ಕೆಎಲ್ಈ ಸಂಸ್ಥೆಯ ಉಚಿತ ಆರೋಗ್ಯ ತಪಾಸಣಾ ಶಿಬಿರ
KLE Institute's free health check-up camp
ಮಾಂಜರಿ 16 : ಸರ್ವಸಾಮಾನ್ಯ ಜನರ ಆರೋಗ್ಯ ದೃಷ್ಟಿಯಿಂದ ಕೆಎಲ್ಇ ಸಂಸ್ಥೆಯ ಮುಖಾಂತರ ಆರೋಗ್ಯ ಕ್ಷೇತ್ರದಲ್ಲಿ ಕಹಾನಿಯ ಸಾಧನೆ ಮಾಡಲಾಗಿದೆ ಅದರ ಜೊತೆಗೆ ಗ್ರಾಮೀಣ ಭಾಗದ ಎಲ್ಲ ಜನರ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆಯುವರು ಆರೋಗ್ಯಕ್ಕೆ ಹೆಚ್ಚಿನ ಅಗತ್ಯ ನೀಡುತ್ತಿದ್ದಾರೆ ಎಂದು ಚಿಕ್ಕೋಡಿಯ ಕೆಎಲ್ಈ ಸಂಸ್ಥೆಯ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದ ಡಾ. ಸೂರಜ ಕುಂಬಾರ್ ಹೇಳಿದರು
ಅವರು ಸೋಮವಾರ ರಂದು ಸಮೀಪದ ಕುಸಣಾಳ ಗ್ರಾಮದಲ್ಲಿ ಶಿರಗುಪ್ಪಿ ಗ್ರಾಮದಲ್ಲಿರುವ ಕೆಎಲ್ಇ ಸಂಸ್ಥೆಯ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ವತಿಯಿಂದ ಅಯೋಜಿಸಲಾದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮುಖ್ಯ ಅಧ್ಯಾಯಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪನ್ಯಾಸಕ ಏಕೆ ಜಯಿವೀರ್ ವಹಿಸಿದ್ದರು ಅತಿಥಿಯಾಗಿ ಉಪನ್ಯಾಸಕರಾದ ಬಿಆರ್ ನರವಾಡೇ ಯೋಗಿ ಪರಂಜಬಿ ಎಸ್ಎಸ್ ಕವಲಗುಡ್ಡ ಸಿಬಿ ಕರಿಗಾರ್ ಹಾಜರಿದ್ದರು.
ಈ ವೇಳೆ ಆಯುರ್ವೇದಿಕ್ ಮಹಾವಿದ್ಯಾಲಯದ ಡಾ. ಸೂರಜ ಕುಂಬಾರ್ ಇವರು ಶಿಬಿರಾರ್ಥಿಗಳಿಗೆ ನಶಾಮುಕ್ತ ಭಾರತ ಕುರಿತು ಉಪನ್ಯಾಸ ನೀಡಿದರು. ಈ ವೇಳೆ ಮಹಾವಿದ್ಯಾಲಯದ ಇನ್ನಿತರ ವೈದ್ಯರಿಂದ ಜನರ ಆರೋಗ್ಯ ತಪಾಸಣೆ ನೀಡಿ ಅವರಿಗೆ ಸಲಹೆ ಮತ್ತು ಉಚಿತ ಓಷದ ನೀಡಲಾಯಿತು ಗಾಯತ್ರಿ ಬಡಿಗೇರ್ ಪ್ರಸ್ತಾವಿಕವಾಗಿ ಮಾತನಾಡಿ ರಾಧಿಕಾ ಚಿಂಚಲಿ ನಿರೂಪಿಸಿ ವೀಣಾ ಕೋಳಿ ಸ್ವಾಗತಿಸಿ ಸಾಕ್ಷಿ ಪಾಟೀಲ್ ಹೊಂದಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 