ನಾಳೆ ಬಸವಕಲ್ಯಾಣಕ್ಕೆ ಚಲೋ ಎಲ್ಲಾ ಬಸವ ಭಕ್ತರಿಗೆ ಕೆ ವೀರಣ್ಣ ಲಿಂಗಾಯತ್ ಕರೆ

ನಾಳೆ ಬಸವಕಲ್ಯಾಣಕ್ಕೆ ಚಲೋ ಎಲ್ಲಾ ಬಸವ ಭಕ್ತರಿಗೆ ಕೆ ವೀರಣ್ಣ ಲಿಂಗಾಯತ್ ಕರೆ K Veeranna Lingayat calls on all Basava devotees to come to Basava Kalyana tomorrow

ಕೊಪ್ಪಳ 26: ವಿಶ್ವಗುರು ಬಸವನ ನಾಡು ಬಸವ ಕಲ್ಯಾಣ ದಲ್ಲಿ ದಿನಾಂಕ 28ರ ರವಿವಾರದಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು ಬಸವಕಲ್ಯಾಣಕ್ಕೆ ಚಲೋ ಎಲ್ಲ ಬಸವ ಭಕ್ತರಿಗೆ ಕರೆ ನೀಡಲಾಗಿದೆ ಎಂದು ಬಸವ ಚಿಂತನ ಪ್ರಭೆ ವೇದಿಕೆ ಕೊಪ್ಪಳದ ಅಧ್ಯಕ್ಷರಾದ ಕೆ ವೀರಣ್ಣ ಲಿಂಗಾಯತ್ ರವರು ತಿಳಿಸಿದ್ದಾರೆ, ಅವರು ಶುಕ್ರವಾರ ನಗರದಲ್ಲಿರುವ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಏರಿ​‍್ಡಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ಕುರಿತು ಹೇಳಿಕೆ ನೀಡಿದ ಅವರು ಬಸವ ಕಲ್ಯಾಣದಲ್ಲಿ ಹಿಂದೂ ಸಮಾವೇಶ ಮಾಡಿ ಲಿಂಗಾಯತ್ ಸಮುದಾಯದವರಲ್ಲಿ ತಾರತಮ್ಯ ಉಂಟು ಮಾಡಲು ಹೊರಟ್ಟಿದ್ದವರಿಗೆ ನಿನ್ನೆ ದಿವಸ ಹೈಕೋರ್ಟ್‌ ಆದೇಶ ನಮಗೆ ನಮ್ಮ ವೇದಿಕೆಗೆ ತುಂಬಾ ಸಂತಸ ಉಂಟು ಮಾಡಿದೆ ಸದ್ರಿ ವಿಷಯದ ಸಂಭ್ರಮಾಚರಣೆಯನ್ನು ಹಂಚಿಕೊಳ್ಳಲು ರವಿವಾರದಂದು ಬಸವಕಲ್ಯಾಣಕ್ಕೆ ಚಲೋ ಎಲ್ಲಾ ಬಸವ ಭಕ್ತರಿಗೆ ಕರೆ ನೀಡಲಾಗಿದೆ ಎಲ್ಲರೂ ಸೇರಿ ಸಂಭ್ರಮಿಸೋಣ ಮತ್ತು ಕರ್ತಜ್ಞತೆ ಸಲ್ಲಿಸೋಣ ಎಂದು ವಿವರಿಸಿದರು,

ಮುಂದುವರೆದು ಮಾತನಾಡಿ ನಮ್ಮ ನಡೆ ಬಸವಕಲ್ಯಾಣದ ಕಡೆ ಎನ್ನುವ ಘೋಷ ಹೊತ್ತುಕೊಂಡು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕ ಕೇಂದ್ರಗಳಲ್ಲಿ ಸರಕಾರಕ್ಕೆ ಸಲ್ಲಿಸಿದ ಮನವಿಗಳು ಒಳ್ಳೆಯ ಫಲ ನೀಡಿದೆ ಅದಕ್ಕಾಗಿ ಅವರೆಲ್ಲರಿಗೆ ಕೃತಜ್ಞತೆ ಸಲ್ಲಿಸೋಣ ಈಗಾಗಲೇ ಬಸವಭಕ್ತರು ನಾಡಿನ ಎಲ್ಲಾ ಕಡೆ ಇಂದ ಬಸವ ಕಲ್ಯಾಣಕ್ಕೆ ಬರುತ್ತಿದ್ದಾರೆ ಎಂದು ತಿಳಿಸಿದರು,ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ಮಾಡಲು ಒಳ್ಳೆಯದಲ್ಲ , ಬಸವಾದಿ ಶರಣರು ಸಮಾನತೆ ಸಹೋದರತ್ವ ಮತ್ತು ಮಾನವೀಯ ಸಂದೇಶ ಸಾರಿದ ಬಸವಣ್ಣನವರನ್ನು ಜಾತಿವಾದಿಯನ್ನಾಗಿ ಬಿಂಬಿಸಲು ಹೊರಟಿರುವ ಇಂತಹ ಸಮಾವೇಶ ನಮಗೆ ಬೇಕಿಲ್ಲ ಸಮಾಜ ವಿಭಜಕರನ್ನು ಖಂಡಿಸುತ್ತೇವೆ ಎಂದು ತಿಳಿಸಿದ ಅವರು ಎಲ್ಲಾ ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸಂಭ್ರಮಾಚರಣೆ ಕಾರ್ಯಕ್ರಮ ಯಶಸ್ವಿಗೊಳಿಸಲು ಮತ್ತು ಮಾನವೀಯತೆ ಮೌಲ್ಯ ಎತ್ತಿ ಹಿಡಿಯುವಂತಹ ಕೆಲಸಕ್ಕೆ ಮುಂದಾಗಬೇಕು ಎಂದು ಕೊಪ್ಪಳ ಬಸವ ಚಿಂತನ ಪ್ರಭೇ ವೇದಿಕೆಯ ಅಧ್ಯಕ್ಷ ಕೆ ವೀರಣ್ಣ ಲಿಂಗಾಯತ್ ಮನವಿ ಮಾಡಿಕೊಂಡರು ,ಈ ಸಂದರ್ಭದಲ್ಲಿ ಅವರೊಂದಿಗೆ ವೇದಿಕೆ ಪ್ರಧಾನ ಕಾರ್ಯದರ್ಶಿ ಸತೀಶ್ ಮಂಗಳೂರು ಉಪಸ್ಥಿತರಿದ್ದರು.