ಕನ್ನಡ ವಿ.ವಿ. ವತಿಯಿಂದ ಮಕ್ಕಳಗೆ ಐತಿಹಾಸಿಕ ಪ್ರಜ್ಞೆ ಮೂಡಿಸುವ ಕಾರ್ಯಕ್ರಮ
Kannada University's program to instill historical awareness in children
ವಿಜಯನಗರ 14: ಮಕ್ಕಳಲ್ಲಿ ತಿಳುವಳಿಕೆ ಮೂಡಿಸಿ,ಹಂಪಿಯ ಇತಿಹಾಸ ಪರಂಪರೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕನ್ನಡ ವಿಶ್ವದ್ಯಾಲಯದಿಂದ ತಿಂಗಳಿಗೊಮ್ಮೆ ವಿಶೇಷ ಉಪನ್ಯಾಸ ಏರಿ್ಡಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹೆಚ್.ಆರ್ ಗವಿಯಪ್ಪ ತಿಳಿಸಿದರು. ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಂಪಿ ಹಾಗೂ ವಿಜಯನಗರ ಜಿಲ್ಲಾಡಳಿತ ದ ಸಹಯೋಗದಲ್ಲಿ ಹಂಪಿ ಉತ್ಸವ-2026 ರ ಪ್ರಯುಕ್ತ ಕಮಲಾ ಮಹಲ್ ವೇದಿಕೆಯಲ್ಲಿ ವಿಜಯನಗರ ಅಧ್ಯಯನ ಕುರಿತು ಆಯೋಜಿಸಲಾದ 28ನೇ ವಾರ್ಷಿಕ ವಿಚಾರ ಸಂಕಿರಣವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಹಂಪಿ ಅಭಿವೃದ್ದಿಗಾಗಿ ಭಾರತೀಯ ಪುರಾತತ್ವ ಇಲಾಖೆಗೆ ಹೊಸ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಂಪಿಯ ಎಲ್ಲಾ ದೇವಾಲಯಗಳು, ಸ್ಮಾರಕಗಳನ್ನು ಪ್ರವಾಸಿಗರು ಸುಗಮವಾಗಿ ವೀಕ್ಷಿಸಲು ಅನುಕೂಲವಾಗುವಂತೆ ಸ್ಮಾರಕಗಳನ್ನು ಸಂಪರ್ಕಿಸುವ ರಸ್ತೆ ನಿರ್ಮಿಸುಲು ಟ್ರಾವೆಲ್ ರೋಡ್ಸ್ ಯೋಜನೆಯನ್ನು ರೂಪಿಸಲಾಗಿದೆ. ಇದರಿಂದ ನೂರಾರು ಸ್ಮಾರಕಗಳನ್ನು ಪ್ರವಾಸಿಗರು ಸರಾಗವಾಗಿ ನೋಡಬಹುದು ಎಂದು ಶಾಸಕ ಗವಿಯಪ್ಪ ಹೇಳಿದರು.
ಕೂಡ್ಲಿಗಿ ಶಾಸಕ ಶ್ರೀನಿವಾಸ್ ಎನ್.ಟಿ ಮಾತನಾಡಿ ಸಾಮಾಜಿಕ ಮಾಧ್ಯಮಗಳ ಕಾಲದಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ಗೊಂದಲಯಮಯವಾಗಿದೆ. ಈ ಹಿನ್ನಲೆಯಲ್ಲಿ ವಿಜಯನಗರದ ಇತಿಹಾಸವನ್ನು ಯುವಜನರಿಗೆ ತಿಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಕನ್ನಡ ವಿಶ್ವವಿದ್ಯಾಲಯದಿಂದ ಹಂಪಿಯ ಕುರಿತು ಹೆಚ್ಚು ಅಧ್ಯಯನಗಳು ನಡೆದಿವೆ. ಆದರೆ ಇತ್ತೀಚಿಗೆ ವಿಶ್ವವಿದ್ಯಾಲಯ ಅನುದಾನದ ಕೊರತೆಯಿಂದ ಸೊರಗುತ್ತಿದ್ದು, ಇದಕ್ಕೆ ಪರಿಹಾರ ಕಲ್ಪಿಸಲು ಸರ್ಕಾರದೊಂದಿಗೆ ಮಾತನಾಡಲಾಗಿದೆ ಎಂದರು.
