ಕನಕ ಸಮುದಾಯದ ಭವನ ಲೋಕಾರೆ​‍್ಣ ದ್ವೇಷ ಅಸೂಯೆ ತೊರೆದು ಉತ್ತಮ ಸಮಾಜ ನಿರ್ಮಿಸಿ

ಕನಕ ಸಮುದಾಯದ ಭವನ ಲೋಕಾರೆ​‍್ಣ ದ್ವೇಷ ಅಸೂಯೆ ತೊರೆದು ಉತ್ತಮ ಸಮಾಜ ನಿರ್ಮಿಸಿ Kanaka Community Hall: Let's build a better society by abandoning worldly hatred and jealousy

ಲೋಕದರ್ಶನ ವರದಿ  

ಹೂವಿನಹಡಗಲಿ 30:  ಇಲ್ಲಿ ಸ್ವ-ಪ್ರತಿಷ್ಠೆ ನಡೆದಿಲ್ಲ ಬದಲಾಗಿ ಗುರು ಪ್ರತಿಷ್ಠೆ ನಡೆದಿದ್ದು ಎಲ್ಲರೂದ್ವೇಷ, ಅಸೂಯೆ ಮೆಟ್ಟಿ ನಿಂತು ಎಲ್ಲರೂ ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಬೇಕು  ಎಂದು  ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.ಪಟ್ಟಣದಲ್ಲಿ ಸೋಮವಾರ ಕನಕ  ಸಮುದಾಯ ಭವನ ಲೋಕಾರೆ​‍್ಣ ನೆರವೇರಿಸಿ ಮಾತನಾಡಿದರು.ಕನಕ ಸಮುದಾಯ ಭವನ ಉದ್ಘಾಟನೆಗೆ ರಾಜಕೀಯ ಸ್ವಾರ್ಥ,ಸ್ವ ಪ್ರತಿಷ್ಠೆ ಬಿಟ್ಟು ಮೂರು ದಿನದ ಈ ಬದುಕಿನಲ್ಲಿ ಒಳಿತು ಒಂದೇ ಸಾಧನೆ ಅನಿಸಿಕೊಳ್ಳುತ್ತದೆ. ಪ್ರೀತಿ-ವಿಶ್ವಾಸ, ದಾನ, ಧರ್ಮ  ಸಾರ್ಥಕ ಬದುಕಿಗೆ ಅಗತ್ಯ. ಮನುಷ್ಯನು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.

ಪ್ರಾಣಿಗಳಿಂದ ನಿಸ್ವಾರ್ಥ ತೆ, ಸಮಾಧಾನ ಮತ್ತು ಪ್ರಕೃತಿಯೊಂದಿಗಿನ ಸಾಮರಸ್ಯ ವನ್ನು ಮನುಷ್ಯ ಕಲಿಯಬೇಕು ಎಂದರು.  ಕುರುಬರ ಸಮಾಜದ ಅದ್ಯಕ್ಷ ಹೆಚ್‌.ಬೀರ​‍್ಪ ಅದ್ಯಕ್ಷತೆ ವಹಿಸಿದ್ದರು. ಡಾ.ರಾಕೇಶಯ್ಯ ರಾಮಸ್ವಾಮಿ, ಮಕರಬ್ಬಿ ರೇವಣ ಸಿದ್ದಯ್ಯ ಮಠದ ವಿವೇಕಾನಂದ ಯ್ಯ ಗುರುಮೂರ್ತಿ,ಗುರುವಿನ ಕೊಟ್ರೇಶ,ವಕೀಲರಾದ ಎಂ.ಪರಮೇಶ್ವರ​‍್ಪ,ಗೊರವಪ್ಪ ರಾಮಣ್ಣ, ಪ್ರಮೋದ ಭಟ್ಟರು, ಈಟಿ.ಹನುಮೇಶ,  ಗುರುವಿನ ರಾಜಣ್ಣ,ಪತ್ರಕರ್ತ ಹೆಚ್‌.ವಿಶ್ವನಾಥ,  ಉಪನ್ಯಾಸಕ ಕೆ.ದ್ಯಾಮಜ್ಜ, ಐನಳ್ಳಿ ಮಲ್ಲಣ್ಣ, ಈಟಿ.ಲಿಂಗರಾಜ, ಈಟಿ.ಮಾಲತೇಶ, ಆರ್‌.ವೆಂಕಣ್ಣ ಇದ್ದರು.ನಿವೃತ್ತ ಪ್ರಾಚಾರ್ಯ ಬಿ.ಪ್ರಕಾಶ ಸ್ವಾಗತಿಸಿದರು, ಶಿಕ್ಷಕ ವಿರುಪಣ್ಣ ನಿರೂಪಿಸಿದರು. ಕುರುಬರ ಸಮಾಜದ ರಾಜ್ಯ ನಡುವೆ ನಿರ್ದೇಶಕ ಬಿ.ಹನುಮಂತಪ್ಪ ಪ್ರಾಸ್ತಾವಿಕ. ಮಾತನಾಡಿದರು.