ಕೊಪ್ಪಳದಲ್ಲಿ ಖಾಲಿ ಹುದ್ದೆ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮೀತಿ ಪ್ರತಿಭಟನೆ

ಕೊಪ್ಪಳದಲ್ಲಿ ಖಾಲಿ ಹುದ್ದೆ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮೀತಿ ಪ್ರತಿಭಟನೆ  Job seekers' struggle committee protests in Koppal, demanding filling of vacant posts

ಕೊಪ್ಪಳದಲ್ಲಿ ಖಾಲಿ ಹುದ್ದೆ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮೀತಿ ಪ್ರತಿಭಟನೆ  

ಕೊಪ್ಪಳ  13: ಸಮಿತಿ ನೇತೃತ್ವದಲ್ಲಿ ನಗರದ ಅಶೋಕ ವೃತ್ತದಲ್ಲಿ  ನೂರಾರುಜನ ಉದ್ಯೋಗಾಕಾಂಕ್ಷಿಗಳು ಸೇರಿರಾಜ್ಯ ಮತ್ತುಕೇಂದ್ರ ಸರ್ಕಾರದಲ್ಲಿಖಾಲಿರುವ ಹುದ್ದೆಗಳನ್ನು ಭರ್ತಿ ಮಾಡಲು ಆಗ್ರಹಿಸಿ  ಪ್ರತಿಭಟನೆ  ಮಾಡಿದರು.  

ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿಯ ಮುಖಂಡರಾದ ಸುಭಾನ್ ನೀರಲಗಿಇಂದು ನಿರುದ್ಯೋಗಕ್ಕೆಜನಸಂಖ್ಯೆಯಾಗಲಿ, ಕೌಶಲ್ಯದಕೊರತೆಯಾಗಲಿ  ಕಾರಣವಲ್ಲ. ಇದುಒಂದುದೊಡ್ಡ ಸುಳ್ಳು. ಯುವಕರುಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದಕ್ಕೆ ಮುಖ್ಯಕಾರಣ ನಿರುದ್ಯೋಗಇದಕ್ಕೆ ನೇರ ಹೊಣೆ ಸರ್ಕಾರವೆಎಂದು ಆರೋಪಿಸಿದರು...ಉದ್ಯೋಗಾಕಾಂಕ್ಷಿಯಾದ ಶರಣು ಲಿಂಗದಹಳ್ಳಿ ಮಾತನಾಡಿ ನಾವೆಲ್ಲರೂಒಗ್ಗಟ್ಟಾಗಬೇಕು, ನಮ್ಮ ಹಕ್ಕುಗಳಿಗಾಗಿ ನಾವುಗಳ ಕೇಳದಿದ್ದರೆ ನಮ್ಮಧ್ವನಿ ಸರ್ಕಾರಕ್ಕೆತಲುಪುವುದಾದರೂ ಹೇಗೆ? ಹಾಗಾಗಿ  ನಮ್ಮಒಗ್ಗಟ್ಟು, ನಮ್ಮ ಶಕ್ತಿ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟಕ್ಕೆ ಮುಂದಾಗಬೇಕೆಂದುಕರೆ ನೀಡಿದರು. ಮತ್ತೊಬ್ಬಉದ್ಯೋಗಾಕಾಂಕ್ಷಿಯಾದ ಮಹಾದೇವ ಮಾತನಾಡಿಇಂದು ಸರ್ಕಾರ ನಮಗೆ ನೀಡಬೇಕಾಗಿರುವುದುಉದ್ಯೋಗದಗ್ಯಾರಂಟಿ ಹಾಗಾಗಿ ಕೂಡಲೆ ಸರ್ಕಾರ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿಯುವಕರ  ಸಮಸ್ಯೆಯನ್ನು ಪರಿಹರಿಸಬೇಕುಎಂದು ಒತ್ತಾಯಿಸಿದರು. 

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರರಾದ  ಸೈಯದ್‌ತೌಫಿಕ್ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ವೋಟು ಕೇಳುವಾಗ ಇರುವ ಕಾಳಜಿ, ನಮ್ಮ ಸಮಸ್ಯೆಗಳನ್ನು ಬಗೆಹರಿಸುವಾಗಇರುವುದಿಲ್ಲ ಯುವಕರನ್ನು  ಬೀದಿಗಿಳಿಸಿದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಬಿಸಿಮುಟ್ಟಿಸುವ ಕೆಲಸವನ್ನು  ಮುಂದಿನ ದಿನಗಳಲ್ಲಿ ಯುವಕರು ಮಾಡಬೇಕು. ಸರ್ಕಾರಗಳು ಎಚ್ಚೆತ್ತುಕೊಳ್ಳದಿದ್ದರೆ  ಯುವಕರುಉಗ್ರ ಹೋರಾಟಕ್ಕೆ ಸನ್ನದ್ಧರಾಗಬೇಕುಎಂದುಕರೆ ನೀಡಿದರು.  

