ಕನ್ನಡ ನಾಡಪ್ರಭು ಕೆಂಪೇಗೌಡ ಜಯಂತಿ; ಪಲ್ಸ್‌ ಪೋಲಿಯೊ ಜಾಗೃತಿ ಅಭಿಯಾನ

ಕನ್ನಡ ನಾಡಪ್ರಭು ಕೆಂಪೇಗೌಡ ಜಯಂತಿ; ಪಲ್ಸ್‌ ಪೋಲಿಯೊ ಜಾಗೃತಿ ಅಭಿಯಾನ Kannada Nadaprabhu Kempegowda Jayanti; Pulse Polio Awareness Campaign

ಗುರ್ಲಾಪುರ್ 27 :  ಗುರ್ಲಾಪುರ್ ಗ್ರಾಮದ. ಪಿ.ಎಂ ಶಾಸಕರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಾಡಪ್ರಭು ಕೆಂಪೆಗೌಡರ 517ನೇ ಜಯಂತಿ ಮತ್ತು ಪಲ್ಸ ಪೋಲಿಯೋ ಅಭಿಯಾನ ಜಾಥಾವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಹಿರಿಯ ಶಿಕ್ಷಕರಾದ ಬಿ ವಾಯ ಮೋಮಿನ್ ಅವರು ವಿಜಯನಗರ ಸಾಮ್ರಾಜ್ಯದ ಕಾಲದ ಪಾಳೆಗಾರರಾಗಿದ್ದ ಕೆಂಪೆಗೌಡರು 16ನೇ ಶತಮಾನದಲ್ಲಿ ಬೆಂಗಳೂರು ನಗರಕ್ಕೆ ಭದ್ರ ಅಡಿಪಾಯ ಹಾಕಿದ ಮಹಾನ ಚೇತನ ಎಂದು ಮರೆಯಲಾಗದ ಮಾಣಿಕ್ಯ ಎಂದು ಬಣ್ಣಿಸಿದರು.  

ಸರಕಾರದ ಮಹಾತ್ವಾಕಾಂಕ್ಷೆ ಯೋಜನೆ ಪಲ್ಸ್‌ ಪೋಲಿಯೋ ಗ್ರಾಮದಲ್ಲಿರುವ ಪ್ರತಿಯೊಂದು ಮನೆಗೆ ತೆರಳಿ ಸೊನ್ನೆಯಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಎರಡು ಹನಿ ಡ್ರಾಪ್ ಹಾಕಿಸಲು ತಿಳಿಸಿರಿ. ಶಾಲೆ ಬಿಟ್ಟ ನಂತರ ಎಲ್ಲಾ ಮಕ್ಕಳು ತಮ್ಮ ತಮ್ಮ ಓಣಿಯಲ್ಲಿ ಪ್ರಚಾರ ಮಾಡಲು ತಿಳಿಸಿದರು. ಕಾರ್ಯಕ್ರಮದಲ್ಲಿ ಲಕ್ಷ್ಮಯ್ಯ ಸಾಲಿಮಠ ಕವಿತಾ ಕಟಗಿ ವಿದ್ಯಾಶ್ರೀ ನೇಮ ಗೌಡರ ಶೋಭಾ ಪಾ ಲಭಾವಿ ಜ್ಯೋತಿ ಕಾಳಪ್ಪಗೋಳ ಗಂಗಾ ಮಾತಾ ಕಂಬಾರ ಸವಿತಾ ಮುಧೋಳ ವೈದ್ಯರು ಆಶಾ ಕಾರ್ಯ ಕೃತಿಯರು ಹಾಜರಿದ್ದರು.