ದೇವರಹಿಪ್ಪರಗಿ ಬರಪೀಡಿತ ಪ್ರದೇಶ ಘೋಷಿಸಿ, ಪ್ಯಾಕೇಜ್ ಘೋಷಣೆಗೆ ಕರವೇ ಆಗ್ರಹ
KaRaVe demands that Devarahipparagi be declared a drought-hit area and a relief package announced
ದೇವರಹಿಪ್ಪರಗಿ 13: ಬರಪೀಡಿತ ತಾಲ್ಲೂಕು ಘೋಷಣೆ ಹಾಗೂ ರೈತರಿಗೆ ವಿಶೇಷ ಪ್ಯಾಕೇಜ್ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರವೇ ತಾಲೂಕು ಸಂಘಟನೆ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರ ಪರವಾಗಿ ಕಂದಾಯ ಶಿರಸ್ತೇದಾರ ಸುರೇಶ ಮ್ಯಾಗೇರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕರವೇ ತಾಲೂಕು ಘಟಕದ ಅಧ್ಯಕ್ಷರಾದ ವಿಜಯಕುಮಾರ ಯಂಬತ್ನಾಳ ಹಾಗೂ ಯುವ ಮುಖಂಡ ಶಿವರಾಜ ತಳವಾರ ಮಾತನಾಡಿ, ‘ಬಹುತೇಕ ಒಣಭೂಮಿ ಪ್ರದೇಶ ಹೊಂದಿರುವ ತಾಲ್ಲೂಕು ಇದಾಗಿದ್ದು, ರೈತರು ಮಳೆ ಆಶ್ರಿತ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಈ ವರ್ಷ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು ರೈತರು ಕಂಗಾಲಾಗಿದ್ದಾರೆ’ ಎಂದರು.
‘ಬಿತ್ತನೆ ಮಾಡಿದ ತೊಗರಿ, ಹತ್ತಿ, ಉಳ್ಳಾಗಡ್ಡಿ, ಕಬ್ಬು, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳು ಒಣಗಿ ಹೋಗಿವೆ. ತೋಟಗಾರಿಕೆ ಬೆಳೆಗಳು ಬೆಳವಣಿಗೆ ಕಾಣದೆ ಕುಂಠಿತಗೊಂಡಿವೆ. ರಾಜ್ಯ ಸರ್ಕಾರ ತಕ್ಷಣ ಬರಪೀಡಿತ ತಾಲೂಕು ಘೋಷಣೆ ಹಾಗೂ ರೈತರಿಗೆ ಪ್ಯಾಕೇಜ್ ಘೋಷಣೆ ಮಾಡಿ ನೆರವಿಗೆ ಬರಬೇಕು, ಕುಡಿಯುವ ನೀರಿಗಾಗಿ ಕಾಲುವೆಗಳಿಗೆ ನೀರು ಹರಿಸಬೇಕು, ಜಾನುವಾರಗಳಿಗೆ ಗೋಶಾಲೆ ಹಾಗೂ ಮೇವು ಬ್ಯಾಂಕ್ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು. ಮುಖಂಡರುಗಳಾದ ರಾಜು ಬಾವಿಮನಿ, ಚಂದ್ರಶೇಖರ ದಾನಗೊಂಡ, ಪ್ರಕಾಶ ಡೋಣೂರಮಠ, ಚೆನ್ನಪ್ಪ ಮಾವಿನಗಿಡದ, ರಘು ಗಂಜಾಳ,ವಿಜು ಪಾಟೀಲ,ಅನೀಲ ಬಿರಾದಾರ, ಬಸು ಅವಟಿ,ಬಸು ಮಸಿಬಿನಾಳ, ಸಿದ್ದು ಪೂಜಾರಿ, ರಾಕೇಶ ದಾನಗೊಂಡ, ಸಿದ್ದು ಅಂಗಡಿ,ಅಂಬ್ರೀಶ ಮಾಶಾನವರ, ಈಶ್ವರ ಬಾಗೇವಾಡಿ,ಅನೀಲ ಜಲಕತ್ತಿ ಸೇರಿದಂತೆ ರೈತರು ಮತ್ತು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.
ಅಂತರರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ 2026ರಲ್ಲಿ ಚಿನ್ನದ ಪದಕಗಳ ಸಾಧನೆ ಮಾಡಿದ ಭಾರತೀಯ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
ಶಾಸಕರ ಆಮಿಷ ಆರೋಪದ ಕಾನೂನು ನೋಟಿಸ್ ಬಳಿಕ ಬಿಜೆಪಿ ನ್ಯಾಯಾಲಯದ ಮೂಲಕ ರಾಜಕೀಯ ಹೋರಾಟ ನಡೆಸುತ್ತಿದೆ ಎಂದು ಒಮರ್ ಅಬ್ದುಲ್ಲಾ ಆರೋಪ
ಮಧುರೈ ಸಮೀಪ ಓಮ್ನಿ ಬಸ್–ಟಿಎನ್ಎಸ್ಟಿಸಿ ಬಸ್ ಮುಖಾಮುಖಿ ಡಿಕ್ಕಿ: ಐವರು ಸಾವು, 42 ಮಂದಿಗೆ ಗಾಯ
ಆರೋಪಿತ ರೌಡಿ ಶೀಟರ್ ಜನ್ಮದಿನಾಚರಣೆಯಲ್ಲಿ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಭಾಗಿ; ಕರ್ನಾಟಕದಲ್ಲಿ ರಾಜಕೀಯ ವಿವಾದ
ಮಾಹಿತಿ ಹಕ್ಕು ಕಾಯ್ದೆ ದುರ್ಬಲಕ್ಕೆ ಯತ್ನ: ಆಯುಕ್ತರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಕಾನೂನು ಹೋರಾಟ, ಗಾಡಾದ ಎಚ್ಚರಿಕೆ
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ 