ಕೆ ಪಿ ಮಗ್ಗೆನವರ್ ಲಕ್ಷ್ಮಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಸ್ಥಾಪನೆಯ ಮಾಡಿದ್ದು ಶ್ಲಾಘನೀಯ

ಕೆ ಪಿ ಮಗ್ಗೆನವರ್ ಲಕ್ಷ್ಮಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಸ್ಥಾಪನೆಯ ಮಾಡಿದ್ದು ಶ್ಲಾಘನೀಯ  KP Maggenavar's establishment of Lakshmi Credit Souharda Cooperative Society is commendable.

ಮಾಂಜರಿ 20: ಸಹಕಾರಿ ತತ್ವ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹಾಯ ಮಾಡುತ್ತದೆ. ಎಲ್ಲ ವರ್ಗದವರನ್ನು ಎತ್ತಿ ಹಿಡಿಯುವಂತಹ ಕೆಲಸವಾಗಿದೆ. ಅಂತಹ ಕೆಲಸವನ್ನು ಮಾಜಿ ಶಾಸಕ ಕಲ್ಲಪ್ಪಣ್ಣ ಮಗ್ಗೆನ್ನವರ್ ಇವರ ನೇತೃತ್ವದಲ್ಲಿ ಸ್ಥಾಪಿಸಿರುವ ಮಾಂಜರಿ ಗ್ರಾಮದ  ಕೆ ಪಿ ಮಗ್ಗೆನವರ್ ಲಕ್ಷ್ಮಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಸ್ಥಾಪನೆಯ ಮೂಲಕ ಮಾಡಿದ್ದು ಶ್ಲಾಘನೀಯ ಎಂದು ಶ್ರೀಶೈಲ್ ಪೀಠದ ಜಗದ್ಗುರುಗಳಾದ ಡಾ. ಚೆನ್ನ ಸಿದ್ದರಾಮ ಪಂಡಿತಾರಾಧ್ಯ  ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.  

ಅವರು ಇಂದು ಮಾಂಜರಿ ಗ್ರಾಮದ ಕೆ ಪಿ ಮಗ್ಗೆನ್ನವರ್ ಲಕ್ಷ್ಮಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ 36ನೆಯ ವಾರ್ಷಿಕ ಸರಸಾಧಾರಣ ಸಭೆ ಮತ್ತು ಸಂಸ್ಥೆಯ ಸಂಸ್ಥಾಪಕರಾದ ಮಾಜಿ ಶಾಸಕ ಕೆ ಪಿ ಮಗ್ಗನ್ನವರ  ಇವರ 78ನೆಯ ಹುಟ್ಟುಹಬ್ಬ ಅಂಗವಾಗಿ ಆಯೋಜಿಸಲಾದ ಸಮಾರಂಭದ  ದಿವ್ಯ ಸಾನಿಧ್ಯ ವಹಿಸಿ  ಆಶಿರ್ವಚನ ನೀಡಿದರು. ದೇಶದಲ್ಲಿ ಸಹಕಾರಿ ಸಂಸ್ಥೆ ಮೊಟ್ಟ ಮೊದಲು ಪ್ರಾರಂಭವಾಗಿರುವದು ಕರ್ನಾಟಕದಲ್ಲಿಯೇ. ಗದಗದ. ಪಾಟೀಲ ಆಮೇಲೆ ರಾಜ್ಯದ ಎಲ್ಲ ಗ್ರಾಮಗಳಲ್ಲಿ ಸಹಕಾರಿ ಸಂಸ್ಥೆಗಳು ಹಾಗೂ ಆರ್ಥಿಕ ಸಂಸ್ಥೆಗಳು   ಪ್ರಾರಂಭವಾಯಿತು.  

ಇವತ್ತು ಸಹಕಾರಿ ಸಂಸ್ಥೆಗಳು ರಾಜ್ಯದಲ್ಲಿಯೇ 1.85 ಲಕ್ಷ ಸಕ್ರಿಯವಾಗಿವೆ. ಭಗವಂತ ನಮಗೆ ಜನ್ಮಕೊಟ್ಟು ಜಗತ್ತಿಗೆ ಕಳುಹಿಸತ್ತಾನಲ್ಲಾ ಅದರಲ್ಲಿಯೇ ಆ ಸಹಕಾರಿ ತತ್ವ ಸಹಕಾರಿ ಸಂದೇಶ ಅಡಗಿದೆ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕೆಂದ ಅವರು, ಮನುಷ್ಯ ಎಡುವಿ ಬಿದ್ದಾಗ ತುರ್ತುಗತಿಯಲ್ಲಿ ಮೊದಲು ಹೋಗುವದು ಕೈಯಾಗಿದೆ. ಇಡೀ ಸಮಾಜ ಒಟ್ಟಾಗಿ ಬದುಕಬೇಕು, ಇಡೀ ಸಮಾಜದ ಒಗ್ಗಟ್ಟು ದೇಶದಲ್ಲಿ ಪ್ರದರ್ಶನವಾಗಬೇಕು. ಈ ದೇಶದ ಐಕ್ಯತೆ ಅಡಗಿದೆ.  

