ಜು. 6ರಂದು ಮಳೆ ಮಲ್ಲಪ್ಪ ದೇವಾಲಯದಲ್ಲಿ ವಿಶೇಷ ಪೂಜೆ
Ju. Special pooja at Parma Mallappa temple on 6th
ಹೂವಿನಹಡಗಲಿ, ಜು. 4: ಮಳೆಯಾಗಲೆಂದು ಪ್ರಾರ್ಥಿಸಿ ತಾಲ್ಲೂಕಿನ ಸೋಗಿ ಗ್ರಾಮದ ಪುರಾತನ ಕಲ್ಲೇಶ್ವರ ದೇವಾಲಯದಲ್ಲಿ ಭಕ್ತರು ಐದು ದಿನಗಳ ಕಾಲ ನಿರಂತರ ಜಲಾಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆರಂಭಿಸಿದ್ದಾರೆ. ಗುರುವಾರ ಬೆಳಿಗ್ಗೆ ಬೆಟ್ಟದ ಮಲ್ಲೇಶ್ವರ ಸ್ವಾಮಿಗೆ ಅಭಿಷೇಕ ನೆರವೇರಿಸಿ, ಐದು ಬಿಂದಿಗೆಗಳಲ್ಲಿ ಪಾತಾಳ ಗಂಗೆಯ ನೀರನ್ನು ತರಲಾಯಿತು. ಬಳಿಕ ಗ್ರಾಮದ ಬಸವೇಶ್ವರ, ವೀರಭದ್ರೇಶ್ವರ, ತೇರುಗಡ್ಡೆ ದುರ್ಗಮ್ಮ ಹಾಗೂ ಕರಿಗಲ್ಲು ದೇವತೆಗಳಿಗೆ ಅಭಿಷೇಕ ನಡೆಸಲಾಯಿತು.
ಕಲ್ಲೇಶ್ವರ ದೇವಾಲಯದಲ್ಲಿ ಶಿವಲಿಂಗದ ಮೇಲೆ ಧಾರಾಪಾತ್ರೆ ಕಟ್ಟಿ ನಿರಂತರ ಜಲಾಭಿಷೇಕ ಆರಂಭಿಸಲಾಗಿದ್ದು, ಪ್ರತಿದಿನ ವಿಶೇಷ ಪೂಜೆ ಹಾಗೂ ಭಜನೆಗಳು ನಡೆಯುತ್ತಿವೆ. ಜುಲೈ 6ರಂದು ಗ್ರಾಮದ ಹೊರವಲಯದಲ್ಲಿರುವ ಮಳೆ ಮಲ್ಲಪ್ಪ ದೇವಾಲಯದಲ್ಲಿ ವಿಶೇಷ ಪೂಜೆ, ಅನ್ನಸಂತರೆ್ಣ (ಪರವು) ಹಾಗೂ ಸಂಜೆ ಕಲ್ಲೇಶ್ವರ ದೇವಾಲಯದಲ್ಲಿ ಮಹಾ ಮಂಗಳಾರತಿಯೊಂದಿಗೆ ಮಳೆ ಪೂಜೆ ನೆರವೇರಲಿದೆ. ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗ್ರಾಮದ ಹಿರಿಯರು, ದೇವಸ್ತರು ಹಾಗೂ ಭಕ್ತರು ಭಾಗವಹಿಸಿ ನೇತೃತ್ವ ವಹಿಸಿದ್ದಾರೆ.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 