ಪತ್ರಕರ್ತರ ವರದಿ ಸಮಾಜದ ಕನ್ನಡಿಯಿದ್ದಂತೆ : ಮ್ಯಾಗೇರಿ

ಪತ್ರಕರ್ತರ ವರದಿ ಸಮಾಜದ ಕನ್ನಡಿಯಿದ್ದಂತೆ : ಮ್ಯಾಗೇರಿ Journalists' reports are like a mirror of society: Mageri


ಶಿಗ್ಗಾವಿ 16: ಪತ್ರಕರ್ತರ ವರದಿ ಸಮಾಜದ ಕನ್ನಡಿಯಿದ್ದಂತೆ. ಅವರೂ ಸಹಿತ ಸಂಘಟನೆ ಆದಾಗ ಮಾತ್ರ ಅವರ ಹಕ್ಕುಗಳನ್ನು ಪಡೆಯಲು ಸಾಧ್ಯವಿದೆ ಎಂದು ಭಾರತ ಸೇವಾದಳ ಸಮಿತಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಸರಕಾರಿ ನೌಕರರ ಸಂಘ, ಭಾರತ ಸೇವಾ ದಳ ಹಾಗೂ ತಾಲೂಕು ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು ಪತ್ರಕರ್ತರ ವರದಿ ಜನರ ಸಂವೇದನೆಗಳೊಂದಿಗೆ ಇರುವುದರಿಂದ ಸಮಾಜದಲ್ಲಿನ ಸೂಕ್ತತೆಗಳ ಕುರಿತು ಒಳನೋಟವಿರುತ್ತದೆ. ಈ ಕಾರಣಕ್ಕಾಗಿ ಸಮಾಜದಲ್ಲಿ ಪತ್ರಕರ್ತರ ಜವಾಬ್ದಾರಿ ತುಂಬ ದೊಡ್ಡದು ಎಂದರು. ತಾಲೂಕು ನೌಕರ ಸಂಘದ ಅಧ್ಯಕ್ಷ ಹುಡೇದಗೌಡ್ರ ಮಾತನಾಡಿ ಸರ್ಕಾರ ಲೇಖನಿಗೆ ಬಹುದೊಡ್ಡ ಹೊಣೆ ಇದೆ. ಓರ್ವ ಜವಾಬ್ದಾರಿ ಪತ್ರಕರ್ತ ದೇಶವನ್ನು ಕಾಯುವ ಸೈನಿಕನಿದ್ದಂತೆ.

ಪತ್ರಕರ್ತರ ವರದಿಯಿಂದ ಜನರ ಮನೋಭಾವನೆ, ವಿಚಾರಗಳು ಬದಲಾಗುತ್ತದೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪರಶುರಾಮ ಸತ್ಯಪ್ಪನವರ ಸೇರಿದಂತೆ ತಾಲೂಕ ನೌಕರರ ಸಂಘದ ಖಜಾಂಚಿ ರಮೇಶ ಹರಿಜನ, ಕಾರ್ಯಾಧ್ಯಕ್ಷ ಶಿವಯೋಗಿ ದೋಟಾಲಿ, ಹಡಪದ ಸಮಾಜದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಹಡಪದ, ಪ್ರಕಾಶ ಓಂದಕರ ಮಾತನಾಡಿದರು. ಈ ಸಂದರ್ಭದಲ್ಲಿ ಅನಂದ ಹಿರೇಗೌಡ್ರ, ಸಂಜೀವ ಪೂಜಾರ, ನಾಗರಾಜ ಲಮಾಣಿ, ಮಾರುತಿ ಕುಂದಗೋಳ, ಎಫ್‌.ಸಿ. ಕಾಡಪ್ಪಗೌಡ್ರ, ಬಸವರಾಜ ಹೊಸಪೇಟೆ, ಮಂಜುನಾಥ ಹೊಳೇರ, ಜಾಫರಸಾಬ ಭಾಗವಾನ್, ಸುಭಾಸ್ ಮಸಳಿ, ಬಿ.ವೈ. ಹುಲ್ಮನಿ, ಮಾರುತಿ ಕುಂದಗೋಳ, ಶಿವಾನಂದ ಬಳಿಗೇರಿ, ಕೊಟೇಪ್ಪ ಹಡಪದ, ಈರ​‍್ಪ ಹಡಪದ, ತಿರಕಪ್ಪ ಹಡಪದ, ಮಹಾಂತೇಶ ಹಡಪದ, ವಸಂತ ಹಡಪದ, ಶಿವಪ್ಪ ಹಡಪದ ಸೇರಿದಂತೆ ಇತರರು ಇದ್ದರು.