ಮನುಕುಲದ ಶಾಂತಿಗೆ ಜೈನ ಧರ್ಮದ ಕೊಡುಗೆ ಅಪಾರ-ಶಿವಣ್ಣನವರ

ಮನುಕುಲದ ಶಾಂತಿಗೆ ಜೈನ ಧರ್ಮದ ಕೊಡುಗೆ ಅಪಾರ-ಶಿವಣ್ಣನವರ Jainism's contribution to the peace of mankind is that of Apar-Shiva

ಬ್ಯಾಡಗಿ 11 : ಬದುಕು, ಬದುಕಲು ಬಿಡು ಎನ್ನುವ ಉದಾತ್ತ ವಿಚಾರವನ್ನು ಹೇಳುವ ಮೂಲಕ ಜೈನ ಧರ್ಮ ಜೈನ ಸಮುದಾಯಕ್ಕಷ್ಟೆ? ಅಲ್ಲದೇ ಇಡೀ ಮನುಕುಲದ ಶಾಂತಿಗೆ ಉತ್ತಮ ಕಾಣಿಕೆ ನೀಡಿದ ಧರ್ಮವಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಸೋಮವಾರ ಅವರು ತಾಲೂಕಿನ ಚಿಕ್ಕಬಾಸೂರ ಗ್ರಾಮದ ಜೈನ ಸಮುದಾಯ ಭವನಕ್ಕೆ 20 ಲಕ್ಷ ರೂ.ಗಳ ಮಂಜೂರಾತಿ  ಆದೇಶ ನೀಡಿದ್ದಕ್ಕಾಗಿ,  ಜೈನ್ ಸಮಾಜದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಎಲ್ಲ ಧರ್ಮಗಳು ಶ್ರೇಷ್ಠವಾಗಿವೆ. ಅದರಲ್ಲೂ ಮಾನವ ಧರ್ಮ ಅತೀ ಶ್ರೇಷ್ಠ ವಾಗಿದೆ. ನಮ್ಮ ಕಾಂಗ್ರೆಸ್ ಸರಕಾರ ಜೈನ ಸಮುದಾಯಕ್ಕೆ ಅಲ್ಪ ಸಂಖ್ಯಾತರ ಸ್ಥಾನ ಮಾನ ನೀಡಿದೆ. ಹಾಗೆ ಜೈನ ಸಮುದಾಯದ ಎಲ್ಲ ಬೇಡಿಕೆಗಳ ಈಡೆರಿಕೆಗೆ ಕ್ರಮ ಕೈಗೊಳ್ಳಲಾಗುವುದು. ಜೈನ ತೀರ್ಥಂಕರರುಅಹಿಂಸಾ ಪರಮಧರ್ಮ ಎಂದು ಸಾರುವ ಮೂಲಕ ಅಹಿಂಸಾ ತತ್ವವನ್ನು ಜಗತ್ತಿಗೆ ಪ್ರತಿಪಾದಿಸಿದರು. ಹಿಂಸೆ ಇಲ್ಲದಿದ್ದರೇ ಅಲ್ಲಿ ಶಾಂತಿ ನೆಲೆಸುತ್ತದೆ ಎನ್ನುವುದು ಈ ತತ್ವದ ಹಿಂದಿನ ಸಂದೇಶ. ಪ್ರಸ್ತುತ ದಿನಗಳಲ್ಲಿ ಜೈನಧರ್ಮದ ಈ ಅಹಿಂಸಾ ತತ್ವದ ಆಚರಣೆ ಅತ್ಯಂತ ಅವಶ್ಯವಾಗಿದೆ.ಜೈನ ಸಮಾಜದಲ್ಲಿ ಅನೇಕ ಸಮಸ್ಯೆಗಳಿವೆ. ಪ್ರಸ್ತುತ ಜೈನ ಸಮಾಜದ ಬೇಡಿಕೆಗಳನ್ನು ಈಡೇರಿಸಲು ಸರಕಾರ ಬದ್ದವಾಗಿದೆ. ಬಹುದಿನಗಳ ಬೇಡಿಕೆಯನ್ನು ಈಡೆರಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.ಸಮಾಜ ಸೇವಕ ರುದ್ರಣ್ಣ ಹೊಂಕಣದ ಮಾತನಾಡಿ ದೇಶದಲ್ಲಿರುವ ಜನಸಂಖ್ಯೆಯಲ್ಲಿ ಕೇವಲ ಶೇ. 1 ಕ್ಕಿಂತ ಕಡಿಮೆ ಇರುವ ಜೈನ ಸಮುದಾಯದ ಜನರು, ಅಲ್ಪಸಂಖ್ಯಾತರರಲ್ಲಿಯೇ ಅಲ್ಪಸಂಖ್ಯಾತರರಾಗಿದ್ದಾರೆ. ಆದರೂ,  ರಾಜ್ಯ ಸರಕಾರ ಜೈನ ಸಮುದಾಯದ ಅಭಿವೃದ್ಧಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ.ಜೈನ ಸಮುದಾಯದ ಜನಸಂಖ್ಯೆ ಕಡಿಮೆ ಇದ್ದರೂ ದೇಶಕ್ಕೆ ಅತೀ ಹೆಚ್ಚು ಆದಾಯ ತೆರಿಗೆ ಕಟ್ಟುತ್ತಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಜೈನ್ ಸಮಾಜದ ಅಧ್ಯಕ್ಷ ಗುಣಪಾಲ ತವನಪ್ಪನವರ, ಜೈನ ಸಮಾಜದ ಮುಖಂಡರಾದ ವೃಷಬೇಂದ್ರ ತವನಪ್ಪನವರ, ಸಂಜೀವ ದುಂಡಸಿ, ರಾಮಚಂದ್ರ ತವನಪ್ಪನವರ, ಪ್ರಕಾಶ ದುಂಡಸಿ, ಅರ್ಜುನ್ ದುಂಡಸಿ, ಪವನಕುಮಾರ್ ತವನಪ್ಪನವರ, ಸಂದೇಶ ತವನಪ್ಪನವರ,ಮಹಾವೀರ ದುಂಡಸಿ ಸೇರಿದಂತೆ ಇತರರಿದ್ದರು.