ಜೋಶಿಯವರ ಅನುಧಾನ ವಿಠ್ಠಲಹಿರುಕ್ಮಿಣಿ ದೇವಸ್ಥಾನ ಭವನ
Joshi's Anudhana Vitthalahirukmini Temple Bhavan
ಶಿಗ್ಗಾವಿ 28 : ತಾಲೂಕಿನ ಬಂಕಾಪೂರ ಪಟ್ಟಣದಲ್ಲಿರುವ ಪುರಾತನ ಹಾಗೂ ಆರಾಧ್ಯ ವಿಠ್ಠಲಹಿರುಕ್ಮಿಣಿ ದೇವಸ್ಥಾನಕ್ಕೆ ಸಾಂಸ್ಕೃತಿಕ ಭವನ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸಚಿವ ಶ್ರೀ ಪ್ರಲ್ಹಾದ ಜೋಶಿಯವರ ಎಂ.ಪಿ.ಎಲ್.ಎ.ಡಿ ನಿಧಿಯಿಂದ ರೂ.5 ಲಕ್ಷ ಅನುದಾನದ ಭೂಮಿ ಪೂಜೆಯನ್ನು ಭಾಜಪ ಯುವ ಮುಖಂಡ ಭರತ ಬೊಮ್ಮಾಯಿ ನೇರವೇರಿಸಿ ಮಾತನಾಡಿದ ಅವರು ವಿಠ್ಠಲಹಿರುಕ್ಮಿಣಿ ದೇವರ ಆರಾಧನೆ, ಭಜನೆಹೀಕೀರ್ತನೆ, ಹರಿಕಥೆ, ಪುರಾಣ ಪ್ರವಚನ ಹಾಗೂ ಜಾತ್ರಾ ಮಹೋತ್ಸವ, ಧಾರ್ಮಿಕಹಿಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಈ ಸಾಂಸ್ಕೃತಿಕ ಭವನ ಸಹಕಾರಿಯಾಗಲಿದೆ. ಅಲ್ಲದೇ ಯುವಕರು, ಮಹಿಳಾ ಸಂಘಗಳು ಮತ್ತು ಗ್ರಾಮಸ್ಥರ ವಿವಿಧ ಸಾಮಾಜಿಕ ಚಟುವಟಿಕೆಗಳಿಗೆ ಸಹ ಶಾಶ್ವತ ವೇದಿಕೆ ಸಿಗಲಿದೆ ಎಂದರು.
ವಾ.ಕ.ರ.ಸಾ.ನಿ. ಮಾಜಿ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕ ಭಾಜಪ ಅಧ್ಯಕ್ಷ ವಿಶ್ವನಾಥ ಹರವಿ, ಯುವ ಮುಖಂಡ ನರಹರಿ ಕಟ್ಟಿ, ದೇವಸ್ಥಾನ ಸಮೀತಿ ಅಧ್ಯಕ್ಷ ರಾಮಚಂದ್ರ್ಪ ಪುಕಾಳೆ, ರಮೇಶ ಸುಲಾಖೆ, ಎ???ನ್ ಹೊನಕೇರಿ, ಮುಖಂಡರಾದ ಬಸವರಾಜ ನಾರಾಯಣಪೂರ, ಹೊನ್ನಪ್ಪ ಹೂಗಾರ, ಬೀರ್ಪ ಸಣ್ಣತಮ್ಮಣ್ಣನವರ, ಮಧು ಕುಮಾರ ಜಂಗಳಿ, ನಾಗರಾಜ ಕೋರಿ,ಮಂಜುನಾಥ ಗುಡಗೇರಿ, ಪುರಸಭಾ ಸದಸ್ಯ ರಾಜು ಟೊಪಣ್ಣನವರ, ರಾಜಶೇಖರ ಬಡ್ಡಿ, ಯಲ್ಲಪ್ಪ ಸುಂಕದ, ಶಿವು ಬುದಪ್ಪನವರ ಸೇರಿದಂತೆ ಗ್ರಾಮದ ಹಿರಿಯರು, ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಭಕ್ತ ವೃಂದದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 