ಪತ್ರಕರ್ತರ ಕುಂದು ಕೊರತೆ ವಿಚಾರ ಸಂಕೀರ್ಣ: ಸಂಘಟನೆಗಳು ಒಗ್ಗಟಾಗಬೇಕು

ಪತ್ರಕರ್ತರ ಕುಂದು ಕೊರತೆ ವಿಚಾರ ಸಂಕೀರ್ಣ: ಸಂಘಟನೆಗಳು ಒಗ್ಗಟಾಗಬೇಕು Journalists' grievances are a complex issue: Organizations should unite

ಹಾವೇರಿ 14: ಪತ್ರಕರ್ತರಿಗಾಗಿ ನನ್ನ ಜೀವನ ಅರೆ​‍್ಣ ಮಾಡುವುದಾಗಿ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಆಶ್ರಯದಲ್ಲಿ ನಡೆದ ಜಿಲ್ಲಾ ಪತ್ರಕರ್ತರ ಕುಂದು ಕೊರತೆ ವಿಚಾರ ಸಂಕೀರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಪತ್ರಕರ್ತರ ಸಮಸ್ಯೆಗಳಿಗೆ ಸೂಕ್ತ ಸಂದರ್ಭದಲ್ಲಿ ಪರಿಹಾರ ಸಿಗಬೇಕಾದರೆ ಪತ್ರಕರ್ತರ ಸಂಘಟನೆ ರಾಜ್ಯದಲ್ಲಿ ಮತ್ತಷ್ಟು ಗಟ್ಟಿಗೊಳ್ಳಬೇಕಿದೆ. ಕೇವಲ 3 ವರ್ಷದಲ್ಲಿ ರಾಜ್ಯಾದ್ಯಂತ 4 ಸಾವಿರಕ್ಕೂ ಹೆಚ್ಚು ಪತ್ರಕರ್ತರ ಸಂಖ್ಯೆಯನ್ನು ಹೊಂದುವ ಮೂಲಕ ರಾಜ್ಯದಲ್ಲಿ ಅತ್ಯಂತ ವೇಗವಾಗಿ ಮತ್ತು ಬಲಿಷ್ಠವಾಗಿ ಬೆಳೆಯುತ್ತಿರುವ ಸಂಘಟನೆಯಾಗಿದೆ. ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷ ಬಸವಂತಪ್ಪ ಹುಲ್ಲತ್ತಿ  ನೇತೃತ್ವದಲ್ಲಿ 8 ತಾಲೂಕಿನಲ್ಲಿ ಸಂಘಟನೆ ಶಕ್ತಿಯುತವಾಗಿ ಬೆಳೆಯುತ್ತಿರುವುದು ಹರ್ಷದ ಸಂಗತಿಯಾಗಿದೆ ಎಂದರು.ರಾಜ್ಯದ ಪತ್ರಕರ್ತರ ಬೇಡಿಕೆಗಳ ಈಡೇರಿಕೆಗಾಗಿ ನನ್ನ ಜೀವನದಾದ್ಯಂತ ಹೋರಾಟ ಮಾಡುವ ಮೂಲಕ ಪತ್ರಕರ್ತರಿಗೆ ನ್ಯಾಯ ದೊರಕಿಸಿ ಕೊಡಲು ಶ್ರಮಿಸುವುದಾಗಿ ಹೇಳಿದ ಅವರು  ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ಉಚಿತ ಬಸ್ ಪಾಸ್, ಎಲ್ಲಾ ಪತ್ರಕರ್ತರಿಗೆ ಮಾಸಾಶನ ನೀಡುವುದು,ಪತ್ರಕರ್ತರಿಗೆ ಉಚಿತ ಆರೋಗ್ಯ ವಿಮೆ, ಈಗಿರುವ ಪತ್ರಕರ್ತರ  ಮಾಸಾಶನ ಪಡೆಯಲು ವಿಧಿಸಿರುವ ನಿಬಂಧನೆಗಳನ್ನು ಸರಳೀಕರಣಗೊಳಿಸುವುದು ಸೇರಿದಂತೆ ಇತರರ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ಮಾಡುವುದಾಗಿ ತಿಳಿಸಿದರು.ಜಿಲ್ಲಾಧ್ಯಕ್ಷ ಬಸವಂತಪ್ಪ ಹುಲ್ಲತ್ತಿ ಮಾತನಾಡಿ ಜಿಲ್ಲೆಯಲ್ಲಿರುವ  ಪತ್ರಕರ್ತರು ಸಂಘಟನೆಗಳತ್ತ ಹೆಚ್ಚು ಒತ್ತು ನೀಡಬೇಕು. ಜಿಲ್ಲೆಯ ಯಾವುದೇ ಪತ್ರಕರ್ತರಿಗೆ ಯಾವುದೇ ರಂಗ ಅಥವಾ ವ್ಯಕ್ತಿಗಳಿಂದ ಅನ್ಯಾಯ ಅಥವಾ ದಬ್ಬಾಳಿಕೆಯಾದಲ್ಲಿ ಪತ್ರಕರ್ತರ ಬೆನ್ನಿಗೆ ನಿಲ್ಲುವ ಮೂಲಕ ನಿಮ್ಮೊಂದಿಗಿದ್ದು, ನಿಮ್ಮೆಲ್ಲರ ಕೂಗಿಗೆ ಧ್ವನಿಯಾಗುವುದಾಗಿ ಭರವಸೆ  ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಚಂದ್ರಣ್ಣ ಮುಳಗುಂದ,  ಬ್ಯಾಡಗಿ ತಾಲೂಕಾ ಅಧ್ಯಕ್ಷ ಸಂತೋಷ್ ತೊಪ್ಪಲ, ಹಾನಗಲ್ ತಾಲೂಕಾ ಅಧ್ಯಕ್ಷ ಲೋಕೇಶ ಸುಣಗಾರ, ರಾಣೆಬೆನ್ನೂರು ತಾಲೂಕಾ ಅಧ್ಯಕ್ಷ ಬೀರೇಶ ಪೂಜಾರ, ಜಿಲ್ಲಾ ಪದಾಧಿಕಾರಿಗಳಾದ ಲಲೀತಾ, ಪಾಟೀಲ,  ಮಂಜಣ್ಣ ಕಿತ್ತೂರ, ವೀರಭದ್ರಗೌಡ ಹೊಮ್ಮರಡಿ, ಬಸಣ್ಣ ರೇವಡಿಹಾಳ, ಬ್ರಾಹ್ಮಾನಂದ ಉಜ್ಜೇರ ಸೇರಿದಂತೆ ಇತರರಿದ್ದರು.