ಕೆ. ಎಲ್‌. ಇ ಯ 44 ನೇ ವೈದ್ಯಕೀಯ ಕರ್ಯಾಗಾರ

ಕೆ. ಎಲ್‌. ಇ ಯ 44 ನೇ    ವೈದ್ಯಕೀಯ ಕರ್ಯಾಗಾರ K. L. E.'s 44th Medical Corps

ಬೆಳಗಾವಿ13; ವೈಜ್ಞಾನಿಕವಾಗಿ ವೈದ್ಯಕೀಯ ಸೇವೆಯೊಂದಿಗೆ, ಸುವರ್ಣ ಘಳಿಗೆಯಲ್ಲಿ ಜೀವ ಉಳಿಸುವ ಮಹತ್ಕಾರ್ಯವನ್ನೂ ಅತ್ಯಂತ ಶೀಘ್ರದಲ್ಲಿಯೇ ನೆರವೇರಿಸಬೇಕು. ಅತ್ಯಂತ ಗಂಭೀರ ಪರಿಸ್ಥಿಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸುವ ಮತ್ತು ಮಾರ್ಗಮದ್ಯದಲ್ಲಿಯೇ ಅವಶ್ಯವಿರುವ ಚಿಕಿತ್ಸೆ ನೀಡುತ್ತ ಆಸ್ಪತ್ರೆಗೆ ತಲುಪಿಸುವ ಕಾರ್ಯವಾಗಬೇಕು. ಆದರಲ್ಲಿಯೂ ಮುಖ್ಯವಾಗಿ ಅಫಘಾತದ ಸಂದರ್ಭದಲ್ಲಿ ರಕ್ತಸ್ರಾವ ಅಧಿಕವಾಗಿರುವದರಿಂದ ಸುವರ್ಣ ಘಳಿಗೆಯಲ್ಲಿ ಕಾರ್ಯಪ್ರವೃತ್ತರಾಗುವದು ಬಹಳ ಅವಶ್ಯ. ಏಕೆಂದರೆ ವೈದ್ಯವಿಜ್ಞಾನವು ಬಹಳ ಪ್ರಭಾವಶಾಲಿಯಾಗಿದೆ ಎಂದು ಕೆಎಲ್‌ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ ಆಂಡ ರಿಸರ್ಚನ ಉಪಕುಲಪತಿ ಡಾ. ಸಂದೀಪ ಶ್ರೀವಾತ್ಸವ ಅವರು ಹೇಳಿದರು.  

ಕೆಎಲ್‌ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ್ ಆಂಡ ರಿಸರ್ಚನ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಸೈಂಟಿಫಿಕ್ ಸೊಸಾಯಿಟಿಯ 44ನೇ ವಾರ್ಷಿಕ ಮುಂದುವರೆದ “ವೈದ್ಯಕೀಯ ಶಿಕ್ಷಣ ಗೋಲ್ಡನ್ ಅವರ ಮ್ಯಾಟ್ಟರ್ಸ್‌ ಅಪಡೇಟ್ ಆನ್ ಟ್ರಾಮಾ ಆಂಡ ಎಮರ್ಜೆನ್ಸಿ ಕೇರ್‌” ಕಾರ್ಯಾಗಾರವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಸಂಕೀರ್ಣ ಪರಿಸ್ಥಿತಿಯಲ್ಲಿ ಸುರಕ್ಷಿತವಾಗಿ ತಕ್ಷಣವೇ ಆಸ್ಪತ್ರೆಗೆ ಹೋಗಬೇಕು. ವೈದ್ಯರ ಸೇವಾಕಾರ್ಯ ಅತ್ಯಂತ ಕಠಿಣ. ಸಮಾಜದಲ್ಲಿ ಸುಂದರವಾದ ಬದಲಾವಣೆ ತರುವದು ಬಹಳ ಪ್ರೊತ್ಸಾಹಕಾರಿಯಾಗಿರುತ್ತದೆ. ಸಮಾಜದಲ್ಲಿ ಆರೋಗ್ಯ ರಕ್ಷಣೆ ಬಹಳ ಪರಿಣಾಮಕಾರಿಯಾಗಿರುತ್ತದೆ. ವೈಜ್ಞಾನಿಕ ಚಿಂತನೆಯ ಚಕ್ರವು ಬಹಳ ನಿರ್ಣಾಯಕ ಮತ್ತು ಸೃಜನಶೀಲತೆಯ ಹಂತದಿಂದ ಪ್ರಾರಂಭವಾಗಿ, ಕಲ್ಪನೆ, ವಿಮರ್ಶೆ, ಅಂತಿಮವಾಗಿ ಸಂಶೋಧನೆಗೆ ಪರಿವರ್ತನೆಗೊಂಡು ಪೂರ್ಣ ಚಕ್ರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಶ ಪವಾರ ಅವರು ಮಾತನಾಡಿ, ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಆಗಮಿಸದೇ ಕಾಲಹರಣ ಮಾಡುವದರಿಂದ ಸುವರ್ಣ ಘಳಿಗೆಯು ಕೊನೆಗೊಂಡು ಪ್ರಾಣಹಾನಿಯಾಗುವ ಸಂದರ್ಭ ಅಧಿಕವಾಗಿರುತ್ತದೆ. ಇಂದಿನ ಆಧುನಿಕತೆಯಲ್ಲಿ ಸಮೀಪದ ಆಸ್ಪತ್ರೆ ಹಾಗೂ ಮಾಹಿತಿ ಬೆರಳ ತುದಿಯಲ್ಲಿದೆ. ಆದ್ದರಿಂದ ಪ್ರಾಣಹಾನಿ ತಪ್ಪಿಸಲು ಕೈಜೋಡಸಬೇಕೆಂದ ಅವರು, ವೈದ್ಯರಲ್ಲಿರುವ ಸೃಜಶೀಲತೆಯು ಇನ್ನೊಬ್ಬರಿಗೆ ಮಾದರಿಯಾಗಿದೆ. ಮನುಷ್ಯರಂತೆ ಪ್ರತಿಯೊಂದು ಪ್ರಾಣಿಗಳ ಬಗ್ಗೆಯೂ ಕಾಳಜಿವಹಿಸಬೇಕಾಗಿದೆ. ಪ್ರತಿಯೊಂದು ಜೀವಿಯೂ ಸೃಷ್ಠಿಯಸುವ ಕ್ರಿಯಗಳ ಪ್ರಯೋಜನವನ್ನು ಮಾನವ ಪಡೆಯುತ್ತಾನೆ. ಇದರಿಂದ ವೈಜ್ಞಾನಿಕ ಸಮುದಾಯವು ದೊಡ್ಡದಾಗಿ ಮತ್ತು ಉತ್ತಮವಾಗಿ ಬೆಳೆಯುತ್ತದೆ ಎಂದು ಹೇಳಿದರು.  

