ಸಮಾಜದ ಓರೆ-ಕೋರೆ ತಿದ್ದುವ ಪತ್ರಿಕೋದ್ಯಮ ಸುಲಭವಲ್ಲ: ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು

ಸಮಾಜದ ಓರೆ-ಕೋರೆ ತಿದ್ದುವ ಪತ್ರಿಕೋದ್ಯಮ ಸುಲಭವಲ್ಲ: ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು  Journalism that corrects the flaws of society is not easy: Siddalinga Rajadeshikendra Shivacharya of

ರಾಣೆಬೆನ್ನೂರು, ಜು.26: ಸಮಾಜದ ಓರೆ-ಕೋರೆಗಳನ್ನು ತಿದ್ದುತ್ತಾ ಜನಜಾಗೃತಿ ಮೂಡಿಸುವ ಪತ್ರಿಕೋದ್ಯಮ ಸುಲಭದ ಕೆಲಸವಲ್ಲ ಎಂದು ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.  ನಗರದ ಚನ್ನೇಶ್ವರ ಮಠದ ಶ್ರೀ ವಾಗೀಶ ಪಂಡಿತರಾಧ್ಯ ಸಭಾಭವನದಲ್ಲಿ ಸ್ಥಳೀಯ ಪತ್ರಿಕೆಯ ಸುವರ್ಣ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ "ಸಮ್ಮಿಲನ" ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.  

ಸಮಾಜದ ನ್ಯೂನತೆಗಳನ್ನು ಸರಿಪಡಿಸುವಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಂತೆ ಪತ್ರಿಕಾರಂಗವೂ ಮಹತ್ವದ ಅಂಗವಾಗಿದೆ. ವಸ್ತುನಿಷ್ಠ, ಪ್ರಾಮಾಣಿಕ ಹಾಗೂ ನೈತಿಕ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಸಮಾಜದಲ್ಲಿನ ಅನ್ಯಾಯಗಳನ್ನು ಬೆಳಕಿಗೆ ತರುವ ಜವಾಬ್ದಾರಿಯನ್ನು ಪತ್ರಿಕೆಗಳು ನಿರಂತರವಾಗಿ ನಿರ್ವಹಿಸುತ್ತಿವೆ ಎಂದು ಹೇಳಿದರು.  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷ ರುದ್ರ​‍್ಪ ಲಮಾಣಿ, "50 ವರ್ಷಗಳ ಹಿಂದೆ ಆರಂಭವಾದ ಈ ಪತ್ರಿಕೆ ಇಂದು ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಆರಂಭಿಕ ದಿನಗಳಲ್ಲಿ ನಾನು ಸಹ ಈ ಪತ್ರಿಕೆಯಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸಿದ್ದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪತ್ರಿಕೆ ಇನ್ನಷ್ಟು ಪ್ರಗತಿ ಸಾಧಿಸಲಿ" ಎಂದು ಹಾರೈಸಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ವಜ್ಞ ವಾರಪತ್ರಿಕೆ ಸಂಪಾದಕ ಎಸ್‌.ಬಿ. ಮಠ ವಹಿಸಿದ್ದರು.  ಈ ಸಂದರ್ಭದಲ್ಲಿ ಲಯನ್ಸ್‌ ಕ್ಲಬ್ ಅಧ್ಯಕ್ಷ ಹಾಗೂ ಉದ್ಯಮಿ ಎಂ.ಎಸ್‌. ಅರಿಕೇರಿ, ಟ್ಯಾಗೋರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಬಿ.ಎಸ್‌. ಕೇಳಗಾರ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಂಜುನಾಥ ಗೌಡ ಶಿವಣ್ಣನವರ, ಐಜಿಎನ್ಯು ಪ್ರಾದೇಶಿಕ ನಿರ್ದೇಶಕ ಡಾ. ಜಿ.ಎಚ್‌. ಇಮ್ರಾಪೂರ, ರೇನ್ಬೋ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ್ ಸಿಟಿ, ತಾಲೂಕು ಜಂಗಮ ಸಮಾಜದ ಅಧ್ಯಕ್ಷ ವಿ.ಎಸ್‌. ಹಿರೇಮಠ, ಡಾಕೇಶ್ ಲಮಾಣಿ, ಪುಟ್ಟರಾಜ ಅಂಗಡಿ ಸೇರಿದಂತೆ ಪತ್ರಿಕೆಯ ಜಾಹೀರಾತುದಾರರು, ಓದುಗರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.