ಕನ್ನಡ ಭಾಷೆ, ಕನ್ನಡಿಗರ ಭಾವನೆಗಳ ಸಂಸ್ಕೃತಿ: ಡಾ. ಅಲ್ಲಮಪ್ರಭುಶ್ರೀ
Kannada language, culture of Kannadigas' feelings: Dr. Allama Prabhushree
ಬೆಳಗಾವಿ 03: ಕನ್ನಡ ಭಾಷೆ ಮತ್ತು ಸಾಹಿತ್ಯ ಉಳಿಯಬೇಕಾದರೆ ನಾವು ಕೇವಲ ನವೆಂಬರ್ 1ನೇ ತಾರೀಕಿನ ಕನ್ನಡಿಗರಾಗಬಾರದು. ವರ್ಷದುದ್ದಕ್ಕೂ, ಜೀವನದುದ್ದಕ್ಕೂ ನಿರಂತರ ಕನ್ನಡ ಭಾಷೆಯನ್ನು ಬಳಸಬೇಕು ಮತ್ತು ಕನ್ನಡ ಕೇವಲ ಹೋರಾಟದ ಭಾಷೆಯಾಗದೆ ಅಭಿವೃದ್ಧಿಯ ಭಾಷೆಯಾಗಬೇಕು. ಕನ್ನಡ ಭಾಷೆ ನಮ್ಮ ಭಾವನೆಗಳ ಸಂಸ್ಕೃತಿಯಾಗಿದೆ ಅದನ್ನು ನಾವು ಗೌರವಿಸಬೇಕು ಎಂದು ನಾಗನೂರು ರುದ್ರಾಕ್ಷಿಮಠ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಬೆಳಗಾವಿ ಶಿವಬಸವ ನಗರದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವದ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಮಾತನಾಡಿದರು. ಕನ್ನಡದ ಗಡಿನಾಡು ಬೆಳಗಾವಿಯಲ್ಲಿ ಕನ್ನಡ ಭಾಷೆ ಉಳಿಯಲು, ಕರ್ನಾಟಕದಲ್ಲಿ ಬೆಳಗಾವಿ ಗಟ್ಟಿಯಾಗಿ ನೆಲೆಗೊಳ್ಳಲು ನಾಗನೂರು ಶ್ರೀ ರುದ್ರಾಕ್ಷಿ ಮಠದ ಸೇವೆ ಅಪಾರವಾದದು ಎಂದು ಸ್ಮರಿಸಿದರು.
ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ. ಹಿರೇಮಠ ಸಭೆಯ ಅಧ್ಯಕ್ಷತೆ ವಹಿಸಿ ಕನ್ನಡ ಪ್ರಾಚೀನ ಕಾಲದಿಂದಲೂ ಜಗತ್ತಿನ ಎರಡನೆಯ ಭಾಷೆಯಾಗಿದೆ, ಸುದೀರ್ಘ ಇತಿಹಾಸ ಉಳ್ಳ ಈ ಭಾಷೆಯನ್ನು ಕಾಪಾಡಿಕೊಂಡು ಸಮೃದ್ಧಗೊಳಿಸಬೇಕೆಂದರು ವೇದಿಕೆ ಮೇಲೆ ಸಾಧಕರಾದ ವಿಶ್ವನಾಥ ದೇವರು ಹಾಗೂ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಎಲ್ಲ ಅಂಗ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಉಪನ್ಯಾಸಕ ಏ.ಕೆ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ಪರ ನುಡಿಗಳನ್ನಾಡಿದರು, ಉಪನ್ಯಾಸಕಿ ಜಯಶ್ರೀ ಕೆಂಗೇರಿ ನಿರೂಪಿಸಿದರು. ಉಪನ್ಯಾಸಕ ರವಿರಾಜ ಖೋತ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 