ಗಮನ ಸೆಳೆದ ಸಮಗ್ರ ಕರ್ನಾಟಕದ ಮಹತ್ವ ಸಾರುವ ಕನ್ನಡದ ಅಸ್ಮಿತೆ ನೃತ್ಯ ರೂಪಕ
Kannada's Asmite dance metaphor that emphasizes the importance of a holistic Karnataka has attracted
ಗಮನ ಸೆಳೆದ ಸಮಗ್ರ ಕರ್ನಾಟಕದ ಮಹತ್ವ ಸಾರುವ ಕನ್ನಡದ ಅಸ್ಮಿತೆ ನೃತ್ಯ ರೂಪಕ
ಕೊಪ್ಪಳ 02: 70 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜ್ಞಾನಬಂಧು ಕಾಲೇಜಿನ 250 ವಿ ದ್ಯಾರ್ಥಿಗಳು ಸಮಗ್ರ ಕರ್ನಾಟಕದ ಮಹತ್ವ ಸಾರುವ ’ ಕನ್ನಡದ ಅಸ್ಮಿತೆ’ ಎಂಬ ನೃತ್ಯ-ರೂಪಕ- ಕವಾಯತ್ತನ್ನು ಪ್ರದರ್ಶಿಸಿದರು. ಕವಾಯತ್ ನಲ್ಲಿ ಭಾಗಿಯಾದ ರಸಋಷಿ ಕುವೆಂಪು ಅಭಿಮತದ ಕರ್ನಾಟಕದ ಶಾಶ್ವತ ಚಕ್ರವರ್ತಿ ನೃಪತುಂಗ , ಸರಸ್ವತಿಯೇ ರಚಿಸಿದ ನಿತ್ಯ ಸಚಿವ ಮಂಡಲದ ಸಚಿವರಾದ ಆದಿಕವಿ ಪಂಪ, ರನ್ನ, ಜನ್ನ , ಬಸವೇಶ್ವರ, ನಾರಣಪ್ಪ ,ನಾಗವರ್ಮ, ಷಡಕ್ಷರ ,ಸರ್ವಜ್ಞ ಮುಂತಾದವರ ವೇಷಭೂಷಣದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ನೆರೆದವರ ಗಮನ ಸೆಳೆದರು. ಕನ್ನಡ ಅಂಕಿಗಳ ಬಳಕೆ ಕುರಿತ ಸಂದೇಶ, ಕನ್ನಡದ ಮೊದಲುಗಳು, ಕನ್ನಡ ನಾಡಿನ ವಿಶ್ವ ಪಾರಂಪರಿಕ ತಾಣಗಳ ಕುರಿತು ಅರಿವು ಮೂಡಿಸುವ ಕಾಯಕವು ಜರುಗಿತು. ನಿತ್ಯೋತ್ಸವ, ಬಾರಿಸು ಕನ್ನಡ ಡಿಂಡಿಮವ ಮುಂತಾದ ಸಂಯೋಜಿತ ಹಾಡಿಗೆ ನೃತ್ಯ ಮಾಡಿದ ಯಕ್ಷಗಾನ ಹಾಗೂ ಭರತನಾಟ್ಯದ ವಿದ್ಯಾರ್ಥಿನಿಯರಿಗೆ ಮೈದಾನದ ತುಂಬೆಲ್ಲ ಹರ್ಷೋದ್ಘಾರಗಳು ಹೊಮ್ಮಿದವು. ಇಡೀ ಕವಾಯತ್ತಿನಲ್ಲಿ ಬಳಸಿದ ಉಪಕರಣಗಳು ಹಾಗೂ ಕನ್ನಡ ಬಾವುಟಗಳು ಅರಿಶಿಣ ಕುಂಕುಮದ ಧೂಳಿ ಆವರಿಸಿದಂತೆ ಕಣ್ಮನಗಳನ್ನು ಸೆಳೆದವು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಚಿವರಾದ ಶಿವರಾಜ್ ತಂಗಡಗಿ ಹಾಗೂ ಸಂಸದರಾದ ರಾಜಶೇಖರ ಹಿಟ್ನಾಳ ಮುಂತಾದ ಅಧಿಕಾರಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ವಿಶೇಷವೆಂದರೆ ಈ ನೃತ್ಯರೂಪಕ ಕವಾಯತ್ತನ್ನು ಜ್ಞಾನ ಬಂಧು ಕಾಲೇಜಿನ ಉಪನ್ಯಾಸಕ ವರ್ಗವೇ ಸಂಯೋಜಿಸಿದ್ದಾರೆ. ಭಾಗಿಯಾದ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಆಡಳಿತ ಮಂಡಳಿ, ಪಾಲಕ ವರ್ಗ ಅಭಿನಂದನೆಗಳನ್ನು ತಿಳಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 