ಪುರಾತತ್ತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜ.ಎ ಮಾತನಾಡಿ ವಿಜಯನಗರ ಅಧ್ಯಯನ ಕುರಿತ ವಿಚಾರ ಸಂಕಿರಣ ಇತಿಹಾಸದ ಮಾರ್ಗದರ್ಶನ, ಪುನರ್ ಅವಲೋಕನಕ್ಕೆ ಅವಕಾಶ ಮಾಡಿಕೊಡುತ್ತದೆ. ರಾಜ್ಯ ಪುರಾತತ್ವ ಇಲಾಖೆಯು ಗ್ರಾಮವಾರು ಪ್ರಾಚ್ಯ ಅವಶೇಷಗಳ ಸರ್ವೇಕ್ಷಣಾ ಕಾರ್ಯದ ಮೂಲಕ 119 ತಾಲೂಕುಗಳನ್ನು ಸರ್ವೆ ನಡೆಸಲಾಗಿದೆ. ಗ್ರಾಮಗಳ ಸರ್ವೆ ಮೂಲಕ ಲಭ್ಯವಿರುವ ಪ್ರಾಚ್ಯ ಅವಶೇಷಗಳನ್ನು ದಾಖಲೀಕರಣಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಮಾತನಾಡಿ ಹಂಪಿಯ ಉತ್ಖನನದಲ್ಲಿ ಇತಿಹಾಸಕಾರರ ಪಾತ್ರ ಮಹತ್ತರವಾದುದು. ಇನ್ನು ಹೆಚ್ಚು ಅಧ್ಯಯನಗಳು ನಡೆಯಲಿ ಎಂದು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿರುಪಾಕ್ಷಿ ಪೂಜಾರಹಳ್ಳಿ ವಿಚಾರ ಸಂಕಿರಣದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಹಂಪಿಯ ಕುರಿತು ಬಹು ಶಿಸ್ತು ಮತ್ತು ಅಂತರ್ ಶಿಸ್ತು ನೆಲೆಯಲ್ಲಿ ಅಧ್ಯಯನಗಳು ನಡೆಯಬೇಕು. ವಿಜಯನಗರ ಕಾಲದಲ್ಲಿ ರಚನೆಯಾದ ಸಾಹಿತ್ಯ ಕೃತಿಗಳನ್ನು ಇತಿಹಾಸ ರಚನೆಯಲ್ಲಿ ಆಕಾರಗಳಾಗಿ ಪರೀಶೀಲಿಸುವ ಮರು ಚಿಂತನೆ ನಡೆಯಬೇಕು. ವಿಜಯನಗರದ ಇತಿಹಾಸದ ಕುರಿತು ಸಂಸ್ಕ್ರತ, ಕನ್ನಡ, ತೆಲುಗು ಭಾಷೆಯಲ್ಲಿ ರಚನೆಯಾದ ಸಾಹಿತ್ಯ ಕೃತಿಗಳನ್ನು ದೇಶದ ವಿವಿಧ ಭಾಷೆಗಳಿಗೆ ಅನುವಾದಗೊಳ್ಳಬೇಕು. ವಿಜಯನಗರವನ್ನು ಆಳಿದ ನಾಲ್ಕು ವಂಶಗಳಲ್ಲಿ ಸಂಗಮ ಮತ್ತು ತುಳು ವಂಶ ಬಿಟ್ಟರೆ ಉಳಿದ ಎರಡು ವಂಶಗಳಾದ ಸಾಳುವ ಮತ್ತು ಅರವೀಡು ಮನೆತನಗಳ ಕುರಿತು ಸಮಗ್ರ ಅಧ್ಯಯನ ನಡೆಸುವ ಯೋಜನೆ ರೂಪಿಸಬೇಕು. ಇನ್ನು ವಾಣಿಜ್ಯದ ನೆಲೆಯಲ್ಲಿ ದೇಶಿ ವ್ಯಾಪಾರ, ವಿದೇಶಿ ವ್ಯಾಪಾರದ ಪುನರ್ ಮೌಲ್ಯೀಕರಣ, ಪುನರ್ ಚಿಂತನೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಇಲಾಖೆಯ ನಿರ್ದೇಶಕರಾದ ಡಾ. ಆರ್ ಶೇಜೇಶ್ವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ಎಸ್. ತಳಕೇರಿ, ಉಪವಿಭಾಗಾಧಿಕಾರಿ ವಿವೇಕ್, ಹೊಸಪೇಟೆಯ ತಹಸಿಲ್ದಾರ ಶೃತಿ ಮತ್ತು ಪ್ರಬಂಧ ಮಂಡಿಸುವ ಇತಿಹಾಸಕಾರರು, ಪ್ರಾಧ್ಯಪಕರು, ಸಂಶೋಧಕರು, ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 