ಸುಕ್ಷೇತ್ರ ಸ್ಪಟಿಕಲಿಂಗ ಖ್ಯಾತಿಯ ಲಿಂಗದ ಹಳ್ಳಿಯಲ್ಲಿ 26ರಂದು ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ
Jagadguru's palanquin festival to be held on the 26th in the village of the Linga, famous for its Su
ರಾಣೆಬೆನ್ನೂರು 10: ಕನ್ನಡ ನಾಡು ಮತ್ತು ದೇಶದಲ್ಲಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಬಹು ಐತಿಹಾಸಿಕ ಧಾರ್ಮಿಕ ಪರಂಪರೆಯ ಸ್ಪಟಿಕಲಿಂಗು ಖ್ಯಾತಿಯ ಸುಕ್ಷೇತ್ರ ಲಿಂಗದಹಳ್ಳಿ ಗ್ರಾಮದ ರಂಭಾಪುರಿ ಶಾಖಾ ಹಿರೇಮಠದಲ್ಲಿ ಮಾರ್ಚ್ 26ರಂದು ಅಡ್ಡ ಪಲ್ಲಕ್ಕಿ ಮಹೋತ್ಸವ-ಧರ್ಮ ಜಾಗೃತಿ ಧರ್ಮ ಸಮ್ಮೇಳನ ನಡೆಯಲಿದೆ ಎಂದು ಷ. ಬ್ರ. ಡಾ. ಶ್ರೀ ವೀರಭದ್ರ ಶಿವಾಚಾರ್ಯರು ಹೇಳಿದರು. ಅವರು ಮಂಗಳವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ, ಉತ್ಸವ ಪ್ರಚಾರ ಸಾಮಗ್ರಿಗಳ ಪರಿಪತ್ರ ಬಿಡುಗಡೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಕಳೆದ ಫೆಬ್ರುವರಿ 15, 2026 ರಿಂದ ಮಹಾಶಿವರಾತ್ರಿ ನಿಮಿತ್ತ ಸ್ಪಟಿಕ ಶಿವಲಿಂಗಕ್ಕೆ ಹಾಗೂ ಪಚ್ಚೆ ಶಿವಲಿಂಗುಗಳಿಗೆ ರುದ್ರಾಭಿಷೇಕ, ಲಕ್ಷ ಬಿಲ್ವಾರ್ಚನೆ, ಪುಷ್ಪಾಚನೆ ನಡೆದು, 27 ರಂದು ಚೌಡೇಶ್ವರಿ ದೇವಿಗೆ ಉಡಿ ತುಂಬಿಸಲಾಯಿತು. ಮಾರ್ಚ್ 1,2026 ರಂದು ಜಗದ್ಗುರು ರೇಣುಕಾಚಾರ್ಯರ ಜಯಂತಿ, ಶಿವ ದೀಕ್ಷಾ, ರಥೋತ್ಸವ,ಗುಗ್ಗಳೋತ್ಸವ ಮಹಾಪ್ರಸಾದ ವಿಚಾರಿಸಲಾಯಿತು.
ಮಾರ್ಚ2,2026 ರಂದು ವಿದ್ಯುತ್ ಇಲಾಖೆಯಲ್ಲಿ ತಾವು,( ಆರ್. ಸಿ. ಹಿರೇಮಠದ) 40 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ನಾಡಿನ ಅಭಿಮಾನಿಗಳ ಮತ್ತು ಭಕ್ತರ ಸದೀಚ್ಛೆಯಂತೆ ಅಂದು ಶಿವಾಚಾರ್ಯರ ಅಭಿನಂದನಾ ಸಮಾರಂಭ ಜರುಗಲಿದೆ ಎಂದರು. ಗುರುವಾರ ಮಧ್ಯಾಹ್ನ 3 ಗಂಟೆಗೆ ಪಂಚಪೀಠಾಧೀಶ್ವರರಾದ ರಂಭಾಪುರಿ ಡಾ. ಶಿ ವೀರಸೋಮೇಶ್ವರ ಶಿವಾಚಾರ್ಯರು, ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ಶೈಲ ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯರು, ಕಾಶಿ ಡಾ.ಚಂದ್ರಶೇಖರ ಶಿವಾಚಾರ್ಯರು, ಮತ್ತು ಕಾಶಿ ನೂತನ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ ಅಡ್ಡ ಪಲ್ಲಕ್ಕಿ ನಂತರ ಧರ್ಮಸಭೆ ನಡೆಯಲಿದೆ ಎಂದು ವಿವರಿಸಿದರು.
ಮಾರ್ಚ್ 27ರಂದು ಶುಕ್ರವಾರ ಸೂರ್ಯೋದಯ ಕಾಲ ಪಂಚಪೀಠಾಧೀಶ್ವರರ ದಿವ್ಯ ಸಾನಿಧ್ಯದಲ್ಲಿ ಲಿಂಗದಹಳ್ಳಿ ಡಾ. ವೀರಭದ್ರ ಶಿವಾಚಾರ್ಯರ ಷಷ್ಟಬ್ದಿ ನಿಮಿತ್ತ ಕನಕಾಭಿಷೇಕ, ಮಂಗಲ ಸ್ನಾನ, ಗುರು ಪರಂಪರೆ ಶಿವಾಚಾರ್ಯರ ಮತ್ತು ವಿರಕ್ತ ಪರಂಪರೆಯ ನಿರಂಜನ ಮಹಾಸ್ವಾಮಿಗಳ ಮಂಟಪ ಪೂಜೆ, 11,, ಗಂಟೆಗೆ ರಂಭಾಪುರಿ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಮಹಾ ಧರ್ಮ ಸಭೆ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ಜರುಗಲಿದೆ ಎಂದರು.
ಸಮಾರಂಭದಲ್ಲಿ ಕೇಂದ್ರದ ಸಂಸದರು, ರಾಜ್ಯ ಸಚಿವರು ಮತ್ತು ಶಾಸಕರು ಮಾಜಿ ಶಾಸಕರು, ಜಿ.ಪಂ. ತಾ. ಪಂ. ಗ್ರಾಪಂ, ಮತ್ತು ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಳ್ಳುವರು. ಎಂದರು. ಮಾಧ್ಯಮಗೋಷ್ಠಿಯಲ್ಲಿ. ರವೀಂದ್ರ ಗೌಡ ಪಾಟೀಲ, ಹನುಮಂತಪ್ಪ ಕಬ್ಬಾರ, ಕೊಟ್ರೇಶಪ್ಪ ಎಮ್ಮಿ, ವಿ. ಎಸ್. ಹಿರೇಮಠ, ಎನ್. ಜಿ. ಕುಂದಾಪುರ, ಪಿ. ವ್ಹಿ.ಮಠದ, ನಾಗನಗೌಡ ನೀರಲಗಿ, ಪಂಚಾಕ್ಷರಯ್ಯ ಮುದುಗಲಮಠ, ವೀರಗೌಡ ಪಾಟೀಲ ಸೇರಿದಂತೆ ಮತ್ತಿತರ ಗಣ್ಯರು, ಪ್ರಚಾರ ಸಮಿತಿ ಸದಸ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 