ಉದ್ಯೋಗಾಕಾಂಕ್ಷೀಗಳ ಹೋರಾಟ ಸಮಿತಿ ಸದಸ್ಯರಾದ ಕಾಶಿಮ್ ಕೆ.ಎನ್‌. ನಾಗೇಶನಹಳ್ಳಿ ಮಾತನಾಡಿ, ಯುವಜನರಆಕ್ರೋಶ  ಸಿಡಿದೇಳುವ ಮೊದಲೇ  ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಎಂದು ಎಚ್ಚರಿಸಿದರು. ಮತ್ತೊಬ್ಬ ಸದಸ್ಯರಾದ ಶಿವಮೂರ್ತಿ  ವದದಗನಾಳ್ ಮಾತನಾಡಿ,  ನಾವು ಸರ್ಕಾರಗಳನ್ನು ಕೇಳುತ್ತಿರುವುದು ಅವರ ಆಸ್ತಿಯನ್ನಲ್ಲ  ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ. ಧೈರ್ಯದಿಂದ ನಮ್ಮ ಹಕ್ಕುಗಳಿಗಾಗಿ ನಾವೆಲ್ಲರೂಒಗ್ಗಟ್ಟಾಗಿ ಹೋರಾಡೋಣಎಂದರು. ಯುವ ಮುಖಂಡರಾದ  ನಿಂಗೂ ಬೆಣಕಲ್ ಮಾತನಾಡಿರಾಜ್ಯ ಹಾಗೂ ಕೇಂದ್ರ ಸರ್ಕಾರಗಳು  ಯುವಕರಿಗೆ ಸುಳ್ಳು ಭರವಸೆಯನ್ನು ನೀಡಿ  ಮೋಸ ಮಾಡಿವೆ. ಇನ್ನಾದರೂ ಉದ್ಯೋಗಗಳನ್ನು ಭರ್ತಿ ಮಾಡುವ  ಕೆಲಸವನ್ನು ಮಾಡದಿದ್ದರೆ  ಮುಂದಿನ ದಿನಗಳಲ್ಲಿ ಕೊಪ್ಪಳ  ಜಿಲ್ಲಾ ಬಂದ್ ಮಾಡುವ ಹೋರಾಟವನ್ನು ಮಾಡಬೇಕಾಗುತ್ತದೆಎಂದು ಎಚ್ಚರಿಸಿದರು. 

