ್ದು ಮೇಲಿನಮನಿ ಹಾಡಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 