ನಂತರ ಬಿ ಎಸ್ ಜೀರಗೆ ದತ್ತಿ ಉಪನ್ಯಾಸ ನೀಡಿದ ಶಸಸ್ತ್ರಪಡೆಯ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರು ಹಾಗೂ ಕಮಾಂಡೆಂಟ ಲೆ. ಜನರಲ್ ಪಂಕಜ ಪಿ ರಾವ್ ಅವರು, ಆಧುನಿಕತೆಯಲ್ಲಿ ಯುದ್ದದ ಮುಖಚರ್ಯೆ ಬದಲಾಗಿದೆ. ಕೇವಲ ಗಡಿಯಲ್ಲಿ ಮಾತ್ರ ಯುದ್ದ ನಡೆಯುವುದಿಲ್ಲ. ಸೈಬರ ದಾಳಿ, ವೈದ್ಯಕೀಯ ವ್ಯವಸ್ಥೆಯ ಮೇಲಿನ ದಾಳಿ, ಅಲ್ಲದೇ ಯಾವುದೋ ಮೂಲೆಯಲ್ಲಿ ಕುಳಿತು ಯುದ್ದ ಮಾಡಲಾಗುತ್ತಿದೆ. ಜನವಸತಿ ಪ್ರದೇಶದಲ್ಲಿ ಬಾಂಬ ದಾಳಿ ಮಾಡುವದರಿಂದ ಸಾವು ನೋವು ಸಾಕಷ್ಟು. ಆಪರೇಶನ್ ಸಿಂದೂರ, ಈಗ ನಡೆಯುತ್ತಿರುವ ಅಮೇರಿಕಾ ಇರಾನ ಯುದ್ದವನ್ನು ನೋಡುತ್ತಿದ್ದೇವೆ. ಆದ್ದರಿಂದಲೇ ಭಾರತೀಯ ಸೇನೆಯು ದೇಶದ ವಿವಿಧ ಪ್ರದೇಶಗಳಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಹಾಸಿಗೆಗಳ ಆಸ್ಪತ್ರೆಯನ್ನು ಹೊಂದಿದ್ದು, ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಲು ಸಕಲ ವ್ಯವಸ್ಥೆಯನ್ನು ಹೊಂದಿದೆ. ಅಲ್ಲದೇ ಎಲ್ಲರೊಂದಿಗೆ ಕೈಜೋಡಿಲಾಗುತ್ತದೆ ಎಂದು ವಿವರಿಸಿದರು.  

 “ಜರ್ನಲ್ ಆಫ್ ಸೈನ್ಟಿಫಿಕ್ ಸೊಸೈಟಿ”ಯ ನೂತನ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಕಾಹೆರನ ಕುಲಸಚಿವರಾದ ಡಾ. ವಿಶ್ವನಾಥ ಪಟ್ಟಣಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ, ಉಪಪ್ರಾಚಾರ್ಯರಾದ ಡಾ. ಶಿವಾನಂದ ಬುಬನಾಳೆ, ಡಾ. ನಯನಾ ಹಾಶೀಲಕರ, ವೈದ್ಯಕೀಯ ಅಧೀಕ್ಷಕರಾದ ಡಾ. ಆರಿಫ್ ಮಾಲ್ದಾಚರಕ, ಸಂಘಟನಾ ಕಾರ್ಯಾಧ್ಯಕ್ಷರು ಹಾಗೂ ಎಲಬು ಕೀಲು ವಿಭಾಗದ ಮುಖ್ಯಸ್ಥರಾದ ಡಾ. ರವಿ ಎಸ್ ಜತ್ತಿ, ಡಾ. ಎಸ್ ವಿ ಉದಪುಡಿ, ಕಾರ್ಯದರ್ಶಿಗಳಾಗಿ ಡಾ. ರಮೇಶ ಕೌಜಲಗಿ, ಡಾ. ಆರತಿ ಭೋಸಲೆ ಉಪಸ್ಥಿತರಿದ್ದರು.