ಮೊರಬ ಗ್ರಾಮದ ಮೊಹರಂ ಅಂಗವಾಗಿ ಜೋಡೆತ್ತು ಸ್ಪರ್ಧೆ; ವಿಜೇತರಿಗೆ ಬಹುಮಾನ ವಿತರಣೆ

ಮೊರಬ ಗ್ರಾಮದ ಮೊಹರಂ ಅಂಗವಾಗಿ ಜೋಡೆತ್ತು ಸ್ಪರ್ಧೆ; ವಿಜೇತರಿಗೆ ಬಹುಮಾನ ವಿತರಣೆ Jodethu competition as part of Muharram in Moraba village; Prize distribution to winners

ರಾಯಬಾಗ 26 : 4-ಯಾವುದೇ ಜಾತಿ ಮತಗಳ ಭೇದವಿಲ್ಲದೇ ಹಿಂದೂ ಮುಸ್ಲಿಂ ಬಾಂಧವರು ಸಾಮರಸ್ಯದಿಂದ ಮೊಹರಂ ಆಚರಣೆ ಮಾಡುತ್ತಿರುವುದು ನಿಜವಾಗಿಯೂ ಇದು ಭಾವನೆಗಳ ಮಿಲನದ ಹಬ್ಬ ಎಂದು ರಾಜ್ಯ ಯುಥ್ ಕಾಂಗ್ರೆಸ್ಸ ಪ್ರಧಾನ ಕಾರ್ಯದರ್ಶಿ, ಅಫೆಕ್ಸ್‌ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ ಜಾರಕಿಹೊಳಿ ಹೇಳಿದರು.  ತಾಲೂಕಿನ ಮೊರಬ ಗ್ರಾಮದಲ್ಲಿ ಮೊಹರಂ ನಿಮಿತ್ಯ ಏರಿ​‍್ಡಸಲಾದ ಜೋಡು ಎತ್ತಿನ ಗಾಡಿ ಶರ್ಯತ್ತಿನಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ಗ್ರಾಮೀಣ ಸ್ಪರ್ಧೆಗಳು ಗ್ರಾಮೀಣ ಭಾಗದಲ್ಲಿ ಮಾತ್ರ ಕಾಣಸಿಗುತ್ತವೆ. ರೈತರು ತಮ್ಮ ಎತ್ತುಗಳನ್ನು ಮೇಯಿಸಿ ಸ್ಪರ್ಧೆಗೆ ಸಿದ್ಧಪಡಿಸಿ ಜಾತ್ರೆ ಸಂದರ್ಭದಲ್ಲಿ ಎತ್ತುಗಳ ಬಲಾಬಲ ಪ್ರದರ್ಶಿಸುತ್ತಾರೆ.  

ಈ ಒಂದು ಸ್ಪರ್ಧೆ ರೈತರ ಪರಿಶ್ರಮವನ್ನು ತೋರಿಸುತ್ತದೆ ಎಂದರು.  ಸ್ಪರ್ಧೆಯಲ್ಲಿ ಸಂತೋಷ ಲೆಂಡೆ (ಬಡಚಿ) ಪ್ರಥಮ ಬಹುಮಾನ ರೂ.ಒಂದು ಲಕ್ಷ ರಾಹುಲ ಜಾರಕಿಹೊಳಿ ಇವರಿಂದ, ದ್ವಿತೀಯ ಮಹಾವೀರ ಕೋಳಿ (ಚಿಂಚಲಿ) ರೂ. 70 ಸಾವಿರ ರಾಜು ಶಿರಗಾಂವೆ ಹಾಗೂ ಕೇದಾರಿ ಚೌಗುಲಾ ಇವರಿಂದ, ತೃತೀಯ ಶಿವಾನಂದ ಪೂಜಾರಿ (ಆಲಖನೂರ) ರೂ 50 ಸಾವಿರ ವರ್ಧಮಾನ ಪಾಟೀಲ ಹಾಗೂ ನಿಂಗರಾಜ ಪಾಟೀಲ ಇವರಿಂದ, ಚತುರ್ಥ ಬಹುಮಾನ ರಾಹುಲ ದೇಸಾಯಿ (ಕಡಲಗಿ) ರೂ. 30 ಸಾವಿರ ನಾರಾಯಣ ಕೋಳೇಕರ ಇವರು ಕೊಡಮಾಡಿದರು. ವಿಜೇತರು ನಗದು ಬಹುಮಾನ ಹಾಗೂ ಢಾಲ್ ಮತ್ತು ನಿಶಾಲೆ ಪಡೆದುಕೊಂಡರು.  

 ಕಾರ್ಯಕ್ರಮದಲ್ಲಿ ಮಲ್ಲೇಶ ಶಾಂಡಗೆ, ಎಮ್‌.ಬಿ.ಸಾಯಣ್ಣವರ, ನೀಲೇಶ ಪಾಟೀಲ, ರಾಮು ಕಾರತಗೆ, ಮಾಯಪ್ಪ ಕಾರತಗೆ, ಮಾರುತಿ ಪಾಟೀಲ, ರಮೇಶ ಪಾಟೀಲ, ಸಂತೋಷ ಶಾಂಡಗೆ, ವಿಠ್ಠಲ ಮೂಡಲಗಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. 26ರಾಯಬಾಗ4-ತಾಲೂಕಿನ ಮೊರಬ ಗ್ರಾಮದಲ್ಲಿ ಮೊಹರಂ ನಿಮಿತ್ಯ ಏರಿ​‍್ಡಸಲಾದ ಜೋಡೆತ್ತಿನ ಸ್ಪರ್ಧೆಯಲ್ಲಿ ವಿಜೇತರಿಗೆರಾಜ್ಯ ಯುಥ್ ಕಾಂಗ್ರೆಸ್ಸ ಪ್ರಧಾನ ಕಾರ್ಯದರ್ಶಿ, ಅಫೆಕ್ಸ್‌ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ ಜಾರಕಿಹೊಳಿ ಬಹುಮಾನ ವಿತರಿಸಿದರು.