ಜಮಖಂಡಿ: ಗುಳ್ಳವ್ವ ಹಬ್ಬ ಆಚರಿಸಿದ ಶಾಲಾ ಮಕ್ಕಳು

    ಜಮಖಂಡಿ: ಗುಳ್ಳವ್ವ ಹಬ್ಬ ಆಚರಿಸಿದ ಶಾಲಾ ಮಕ್ಕಳು  Jamkhandi: School children celebrated the Gullavva festival

ಲೋಕದರ್ಶನ ವರದಿ 

ಜಮಖಂಡಿ  13: ತಾಲ್ಲೂಕಿನ ಮೈಗೂರ್ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಥಮಿಕ ವಿಭಾಗದಲ್ಲಿ ಶಾಲಾ ಮಕ್ಕಳು ಗುಳ್ಳವ್ವ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.  ಕಾರ್ಯಕ್ರಮದಲ್ಲಿ ಕಾಲೇಜು ವಿಭಾಗದ ಹಿರಿಯ ಉಪನ್ಯಾಸಕ ಕೆ.ಬಿ. ಬೆಳಗಲಿ ಮಾತನಾಡಿ, ಆಷಾಢ ಮಾಸದಲ್ಲಿ ಮುಂಗಾರು ಮಳೆ ಹಾಗೂ ಉತ್ತಮ ಬೆಳೆಗಾಗಿ ಆಚರಿಸಲಾಗುವ ಪ್ರಮುಖ ಜಾನಪದ ದೇವತೆ ಗುಳ್ಳವ್ವ ಹಬ್ಬದ ಸಂಪ್ರದಾಯವನ್ನು ಮಕ್ಕಳಲ್ಲಿ ಬೆಳೆಸುವುದು ಅಗತ್ಯ ಎಂದರು.  

ಉತ್ಸವದ ಅಂಗವಾಗಿ ಗ್ರಾಮೀಣ ಹಬ್ಬಗಳ ಮಹತ್ವ ಕುರಿತು ಮಕ್ಕಳಿಗೆ ತಿಳಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಮಕ್ಕಳಿಗಾಗಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿ ಸಿಹಿ ಹಂಚಲಾಯಿತು.  ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಕೆ.ಎಂ. ಕೋಲೂರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಿ.ಎಸ್‌. ಮುಧೋಳ, ಮುಖ್ಯಶಿಕ್ಷಕ ಎಂ.ಡಿ. ತೇಲಸಂಗ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.