ಭಾರತೀಯ ದೇಶ ವಿವಿಧತೆಯಲ್ಲಿಏಕತೆಯನ್ನು ಕಾಣುವಂತಹದ್ದು. ಇಂದು ಮಾಂಜರಿ ಗ್ರಾಮದ ಈ ಸಂಸ್ಥೆಗಳ 36 ವರ್ಷಗಳನ್ನು  ಆಚರಿಸಿಕೊಳ್ಳುತ್ತಿರುವ  ಸಹಕಾರಿ  ಸಂಘವು ಉತ್ತರೋತ್ತರವಾಗಿ ಬೆಳೆದು ಸಮಾಜದಲ್ಲಿರುವ ಆರ್ಥಿಕ ಸಮಾನತೆಯನ್ನು ಹೋಗಲಾಡಿಸುವ ಕಾರ್ಯ ಮಾಡಬೇಕಾಗಿದೆ ಎಂದು ಜಗದ್ಗುರುಗಳು ಹೇಳಿದರು ಇದೇ ವೇಳೆ ಜಗದ್ಗುರುಗಳಿಂದ ಸಂಸ್ಥೆಯ ಸಂಸ್ಥಾಪಕ ಮಾಜಿ ಶಾಸಕ ಕೆ ಪಿ  ಮಗ್ಗನ್ನವರ್ ಇವರ 78ನೇ ಹುಟ್ಟುಹಬ್ಬದಂಗವಾಗಿ ಅವರನ್ನು ಸನ್ಮಾನಿಸಲಾಯಿತು  

ಸಂಸ್ಥೆಯ ಆರ್ಥಿಕ ವರ್ಷದ ವರದಿಯನ್ನು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಪ್ರದೀಪ್ ಮಗ್ಗನ್ನವರ್ ಮಾತನಾಡಿ ಸದರಿ ಸಂಸ್ಥೆಗೆ ಸುಮಾರು 11.584 ಸದಸ್ಯರನ್ನು ಹೊಂದಿದ್ದು ಶೇರು ಬಂಡವಾಳ 87.17.900.00 ರೂಪಾಯಿ ಇದೆ ನಿಜಗಳು 38 ಕೋಟಿ 81 ಲಕ್ಷ ?ಇದ್ದು ಸಂಸ್ಥೆಯ ನಿರ್ದೇಶಕ ಮಂಡಳಿ ಹಾಗೂ ಕಾರ್ಮಿಕ ವರ್ಗದ ವಿಶ್ವಾಸದ ಮೇರೆಗೆ ಗ್ರಾಹಕರು ಇಂದಿನವರೆಗೆ 334 ಕೋಟಿ 24 ಲಕ್ಷ 24 ಸಾವಿರ ರೂಪಾಯಿ ಠೇವಣಿಯನ್ನು ಸಂಗ್ರಹಿಸಿದೆ ಸದಸ್ಯರಿಗೆ ಸಂಘದಿಂದ ಸುಮಾರು 177 ಕೋಟಿ62 ಲಕ್ಷ 34 ಸಾವಿರ ರೂಪಾಯಿ ಸಾಲವನ್ನು ಹಂಚಲಾಗಿದೆ ಸದರಿ ಸಂಘಕ್ಕೆ ಈ ಆರ್ಥಿಕ ವರ್ಷದಲ್ಲಿ 8 ಕೋಟಿ 78 ಲಕ್ಷ 8 ಸಾವಿರ ರೂಪಾಯಿದು ಸಂಸ್ಥೆಯ ದುಡಿಯುವಬಂಡಳವನ್ನು 382 ಕೋಟಿ70 ಲಕ್ಷ 8 ಸಾವಿರ ರೂಪಾಯಿ ಇದೆ ಎಂದು ಅವರು ಹೇಳಿದರು. 

ಈ ವಾರ್ಷಿಕ್ ಸಭೆಗೆ ತೆಯ ಅಧ್ಯಕ್ಷರಾದ ಸತೀಶ್ ಮಗ್ಗೆನವರ್ ಉಪಾಧ್ಯಕ್ಷರಾದ ಸದಾಶಿವ ಮಿರ್ಜಿ ನಿರ್ದೇಶಕರಾದ ಜಿನ್ನಪ್ಪ ಶಿರ್ಬಾಳೆ ಅಶೋಕ್ ಚುಮಾಯಿ ನೇಮಿನಾಥ್ ಪಟ್ಟಣಕೊಡೆ ಅಪ್ಪಸಾಹೇಬ್ ಜಮದಾಡೇ ಸಂಜೆಯ ಪಾಟೀಲ್ ಸುಭಾಷ್ ಮಗನ್ನವರ್  ಸುರಗೌಡ ಪಾಟೀಲ್ ವಿಲಾಸ್ ಚವಾನ್ ಇಲಿಯಾಸ್ ಮುಲ್ಲಾ ದತ್ತ ಬಾನೆ ಬೆಬಿತಾಯಿ ಕೋಟೆವಾಲೆ ಸರಿತಾ ಮಂಗಸುಳೆ ಹಾಗೂ ಸಂಸ್ಥೆಯ ಶಾಖೆಯ ಸಲಹಾ ಸಮಿತಿಯ ಸದಸ್ಯರು ನಿರ್ದೇಶಕ ಮಂಡಳಿಯ ಸದಸ್ಯರು ಹಾಜರಿದ್ದರು ಸಂಸ್ಥೆಯ ಸಂಸ್ಥಾಪಕರಾದ ಕೆಪಿ ಮಗ್ಗನ್ನವರ್  ಇವರ 78ನೆಯ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಶಿಬಿರ ಶಾಲಾ ಮಕ್ಕಳಿಗೆ ಪರಿಕರ ವಿತರಣೆ ವೃಕ್ಷಾರೋಪನ ಹಾಗೂ ಇನ್ನಿತರ ಹಲವಾರು ಕಾರ್ಯಕ್ರಮಗಳನ್ನು ಮಾಡಲಾಯಿತು.