‘ನಿರ್ಮಲ ತುಂಗಭದ್ರಾ’ ಅಭಿಯಾನಕ್ಕೆ ಕೈಜೋಡಿಸಿ : ಕೆ.ಎಂ. ಹೇಮಯ್ಯಸ್ವಾಮಿ
Join hands with the 'Nirmala Tungabhadra' campaign: K.M. Hemayyaswamy
ಕಂಪ್ಲಿ 22: ತುಂಗಭದ್ರಾ ಜಲಾಶಯವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಜಲಾಶಯ ಲಕ್ಷಾಂತರ ಜೀವಿಗಳಿಗೆ ಆಸರೆಯಾಗಲಿದೆ. ತುಂಗಭದ್ರಾ ಜಲಾಶಯದ ಉಳಿವಿಗೆ ನಡೆಯುತ್ತಿರುವ ‘ನಿರ್ಮಲ ತುಂಗಭದ್ರಾ’ ಅಭಿಯಾನಕ್ಕೆ ಕೈಜೋಡಿಸಿ, ಪಾಲ್ಗೊಳ್ಳಬೇಕು ಎಂದು ಅಭಿಯಾನದ ಸಂಚಾಲಕ ಕೆ.ಎಂ.ಹೇಮಯ್ಯಸ್ವಾಮಿ ಹೇಳಿದರು. ಪಟ್ಟಣದ ಶ್ರೀಪೇಟೆ ಬಸವೇಶ್ವರ ದೇವಸ್ಥಾನದ ಬಳಿ ಅಭಿಯಾನದ ಅಂಗವಾಗಿ ಎಲ್‌ಇಡಿ ಪರದೆ ಅಳವಡಿಸಿದ 'ನಿರ್ಮಲ ತುಂಗಭದ್ರಾ ಅಭಿಯಾನ’ದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇತ್ತೀಚಿನ ದಿನಮಾನದಲ್ಲಿ ಜಲಾಶಯವು ಘನತ್ಯಾಜ್ಯದಿಂದ ಮಲಿನವಾಗುತ್ತಿದೆ. ಇದರಿಂದ ನದಿ ಪಾತ್ರದ ಜನರಿಗೆ ಅಶುದ್ಧ ನೀರು ಸವಿಯುವಂತಾಗಿದೆ.
ಆದ್ದರಿಂದ ತುಂಗಭದ್ರ ಜಲಾಶಯವನ್ನು ನಿರ್ಮಲವಾಗಿರಿಸಲು ನಾವೆಲ್ಲರೂ ಒಗ್ಗಟ್ಟಿಯೊಂದಿಗೆ ಹೋರಾಡುವ ಅನಿವಾರ್ಯತೆ ಉಂಟಾಗಿದೆ. ಇಂತಹ ಅಭಿಯಾನಕ್ಕೆ ಕೈಜೋಡಿ, ಯಶಸ್ವಿ ಮಾಡಬೇಕೆಂದರು. ದಂತ ವೈದ್ಯ ಭಟ್ಟ ರಾಮು ಮಾತನಾಡಿ, ಪಟ್ಟಣಕ್ಕೆ ಡಿಸೆಂಬರ್ 24ರಂದು ಅಭಿಯಾನ ರಥ ಮತ್ತು 27ರಂದು ಜಾಗೃತಿ ಅಭಿಯಾನ ಬರಲಿದೆ. ಶಾಸಕ ಜೆ.ಎನ್.ಗಣೇಶ ಅವರು ರಥಕ್ಕೆ ಚಾಲನೆ ನೀಡಲಿದ್ದಾರೆ ಎಂದರು. ಪ್ರಚಾರ ವಾಹನದ ಮೂಲಕ ತುಂಗಭದ್ರ ನದಿಯ ವಾಸ್ತವ ಪರಿಸ್ಥಿತಿ ಕುರಿತು ಪ್ರದರ್ಶನ ಪಟ್ಟಣದ ವಿವಿಧಡೆ ಜರಗಿತು. ಈ ಸಂದರ್ಬದಲ್ಲಿ ಸಂಚಾಲಕರಾದ ಬಿ.ವಿ.ಗೌಡ, ಶಿವಕುಮಾರ್ ಮಾಲಿಪಾಟೀಲ್, ಅಗಳಿ ಪಂಪಾಪತಿ, ಇಂದ್ರಜಿತ್ ಸಿಂಗ್, ಕೊಟ್ಟೂರ್ ರಮೇಶ, ಗಡದ ಪ್ರಸಾದ, ಆದೋನಿ ರಂಗಪ್ಪ, ಬಿ.ಎಮ್. ರುದ್ರಯ್ಯ, ಮುಕುಂದಿ ಮಮತಾ, ಕೃಷ್ಣ, ರಾಕೇಶ್ ಬಾಗ್ರೇಚ್, ಇಟಗಿ ವಿರೂಪಾಕ್ಷಿ, ಹಳ್ಳಿ ನಾಗಪ್ಪ, ಕಲ್ಗುಡಿ ನಾಗರತ್ನಮ್ಮ, ಟ.ಗಂಗಣ್ಣ, ಕಲ್ಗುಡಿ ರತ್ನ, ಉಮಾದೇವಿ ಸೇರಿದಂತೆ ಇತರರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 