ಕಪ್ಪಲಗುದ್ದಿ: ಭಾರಿ ಗಾಳಿ ಮಿಶ್ರಿತ ಮಳೆಗೆ ಶಾಲೆಯ ಮೇಲ್ಚಾವಣಿ ಹಾರಿ ಹಾನಿ;
Kappalaguddi: Heavy rain mixed with wind caused damage to the roof of the school;
ಪಾಲಬಾವಿ 30: ಸಮೀಪದ ಕಪ್ಪಲಗುದ್ದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಸಿಂಗಾಡಿ ತೋಟ ಶಾಲೆಯಲ್ಲಿ ಕಳೆದ ರವಿವಾರ ಭಾರಿ ಪ್ರಮಾಣದಲ್ಲಿ ಗಾಳಿ ಮಿಸ್ರಿತ ಮಳೆಯಿಂದ ಶಾಲೆಯ ಮೇಲ್ಭಾಗದ ಪತ್ರಾಸ್ ಚಾವಣಿಯು ಹಾರಿ ಹೋಗಿ ದೂರಳತೆಯಲ್ಲಿ ಬಿದ್ದು ಭಾರಿ ಪ್ರಮಾಣ ಹಾನಿ ಸಂಭವಿಸಿದೆ.
ಮಳೆಗಾಲದಲ್ಲಿ ಕಾಂಕ್ರೀಟ್ ಇದ್ದ ಶಾಲೆಕಟ್ಟಡವು ಸೋರುತ್ತಿತ್ತು. ಕಳೆದ ಐದಾರು ವರ್ಷಗಳ ಹಿಂದೆ ತಾಲೂಕು ಪಂಚಾಯಿತಿ ಅನುದಾನದಲ್ಲಿ ಅಂದಾಜು 3 ಲಕ್ಷ ರೂಗಳ ವೆಚ್ಚದಲ್ಲಿ ಶಾಲೆಯ ಮೇಲ್ಭಾಗದಲ್ಲಿ ಪತ್ರಾಸ್ ನಿರ್ಮಿಸಲಾಗಿತ್ತು, ಅದರೆ ಗಾಳಿಯ ರಭಸಕ್ಕೆ ಮೇಲ್ಚಾವಣಿಯೂ ಹಾರಿ ಹೋಗಿ ಹಾನಿ ಸಂಭವಿಸಿದೆ.ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಸಂಜೀವ್ ಸಿಂಗಾಡಿ, ಶಾಲೆಯ ಪ್ರಧಾನಗುರು ನಾಮದೇವ ತೈಕಾರ, ರೈತ ಮುಖಂಡ ಲಕ್ಷ್ಮಣ ತುಕ್ಕಾನಟ್ಟಿ, ಧರೆಪ್ಪ ಮಂಗಳೂರು ಇತರರು ಇದ್ದರು ಬಾಕ್ಸ್ ಲೈನ್ ==="
ತಪ್ಪಿದ ಭಾರಿ ಅನಾಹುತ
ಶಾಲೆಯು ರಜೆ ಇರುವ ಕಾರಣ ಕೆಲವು ದಿನಗಳ ಹಿಂದೇ ಭಾರಿ ಗಾಳಿ ಹಾಗೂ ಸಾದಾರಣ ಮಳೆ ಆದ ಕಾರಣ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿಂಗಾಡಿ ತೋಟದ ಶಾಲೆಯ ಮೇಲ್ಭಾಗದಲ್ಲಿ ಕಬ್ಬಿನ ಪತ್ರಾಸ್ ಹಾಗೂ ಕಬ್ಬಿನ ಸಲಾಕೆಗಳ ಸಮೇತ ಹಾರಿ ಹೋಗಿ ಹಾನಿ ಸಂಭವಿಸಿದ್ದು ಶಾಲೆಯು ರಜೆ ಇದ್ದ ಕಾರಣ ಮಕ್ಕಳ ಇರಲಿಲ್ಲ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ಬರುವ ಜೂನ್ ತಿಂಗಳಿಂದ ಶಾಲೆಯು ಆರಂಭವಾಗುತ್ತದೆ. ಮಳೆಯಲ್ಲಿ ಶಾಲೆಯ ಮೇಲ್ಚಾವಣಿಯು ಸೋರುವುದು, ಗ್ರಾಮ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆಯವರು ಎಚ್ಚೆತ್ತುಕೊಂಡು ಮತ್ತೆ ಪತ್ರಾಸ್ ಶೆಡ್ಡಿನ ಮೇಲ್ಚಾವಣಿ ನಿರ್ಮಿಸಿ ಕೊಡಬೇಕು"
ರಮೇಶ ಕಲ್ಲಾರ(ಅಧ್ಯಕ್ಷರು, ತಾಲೂಕು ರೈತ ಸಂಘ, ರಾಯಬಾಗ)
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 