ಕರೋನ ಸಂಕಷ್ಟ : ಆಯುರ್ವೇದ ಚಿಕಿತ್ಸೆಗೆ ಸರ್ಕಾರದ ಹಸಿರು ನಿಶಾನೆ

ಬೆಂಗಳೂರು, ಏ 15, ರಾಜ್ಯದಲ್ಲಿ ಕೊರೊನಾ ಸೋಂಕಿತ ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ನೀಡಲು  ರಾಜ್ಯ ಸರ್ಕಾರವು ಹಸಿರು ನಿಶಾನೆ ತೋರಿದೆ .ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ  ಮಾಡಿ ಮಾತುಕತೆ ಮಾಡಿದ ನಂತರ  ಆಯುರ್ವೇದ ವೈದ್ಯ ಡಾ.ಗಿರಿಧರ ಕಜೆ ಅವರಿಗೆ ಈ ವಿಷಯ ತಿಳಿಸಿದ್ದಾರೆ. ಸಿಎಂ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಆರಂಭದಲ್ಲಿ 10 ಮಂದಿ ಕೊರೊನಾ ಸೋಂಕಿತರಿಗೆ ಕೋವಿಡ್ ಆಸ್ಪತ್ರೆಯಲ್ಲೇ ಆಯುರ್ವೇದದ ಗುಳಿಗೆ ನೀಡಲಾಗುವುದು ಎಂದರು  ಅದರ ಫಲಿತಾಂಶ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.ಇನ್ನು ಎರಡೂ, ಮೂರು ದಿನಗಳಲ್ಲಿ ಇದು ಆರಂಭವಾಗಬಹುದು.ಸರ್ಕಾರದಿಂದ ಅಧಿಕೃತ ಆದೇಶ ಬಂದ ತಕ್ಷಣ ಈ ಔಷಧ ಪ್ರಯೋಗ ಆರಂಭವಾಗಲಿದೆ  ಸರ್ಕಾರ ಏನು ಸಲಹೆ ನೀಡಲಿದೆಯೋ  ಅದರಂತೆ ನಡೆದುಕೊಳ್ಳುವುದಾಗಿ ಕಜೆ ಸ್ಪಷ್ಟಪಡಿಸಿದರು.