ಗುರುವಿನ ತುಲಾಭಾರ ಭಾರತೀಯ ಸಂಸ್ಕೃತಿಯ ಪ್ರತೀಕ: ಕೊಡೆಕಲ್ಲ ಶ್ರೀಗಳು
Jupiter's Libra Symbol of Indian Culture: Kodekalla Sri
ತಾಳಿಕೋಟೆ 03: ಗುರುವಿಗೆ ಭಕ್ತರು ತುಲಾಭಾರ ಸೇವೆಯನ್ನು ಮಾಡುವುದು ಭಾರತೀಯ ಶ್ರೇಷ್ಠ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಕೊಡೆಕಲ್ಲ ದುರದುಂಡೇಶ್ವರ ಮಠದ ಮ.ನಿ.ಪ್ರ.ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ನಾವದಗಿ ಗ್ರಾಮ ಬ್ರಹನ್ಮಠದ ಷ.ಬ್ರ.ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯ ಮಹಾಸ್ವಾಮಿಗಳ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವ ಅಂಗವಾಗಿ ಲಕ್ಕುಂಡಿ ಗ್ರಾಮದ ಅಪ್ಪಸಾಹೇಬಗೌಡ ಭೀಮನಗೌಡ ಪಾಟೀಲ ಕುಟುಂಬದ ಸದಸ್ಯರು ಹಮ್ಮಿಕೊಂಡ ಪೂಜ್ಯ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯ ಅವರ ತುಲಾಭಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಗುರುವಿಗೆ ತುಲಾಭಾರ ಮಾಡುವುದರ ಮೂಲಕ ನೀವು ನಿಮ್ಮ ಭವದ ಭಾರವನ್ನು ಅವರ ಮೂಲಕ ಇಳಿಸಿಕೊಂಡಿದ್ದೀರಿ ಇಂಥಹ ಪುಣ್ಯದ ಕಾರ್ಯವನ್ನು ಮಾಡಿದಂತಹ ಅಪ್ಪಸಾಹೇಬಗೌಡ ಪಾಟೀಲರಿಗೆ ಅಭಿನಂದಿಸುತ್ತೇನೆ ಎಂದರು. ಸಾಸನೂರ- ತುಂಬಗಿ ಪೂಜ್ಯ ಮಹಾಂತಲಿಂಗ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ದೇವದುರ್ಗದ ಕಪಿಲ ಸಿದ್ದರಾಮ ಶಿವಾಚಾರ್ಯರು, ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಮಹಾಸ್ವಾಮಿಗಳು, ಪರದೇಶಿ ಮಠದ ಶಿವಯೋಗಿ ಶಿವಾಚಾರ್ಯರು, ಕಲ್ಮಠದ ಸಿದ್ದಲಿಂಗ ಶಿವಾಚಾರ್ಯರು, ಮಾತೋಶ್ರೀ ಸಾವಿತ್ರಿ ಅಮ್ಮನವರು, ಡಾ.ಗುರುಲಿಂಗಯ್ಯ ಹಿರೇಮಠ, ಶರಣಗೌಡ ಇಬ್ರಾಹಿಂಪೂರ, ರವಿಧಣ ದೇಶಮುಖ, ಎಸ್.ಎಸ್.ಹಾವರಗಿ, ಪುರಾಣಿಕ ರಾಚಯ್ಯ ಹಿರೇಮಠ ಹಾಗೂ ಗ್ರಾಮದ ಗಣ್ಯರು ಹಿರಿಯರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 