ಮಹಿಳಾ ಮುಖಂಡರಾದ ಶಶಿಕಲಾ  ಹಿರೇ ಸಿಂದೋಗಿ ಮಾತನಾಡಿ, ಮುಂದಿನ ದಿನಗಳಲ್ಲಿ ಸರ್ಕಾರಗಳು ಎಚ್ಚೆತ್ತುಕೊಳ್ಳದಿದ್ದರೆ  ಮಹಿಳೆಯರನ್ನು ಈ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿಕರೆತರುತ್ತೇವೆಎಂದು ಹೇಳಿದರು. ಹೋರಾಟವನ್ನು ಉದ್ದೇಶಿಸಿ ಮಾತನಾಡಿದ  ಎ ಐ ಡಿ ವೈ ಓ ಮುಖಂಡ ಶರಣುಗಡ್ಡಿ, 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ  ಕೇವಲ ಸುಳ್ಳು ಭರವಸೆಗಳನ್ನು ನೀಡಿದೆ.. ವರ್ಷಕ್ಕೆಎರಡುಕೋಟಿಉದ್ಯೋಗ  ಸೃಷ್ಟಿಸುವ ಭರವಸೆಯನ್ನು ನೀಡಿದ್ದು ಸುಳ್ಳಾಗಿದೆ, ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು, ಸಂಸ್ಥೆಗಳನ್ನು  ಖಾಸಗಿ ಅವರಿಗೆ ಮಾರುತ್ತಿದ್ದಾರೆ,  ಕೇಂದ್ರ ಸರ್ಕಾರದಲ್ಲಿ ಖಾಲಿ  ಇರುವ  ಲಕ್ಷಾಂತರ ಹುದ್ದೆಗಳನ್ನು  ಭರ್ತಿ ಮಾಡುವಯಾವುದೇ  ಇಚ್ಛಾ ಶಕ್ತಿ ಇಲ್ಲದಿರುವುದುಅವರ ಶ್ರೀಮಂತಪರ  ಬಡಜನ ವಿರೋಧಿ  ನಿಲುವನ್ನುತೋರಿಸುತ್ತದೆಎಂದು ಆರೋಪಿಸಿದರು.. ಇಡೀದೇಶದ ಸಂಪತ್ತನ್ನು ಕೆಲವೇ ಕೆಲವು ಜನರ ಹಿತಾಸಕ್ತಿಗಾಗಿ  ಬಲಿಕೊಡುತ್ತಿದ್ದಾರೆಎಂದರು. ಉದ್ಯೋಗಾಕಾಂಕ್ಷಿಗಳ  ಹೋರಾಟ ಸಮಿತಿಯಜಿಲ್ಲಾ ಮುಖಂಡರಾದ ಶರಣು ಪಾಟೀಲ್ ಮಾತನಾಡಿ, ಯುವಜನರು  ಸರ್ಕಾರದ ನೀತಿಗಳನ್ನು ಸರಿಯಾಗಿಅರಿಯಬೇಕಾಗಿದೆ, ನಮ್ಮದುಒಂದು ಬಂಡವಾಳಶಾಹಿ ವ್ಯವಸ್ಥೆ, ಈ ವ್ಯವಸ್ಥೆಇರುವುದೇ ಶ್ರೀಮಂತರಿಂದ, ಶ್ರೀಮಂತರಿಗಾಗಿ, ಶ್ರೀಮಂತರಿಗೋಸ್ಕರ. ಎಲ್ಲಾ ಕಾನೂನುಗಳು  ಅವರ ಹಿತಾಸಕ್ತಿಯನ್ನೇಕಾಪಾಡುವಂತೆಇರುತ್ತವೆ. ಆದ್ದರಿಂದ ಬಡತನ ನಿರ್ಗತಿಕತನ, ಹಸಿವು, ಭ್ರಷ್ಟಾಚಾರ, ನಿರುದ್ಯೋಗ, ಆತ್ಮಹತ್ಯೆಗಳು, ದಿನನಿತ್ಯ ಹೆಚ್ಚುತ್ತಿವೆ. ಯುವಜನರು  ಈ ಸಮಸ್ಯೆಗಳ ವಿರುದ್ಧ  ಸರಿಯಾದ ತಿಳುವಳಿಕೆಯನ್ನು  ಪಡೆದುಕೊಂಡು, ಬಲಿಷ್ಠ ಹೋರಾಟಗಳನ್ನು ರೂಪಿಸಬೇಕಾಗುತ್ತದೆ. ನಮ್ಮರಾಜಕೀಯ ಪಕ್ಷಗಳ ನೇತಾರರು ಶ್ರೀಮಂತರ ಅತ್ಯಂತ ನಿಷ್ಠಾವಂತ ಸೇವಕರಾಗಿದ್ದಾರೆ.ಅವರುತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಿಸಿ ಅವರ ಭವಿಷ್ಯವನ್ನುರೂಪಿಸುತ್ತಿದ್ದಾರೆ.ಆದರೇ ಈ ದೇಶದಲ್ಲಿರುವಯುವಕರ ಭವಿಷ್ಯವನ್ನುಸರ್ವನಾಶಮಾಡಿತಮ್ಮ ಸುಖ ಸಲ್ಲಾಪಗಳಲ್ಲಿ ಮಗ್ನರಾಗಿದ್ದಾರೆ, ಇವರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಿಲ್ಲ. ಯುವಜನರ ಮುಂದಿರುವ ಏಕೈಕ ದಾರಿ ಸಂಘಟಿತ ಹೋರಾಟ ಮಾತ್ರ. ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ನಾವು ಪಡೆದುಕೊಳ್ಳಬೇಕು, ಇದಕ್ಕಾಗಿ ನಾವು ಎಲ್ಲಾರೀತಿಯತ್ಯಾಗಕ್ಕೂ ಮುಂದಾಗಬೇಕುಎಂದುಕರೆ ನೀಡಿದರು..ಈ ಸಂದರ್ಭದಲ್ಲಿ , ನಗರಯೋಜನಾ ನಿರ್ದೇಶಕರಾದ  ಮಂಜುನಾಥ್‌ಗುಂಡೂರ್ ಹೋರಾಟದ ಸ್ಥಳಕ್ಕೆ ಆಗಮಿಸಿ  ಜಿಲ್ಲಾಧಿಕಾರಿಗಳ ಪರವಾಗಿ ಮನವಿಯನ್ನು ಸ್ವೀಕರಿಸಿದರು. ಮನವಿ ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಮತ್ತು ಪ್ರಧಾನ ಮಂತ್ರಿಗಳಿಗೆ ಕಳಿಸಲಾಗುವುದೆಂದು ತಿಳಿಸಿದರು.ಉದ್ಯೋಗಾಕಾಂಕ್ಷಿಗಳಾದ  ಬಸವರಾಜ್‌ತಾವರಗೇರಾ, ಶರಣು ಆಗೋಲಿ, ಶಿವಕುಮಾರ್ ಕಂಚಿ, ನಾಗರಾಜ್ ವಿಠಲಾಪುರ್, ಹೊನ್ನೂರ್ ಬೋಚನಹಳ್ಳಿ, ಪ್ರದೀಪ್ ಮಾದಿನೂರು, ಮಾರುತಿ ನಾಗೇಶನ ಹಳ್ಳಿ, ಮೌನೇಶ್ ಮಂಗಳೂರು, ಯಮನೂರ ಚಳ್ಳಾರಿ ಇನ್ನು ಅನೇಕರು ಇದ್ದರು.